Sunday, 10 January 2016

ಪ್ರಚಲಿತ ಘಟನೆಗಳಿಗಾಗಿ ಕನ್ನಡ ಮಾಧ್ಯಮದವರು ಪ್ರತಿದಿನ ಪ್ರಜಾವಾಣಿ,ವಿಜಯ ಕರ್ನಾಟಕ ಪತ್ರಿಕೆಗಳನ್ನು ಓದಿ,ಒಂದು ನೋಟ್ ಬುಕ್ಕಿನಲ್ಲಿ ಆಯಾ ದಿನದ ಮುಖ್ಯ ಸಂಗತಿಗಳನ್ನು ಬರೆದಿಡಬೇಕು.ಬರೆಯುವಾಗ ರಾಷ್ಟ್ರೀಯ,ಅಂತರರಾಷ್ಟ್ರೀಯ,ರಾಜ್ಯ,ಆರ್ಥಿಕ ,ಕ್ರೀಡೆ,ಪ್ರಶಸ್ತಿ -ಎಂಬ ಶೀರ್ಷಿಕೆಗಳ ಅಡಿಯಲ್ಲಿ ನೋಟ್ಸ್ ಮಾಡಿಕೊಳ್ಳಬೇಕು.ಕನ್ನಡ ಮಾಧ್ಯಮದವರಾಗಿದ್ದರೂ ಪ್ರತಿದಿನ "ಹಿಂದು"ಪತ್ರಿಕೆ ಓದಿ ನೋಟ್ಸ್ ಮಾಡುವುದು ಒಳ್ಳೆಯದು.
ಇನ್ನು,ಪ್ರಜಾವಾಣಿ,ವಿಜಯ ಕರ್ನಾಟಕ ಪತ್ರಿಕೆಯ  ಪ್ರಚಲಿತ ಘಟನೆಗಳ ಕುರಿತಾದ ಸಂಪಾದಕೀಯ ಪುಟಗಳ ಲೇಖನಗಳು ಮತ್ತು ಇತರೆ ಸುದ್ದಿ ಲೇಖನಗಳಲ್ಲಿನ ಪ್ರಮುಖ ಅಂಶಗಳನ್ನು ಬರೆದಿಟ್ಟುಕೊಂಡರೆ,ಆ ವಿಷಯದ ಕುರಿತಾದ objective type ಮತ್ತು ವಿವರಣಾತ್ಮಕ ಪ್ರಶ್ನೆಗಳಿಗೆ ಉತ್ತರಿಸಲು ಸಹಾಯವಾಗುತ್ತದೆ.ಜೊತೆಗೆ ಆ ಲೇಖನಗಳನ್ನು ಕಟ್ ಮಾಡಿ ಸಹ  ಇಟ್ಟುಕೊಳ್ಳಬಹುದು. ವಿಜಯವಾಣಿ ಪತ್ರಿಕೆಯಲ್ಲಿಯೂ ಸಂಪಾದಕೀಯ ಪುಟಗಳಲ್ಲಿನ ಮತ್ತು ಇತರೆ ಲೇಖನಗಳು ಚೆನ್ನಾಗಿರುತ್ತವೆ.ಹಿಂದು ಪತ್ರಿಕೆಯ ಲೇಖನಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಬರೆದುಕೊಳ್ಳಬಹುದು.

No comments:

Post a Comment