Wednesday, 19 October 2016
Tuesday, 4 October 2016
Saturday, 24 September 2016
IAS /KAS ಮುಖ್ಯಪರೀಕ್ಷೆಯಲ್ಲಿ ಪ್ರಚಲಿತ ಘಟನೆಗಳ ಕುರಿತು ತುಂಬಾ ಪ್ರಶ್ನೆಗಳಿರುತ್ತವೆ.
ಅವುಗಳ ಕುರಿತು ನಮಗೆ ಆಳವಾದ ಮತ್ತು ವಿಶ್ಲೇಷಣಾತ್ಮಕ ಜ್ಞಾನ ಇರಬೇಕು. ಇಂಗ್ಲಿಷ್ ಮಾಧ್ಯಮದವರಿಗೆ ಈ ನಿಟ್ಟಿನಲ್ಲಿ ಸಹಾಯ ಮಾಡಲು ಹಲವಾರು ಪುಸ್ತಕಗಳು,
magazines ,Hindu newspaper , ಬಹಳಷ್ಟು Websites ಇವೆ. ಕನ್ನಡದಲ್ಲಿ ಇದರ ಕೊರತೆ ಇದೆ.ಆ ನಿಟ್ಟಿನಲ್ಲಿ ಕನ್ನಡದ ಅಭ್ಯರ್ಥಿಗಳಿಗೆ ಸಹಾಯವಾಗುವ ಕೆಲವು ಪತ್ರಿಕೆಗಳು,
Websites ,Facebook Pages ಇವೆ.
ಕನ್ನಡ ಮಾಧ್ಯಮದಲ್ಲಿ IAS ಮತ್ತು KAS ಗೆ serious effort ಮಾಡುತ್ತಿರುವ ಅಭ್ಯರ್ಥಿಗಳು ಅವನ್ನು refer ಮಾಡೋದು ಒಳ್ಳೆಯದು.
1. Prajavani ,Vijay Karnataka and Vijayavani editorial pages
2. Digital Kannada online magazine/ Facebook page
3. Spardhachaitra monthly
4. Hosathu monthly/ epaper
5.Kanaja Website
6. Times Kannada website
ಇವುಗಳ ಓದು ಪಿಎಸ್ಐ ದಂತಹ ಪರೀಕ್ಷೆಗಳಲ್ಲಿ ಪ್ರಬಂಧ ಬರೆಯಲೂ ಸಹಾಯವಾಗಬಹುದು.
Saturday, 18 June 2016
Thursday, 16 June 2016
Thursday, 9 June 2016
Friday, 20 May 2016
Tuesday, 17 May 2016
Tuesday, 5 April 2016
ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಗ್ರೂಪ್ "ಸಿ" ತಾಂತ್ರಿಕೇತರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಪತ್ರಿಕೆಗಳು ವಸ್ತುನಿಷ್ಠ ಬಹು ಆಯ್ಕೆ ಮಾದರಿಯಲ್ಲಿದ್ದು , ಋಣಾತ್ಮಕ ಮೌಲ್ಯಮಾಪನವಿರುತ್ತದೆ.ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ ಕಳೆಯಲಾಗುವುದು.ಮೊದಲನೇ ಪತ್ರಿಕೆಯು ಸಾಮಾನ್ಯ ಜ್ಞಾನ ಕುರಿತಾಗಿದ್ದು , 100 ಪ್ರಶ್ನೆಗಳು,ಪ್ರತಿ ಪ್ರಶ್ನೆಗೆ ಒಂದು ಅಂಕ.ಒಂದೂವರೆ ಗಂಟೆ ಅವಧಿಯದ್ದಾಗಿರುತ್ತದೆ. ಎರಡನೇ ಪತ್ರಿಕೆಯಲ್ಲಿ 100 ಪ್ರಶ್ನೆಗಳಿದ್ದು , ಪ್ರತಿ ಪ್ರಶ್ನೆಗೆ ಒಂದು ಅಂಕವಿರುತ್ತದೆ. ಎರಡು ಗಂಟೆ ಅವಧಿಯದ್ದಾಗಿರುತ್ತದೆ. ಎರಡನೇ ಪತ್ರಿಕೆಯು ಮೂರು ಭಾಗಗಳನ್ನು ಒಳಗೊಂಡಿದೆ.
ಸಾಮಾನ್ಯ ಕನ್ನಡ (35 ಅಂಕಗಳು) , ಸಾಮಾನ್ಯ ಇಂಗ್ಲಿಷ್ (35 ಅಂಕಗಳು) ಮತ್ತು ಗಣಕಯಂತ್ರ ಜ್ಞಾನ (30 ಅಂಕಗಳು).
ಪ್ರಥಮ ಪತ್ರಿಕೆಯಲ್ಲಿ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ. ಈ ಪತ್ರಿಕೆಗೆ ಓದಬೇಕಾದ ಪುಸ್ತಕಗಳು:
* ಪ್ರಚಲಿತ ಘಟನೆಗಳಿಗಾಗಿ ಪ್ರತಿದಿನ ದಿನಪತ್ರಿಕೆಗಳನ್ನು ಓದಿ,ಆಯಾ ದಿನದ ಮುಖ್ಯ ಸಂಗತಿಗಳನ್ನು ಬರೆದಿಟ್ಟುಕೊಳ್ಳುವುದು.ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಒಂದೆರಡು ಮಾಸಪತ್ರಿಕೆಗಳನ್ನು ಓದುವುದು.
* ಸಾಮಾನ್ಯ ವಿಜ್ಞಾನ ಕ್ಕಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಜ್ಞಾನ ಪುಸ್ತಕಗಳನ್ನು,, SMV ಗೋಲ್ಡ್ ಪ್ರಕಾಶನದ 'ಸಾಮಾನ್ಯ ವಿಜ್ಞಾನ' ಪುಸ್ತಕವನ್ನು ಬಾಲರಾಜು ಅವರ 'ತಂತ್ರಜ್ಞಾನ' ಪುಸ್ತಕ ಓದಬೇಕು.
*ಪರಿಸರ ಸಂಬಂಧಿತ ವಿಷಯಕ್ಕೆ ರಂಗನಾಥ್ ಅವರ 'ಪರಿಸರ ಅಧ್ಯಯನ' ಪುಸ್ತಕ
* ಭೂಗೋಳಶಾಸ್ತ್ರಕ್ಕಾಗಿ ರಂಗನಾಥ್ ಅವರ ಪುಸ್ತಕಗಳು
* ಭಾರತೀಯ ಸಮಾಜದ ಅಧ್ಯಯನಕ್ಕೆ ಚ.ನ.ಶಂಕರರಾವ್ ಅವರ 'ಭಾರತೀಯ ಸಮಾಜ' ಪುಸ್ತಕ
* ಭಾರತದ ಇತಿಹಾಸ - ಕೆ. ಸದಾಶಿವ ಅವರ ಪುಸ್ತಕ
*ಕರ್ನಾಟಕದ ಇತಿಹಾಸ - ಫಾಲಾಕ್ಷ ಅವರ ಪುಸ್ತಕ
*ಸಾಮಾನ್ಯ ಮನೋಸಾಮರ್ಥ್ಯ ವಿಷಯದ ಅಭ್ಯಾಸಕ್ಕಾಗಿ
ಗುರುರಾಜ ಬುಲಬುಲೆ ಅವರ ಮಾನಸಿಕ ಸಾಮರ್ಥ್ಯ ಪುಸ್ತಕ ಮತ್ತು ಸ್ಪರ್ಧಾಚೈತ್ರದ ಪ್ರಕಾಶನದ ಮನೋಸಾಮರ್ಥ್ಯ ಪುಸ್ತಕ
* ಕರ್ನಾಟಕದ ಆರ್ಥಿಕತೆ ಕುರಿತು ತಿಳಿಯಲು ನೇ.ತಿ.ಸೋಮಶೇಖರ್ ಬರೆದಿರುವ ಪುಸ್ತಕ ಮತ್ತು ರಾಜ್ಯ ಸರ್ಕಾರದ 'ಕರ್ನಾಟಕ ಆರ್ಥಿಕ ಸಮೀಕ್ಷೆ' ಯನ್ನು ಓದಬೇಕು.
* ಭಾರತದ ಸಂವಿಧಾನ ಮತ್ತು ರಾಜಕೀಯದ ಅಧ್ಯಯನಕ್ಕೆ ಪಿ.ಎಸ್. ಗಂಗಾಧರ್ ಅವರ ಪುಸ್ತಕ
* ಭಾರತದ ಆರ್ಥಿಕ ವ್ಯವಸ್ಥೆ ಕುರಿತಾಗಿ – ಹೆಚ್ಆರ್ಕೆ
ಅವರ ಪುಸ್ತಕ ಮತ್ತುಅರ್ಥಶಾಸ್ತ್ರದ ಕುರಿತಾದ ಸ್ಪರ್ಧಾಚೈತ್ರದ ಪುಸ್ತಕಗಳು
*ಗ್ರಾಮೀಣಾಭಿವೃದ್ಧಿ ಕುರಿತು ಹೆಚ್.ಆರ್.ಕೃಷ್ಣಯ್ಯಗೌಡ ಅವರ ಪುಸ್ತಕ ಮತ್ತು ರಾಜ್ಯ ಸರ್ಕಾರದ 'ಕರ್ನಾಟಕ ವಿಕಾಸ' ಮಾಸಪತ್ರಿಕೆಯನ್ನು ಓದಬೇಕು.
* ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಬಹಳ ವಿಷಯಗಳನ್ನು.ಪಠ್ಯಕ್ರಮದಲ್ಲಿ ಅಳವಡಿಸಿರುವುದರಿಂದ ರಾಜ್ಯ ಗೆಜೆಟಿಯರ್ ಇಲಾಖೆಯ 'ಕರ್ನಾಟಕ ಕೈಪಿಡಿ' ಓದುವುದು ಒಳ್ಳೆಯದು.
ಎರಡನೇ ಪತ್ರಿಕೆಗೆ ಓದಬೇಕಾದ ಪುಸ್ತಕಗಳು:
1. ಸಾಮಾನ್ಯ ಕನ್ನಡ:
* ಕನ್ನಡ ಮಧ್ಯಮ ವ್ಯಾಕರಣ - ತೀ.ನಂ.ಶ್ರೀಕಂಠಯ್ಯ
* ಸಮಗ್ರ ಹೊಸಗನ್ನಡ ವ್ಯಾಕರಣ -ಆರ್.ಎಸ್.ಅರಳಗುಪ್ಪಿ
2.ಸಾಮಾನ್ಯ ಇಂಗ್ಲಿಷ್
* Highschool Grammer and Composition-
Wren and Martin
* General English - ಮಾಲಿ ಮದ್ದಣ್ಣ
3. ಗಣಕಯಂತ್ರ ಜ್ಞಾನ(Computer Knowledge):
* ಕಂಪ್ಯೂಟರ್ ಅನ್ವಯಗಳು - ಪ್ರೊ.ಶಾರದಾ ಭಟ್ ಮತ್ತು ಪ್ರೊ.ಜಯಕರ ಭಂಡಾರಿ
ಈ ಭಾಗಕ್ಕೆ 'ಕಂಪ್ಯೂಟರ್ ಅನ್ವಯಗಳು' ಹೆಸರಿನ ಇತರೆ ಯಾವುದೇ ಪುಸ್ತಕಗಳನ್ನು ಓದಬಹುದು. ಈ ಭಾಗದ ಪ್ರಶ್ನೆಗಳಿಗೆ ಉತ್ತರಿಸಲು ಕಂಪ್ಯೂಟರ್ ನ Practical Knowledge ಇರುವುದು ಅಗತ್ಯ.
Tuesday, 15 March 2016
Monday, 14 March 2016
Wednesday, 27 January 2016
Saturday, 16 January 2016
"ರಾಜಕೀಯ ಪದ್ಧತಿ"(Polity) ವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಮುಖ ವಿಷಯವಾಗಿದೆ.ಕನ್ನಡ ಮಾಧ್ಯಮದವರು objective ಅಥವಾ ವಿವರಣಾತ್ಮಕ ಪ್ರಶ್ನೆಗಳಿಗೆ ಉತ್ತರಿಸಲು ಕೆಳಗಿನ ಪುಸ್ತಕಗಳಿಂದ ನೋಟ್ಸ್ ಮಾಡಿಕೊಳ್ಳುವುದು.
*ಭಾರತದ ಸಂವಿಧಾನ ಮತ್ತು ರಾಜಕೀಯ- ಪಿ.ಎಸ್.ಗಂಗಾಧರ
*ಭಾರತದ ಸಂವಿಧಾನ ಮತ್ತು ರಾಜಕೀಯ- ಎಚ್.ಎಂ.ರಾಜಶೇಖರ
*ಭಾರತದ ಸಂವಿಧಾನ ಮತ್ತು ರಾಜಕೀಯ-ಮೇರುನಂದನ್
*ಭಾರತದ ಸಂವಿಧಾನ - ಭಾರತ ಸರ್ಕಾರದ ಪುಸ್ತಕ
*ರಾಜ್ಯ ಸರ್ಕಾರದ ಪಿಯು ಪ್ರಥಮ ಮತ್ತು ದ್ವೀತಿಯ ವರ್ಷದ ರಾಜ್ಯಶಾಸ್ತ್ರ ಪುಸ್ತಕಗಳು
ಜೊತೆಗೆ ಪ್ರಚಲಿತ ಸಂವಿಧಾನಾತ್ಮಕ ಬೆಳವಣಿಗೆಗಳನ್ನು update ಮಾಡಿಕೊಳ್ಳುವುದು
ಆರ್ಥಿಕತೆ(Economy)ಯು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಮುಖ ವಿಷಯವಾಗಿದೆ.ಕನ್ನಡ ಮಾಧ್ಯಮದವರು objective ಅಥವಾ ವಿವರಣಾತ್ಮಕ ಪ್ರಶ್ನೆಗಳಿಗೆ ಉತ್ತರಿಸಲು ಕೆಳಗಿನ ಪುಸ್ತಕಗಳಿಂದ ನೋಟ್ಸ್ ಮಾಡಿಕೊಳ್ಳುವುದು.
1.ಭಾರತದ ಆರ್ಥಿಕ ವ್ಯವಸ್ಥೆ - ಹೆಚ್.ಆರ್.ಕೆ
2.ಭಾರತದ ಆರ್ಥಿಕ ವ್ಯವಸ್ಥೆ - ಸ್ಪರ್ಧಾಚೈತ್ರ ಪ್ರಕಾಶನದ ಪುಸ್ತಕಗಳು
3.ಕರ್ನಾಟಕದ ಆರ್ಥಿಕ ವ್ಯವಸ್ಥೆ -ನೇ.ತಿ.ಸೋಮಶೇಖರ
4.ಗ್ರಾಮೀಣಾಭಿವೃದ್ಧಿ- ಹೆಚ್.ಆರ್.ಕೃಷ್ಣಯ್ಯಗೌಡ
5.ಗ್ರಾಮೀಣಾಭಿವೃದ್ಧಿ - ಕೆ.ಭೈರಪ್ಪ
6.ಕರ್ನಾಟಕದ ಆರ್ಥಿಕ ಸಮೀಕ್ಷೆ
7.ಅಂತರರಾಷ್ಟ್ರೀಯ ಅರ್ಥಶಾಸ್ತ್ರ - ಹೆಚ್.ಆರ್.ಕೃಷ್ಣಯ್ಯಗೌಡ
8.ಭಾರತದ ಪ್ರಾದೇಶಿಕ ಮತ್ತು ಆರ್ಥಿಕ ಭೂಗೋಳಶಾಸ್ತ್ರ - ರಂಗನಾಥ್
9.ರಾಜ್ಯ ಸರ್ಕಾರದಿಂದ ಪ್ರಕಟಿತ ಪಿಯುಸಿ ಕನ್ನಡ ಮಾಧ್ಯಮದ ಅರ್ಥಶಾಸ್ತ್ರ ಪುಸ್ತಕಗಳು
ಭೂಗೋಳಶಾಸ್ತ್ರವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಮುಖ ವಿಷಯವಾಗಿದೆ.ಕನ್ನಡ ಮಾಧ್ಯಮದವರು objective ಅಥವಾ ವಿವರಣಾತ್ಮಕ ಪ್ರಶ್ನೆಗಳಿಗೆ ಉತ್ತರಿಸಲು ಕೆಳಗಿನ ಪುಸ್ತಕಗಳಿಂದ ನೋಟ್ಸ್ ಮಾಡಿಕೊಳ್ಳುವುದು.
ಡಾ.ರಂಗನಾಥ್ ಅವರ
*ಪ್ರಪಂಚದ ಭೂಗೋಳಶಾಸ್ತ್ರ
*ಭಾರತದ ಭೂಗೋಳಶಾಸ್ತ್ರ
*ಕರ್ನಾಟಕದ ಭೂಗೋಳಶಾಸ್ತ್ರ
*ಭಾರತದ ಆರ್ಥಿಕ ಮತ್ತು ಪ್ರಾಕೃತಿಕ ಭೂಗೋಳಶಾಸ್ತ್ರ
*ಪ್ರಾಕೃತಿಕ ಭೂಗೋಳಶಾಸ್ತ್ರದ ಮೂಲತತ್ವಗಳು
ಕರ್ನಾಟಕದ ಭೂಗೋಳಶಾಸ್ತ್ರಕ್ಕೆ ಪಿ.ಮಲ್ಲಪ್ಪ ಅವರ ಪುಸ್ತಕ ಮತ್ತು ಕರ್ನಾಟಕ ಕೈಪಿಡಿಯನ್ನೂ ಗಮನಿಸಬಹುದು.
Thursday, 14 January 2016
"ಇತಿಹಾಸ" ವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಮುಖ ವಿಷಯವಾಗಿದೆ.ಕನ್ನಡ ಮಾಧ್ಯಮದವರು objective ಅಥವಾ ವಿವರಣಾತ್ಮಕ ಪ್ರಶ್ನೆಗಳಿಗೆ ಉತ್ತರಿಸಲು ಕೆಳಗಿನ ಪುಸ್ತಕಗಳಿಂದ ನೋಟ್ಸ್ ಮಾಡಿಕೊಳ್ಳುವುದು.
*ಭಾರತದ ಇತಿಹಾಸ - ಸದಾಶಿವ
*ಭಾರತದ ಇತಿಹಾಸ - ಟಿ.ಜಿ.ಚಂದ್ರಶೇಖರಪ್ಪ
*ಆಧುನಿಕ ಭಾರತದ ಇತಿಹಾಸ - ಬಿಪಿನ್ ಚಂದ್ರ
*ಸ್ವಾತಂತ್ರ್ಯದ ಹೋರಾಟ - ಬಿಪಿನ್ ಚಂದ್ರ
*ಸ್ವಾತಂತ್ರ್ಯಗಂಗೆಯ ಸಾವಿರ ತೊರೆಗಳು - ಶಂಕರನಾರಾಯಣರಾವ್
*ಕರ್ನಾಟಕದ ಇತಿಹಾಸ - ಕಾಮತ್
*ಕರ್ನಾಟಕದ ಇತಿಹಾಸ - ಫಾಲಾಕ್ಷ
*ಕರ್ನಾಟಕ ಕೈಪಿಡಿ ಮತ್ತು
ಕರ್ನಾಟಕದ ಸಂಗಾತಿ- ಕರ್ನಾಟಕ ಸರಕಾರದ ಪ್ರಕಟಣೆಗಳು
*ಕರ್ನಾಟಕ ಸಾಂಸ್ಕೃತಿಕ ಸಮೀಕ್ಷೆ - ತಿಪ್ಪೇರುದ್ರಸ್ವಾಮಿ
Sunday, 10 January 2016
ಕನ್ನಡ ಮಾಧ್ಯಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ವಿಜ್ಞಾನ ವಿಷಯದ ಉತ್ತಮ ಪುಸ್ತಕಗಳು ಲಭ್ಯವಿಲ್ಲ ಎಂಬ ಅಭಿಪ್ರಾಯವಿದೆ.ಅದು ನಿಜ ಕೂಡ.
Objective type ಮತ್ತು ವಿವರಣಾತ್ಮಕ ಪರೀಕ್ಷೆಗಳಿಗೆ ಉತ್ತರ ಬರೆಯಲು ಸಧ್ಯ ಕನ್ನಡದಲ್ಲಿ ಲಭ್ಯವಿರುವ ವಿಜ್ಞಾನ ಪುಸ್ತಕಗಳು:
*ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಜ್ಞಾನ ಪುಸ್ತಕಗಳು
*ಸಾಮಾನ್ಯ ವಿಜ್ಞಾನ - SMV ಗೋಲ್ಡ್
*ಸಾಮಾನ್ಯ ವಿಜ್ಞಾನ-ಸ್ಪರ್ಧಾಚೈತ್ರ
*ಸಾಮಾನ್ಯ ವಿಜ್ಞಾನ -ಕೆ.ಎಂ.ಸುರೇಶ್
*ವಿಜ್ಞಾನ ಮತ್ತು ತಂತ್ರಜ್ಞಾನ- ಹರಿಪ್ರಸಾದ್
*ತಂತ್ರಜ್ಞಾನ - ಬಾಲರಾಜು
*ಪರಿಸರ ಅಧ್ಯಯನ- ರಂಗನಾಥ್
*ಪ್ರಾಕೃತಿಕ ಭೂಗೋಳಶಾಸ್ತ್ರ- ರಂಗನಾಥ್
*ಪರಿಸರ ಅಧ್ಯಯನ - ಭೈರಪ್ಪ
*ನವಕರ್ನಾಟಕ ಪ್ರಕಾಶನದ ವಿಜ್ಞಾನ ಪುಸ್ತಕಗಳು
ಪ್ರಚಲಿತ ಘಟನೆಗಳಿಗಾಗಿ ಕನ್ನಡ ಮಾಧ್ಯಮದವರು ಪ್ರತಿದಿನ ಪ್ರಜಾವಾಣಿ,ವಿಜಯ ಕರ್ನಾಟಕ ಪತ್ರಿಕೆಗಳನ್ನು ಓದಿ,ಒಂದು ನೋಟ್ ಬುಕ್ಕಿನಲ್ಲಿ ಆಯಾ ದಿನದ ಮುಖ್ಯ ಸಂಗತಿಗಳನ್ನು ಬರೆದಿಡಬೇಕು.ಬರೆಯುವಾಗ ರಾಷ್ಟ್ರೀಯ,ಅಂತರರಾಷ್ಟ್ರೀಯ,ರಾಜ್ಯ,ಆರ್ಥಿಕ ,ಕ್ರೀಡೆ,ಪ್ರಶಸ್ತಿ -ಎಂಬ ಶೀರ್ಷಿಕೆಗಳ ಅಡಿಯಲ್ಲಿ ನೋಟ್ಸ್ ಮಾಡಿಕೊಳ್ಳಬೇಕು.ಕನ್ನಡ ಮಾಧ್ಯಮದವರಾಗಿದ್ದರೂ ಪ್ರತಿದಿನ "ಹಿಂದು"ಪತ್ರಿಕೆ ಓದಿ ನೋಟ್ಸ್ ಮಾಡುವುದು ಒಳ್ಳೆಯದು.
ಇನ್ನು,ಪ್ರಜಾವಾಣಿ,ವಿಜಯ ಕರ್ನಾಟಕ ಪತ್ರಿಕೆಯ ಪ್ರಚಲಿತ ಘಟನೆಗಳ ಕುರಿತಾದ ಸಂಪಾದಕೀಯ ಪುಟಗಳ ಲೇಖನಗಳು ಮತ್ತು ಇತರೆ ಸುದ್ದಿ ಲೇಖನಗಳಲ್ಲಿನ ಪ್ರಮುಖ ಅಂಶಗಳನ್ನು ಬರೆದಿಟ್ಟುಕೊಂಡರೆ,ಆ ವಿಷಯದ ಕುರಿತಾದ objective type ಮತ್ತು ವಿವರಣಾತ್ಮಕ ಪ್ರಶ್ನೆಗಳಿಗೆ ಉತ್ತರಿಸಲು ಸಹಾಯವಾಗುತ್ತದೆ.ಜೊತೆಗೆ ಆ ಲೇಖನಗಳನ್ನು ಕಟ್ ಮಾಡಿ ಸಹ ಇಟ್ಟುಕೊಳ್ಳಬಹುದು. ವಿಜಯವಾಣಿ ಪತ್ರಿಕೆಯಲ್ಲಿಯೂ ಸಂಪಾದಕೀಯ ಪುಟಗಳಲ್ಲಿನ ಮತ್ತು ಇತರೆ ಲೇಖನಗಳು ಚೆನ್ನಾಗಿರುತ್ತವೆ.ಹಿಂದು ಪತ್ರಿಕೆಯ ಲೇಖನಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಬರೆದುಕೊಳ್ಳಬಹುದು.