ಅಬಕಾರಿ ನಿರೀಕ್ಷಕರ ಪರೀಕ್ಷೆ ಉಳಿದ 50 ಪ್ರಶ್ನೆಗಳ ಕೀ ಉತ್ತರಗಳು:
51) ಭೂಮಿಯ ಒಳಭಾಗದ ಯಾವ
ಪದರವು ಸ್ನಿಗ್ಧ ಸ್ಥಿತಿಯಲ್ಲಿದೆ?
ಉ:- ಆಸ್ತನೋಸ್ಪಿಯರ್
52) ಕೆಳಕಂಡ ಯಾವ ನದಿಯಯ ಪಕ್ಷಿಪಾದದ ಡೆಲ್ಟಾವನ್ನು ರೂಪಿಸಿದೆ?
ಉ:- ಮಿಸಿಸಿಪ್ಪಿ
53) ವೆಗೆನೆರ್ ನು ದಿಕ್ ಚ್ಯುತಿ
ಸಿದ್ಧಾಂತವನ್ನು ಮುಖ್ಯವಾಗಿ ಈ ಕೆಳಕಂಡ ಅಂಶವನ್ನು ವಿವರಿಸಲು
ಪ್ರತಿಪಾದಿಸಿದ
ಉ:-ಭೂರೂಪಗಳ ವಿತರಣೆ
54) ಕೀಲ್ ಕಾಲುವೆಯು ಈ
ಕೆಳಗಿನವುಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಉ:- ಬಾಲ್ಟಿಕ್ ಸಮುದ್ರ ಹಾಗೂ ನಾರ್ತ್ ಸೀ
55) ವಾತಾವರಣದ ಶಾಖ ಎರಿಕೆ
ಹೇಗೆ ನಡೆಯುತ್ತದೆ?
ಉ:- ಭೂಮಿಯ ವಿಕಿರಣದಿಂದ
56) ಕೊಟೋಪಾಕ್ಷಿ ಇರುವುದೆಲ್ಲಿ?
ಉ:- ಈಕ್ವೆಡಾರ್
57) ಪದರ ಕಳುಚುವಿಕೆ (Exfoliation) ಯು ಒಂದು
ಉ:- ರಾಸಾಯನಿಕ ಪ್ರಕ್ರಿಯೆ
58) ಚಿಕ್ಕದಾದ ಮಳೆಹನಿಗಳು ದುಂಡನೆಯ ಆಕಾರದಲ್ಲಿರುವುದಕ್ಕೆ ಕಾರಣ
ಉ:- ಮೇಲ್ಮೈ ಕರ್ಷಣ
59) ಅಂತರರಾಷ್ಟ್ರೀಯ ಖಗೋಳ ಶಾಸ್ತ್ರೀಯ ಸಂಘ (IAU) ವು ಗ್ರಹಗಳನ್ನು ಕುರಿತಂತೆ
ನೀಡಿರುವ
ಇತ್ತೀಚಿನ ವ್ಯಾಖ್ಯಾನದ
ಪ್ರಕಾರ, ಈ ಕೆಳಗಿನದು ಗ್ರಹ ಎನಿಸಿಕೊಳ್ಳುವುದಿಲ್ಲ.
ಉ:- ಪ್ಲೂಟೊ
60) UHF ಪಟ್ಟಯ ಅವರ್ತಾಂಕ
ವ್ಯಾಪ್ತಿ ಎಷ್ಟು?
ಉ:- 300 ರಿಂದ 3000 ಮೆಗಾಹರ್ಟ್ಜ್
61) ಡೀಸೆಲ್ ಇಂಜಿನ್ನಿನಲ್ಲಿ ಈ ಕೆಳಗಿನವುಗಳು ಬಳಕೆಯಾಗುತ್ತವೆ.
ಉ:-ಸಿಲಿಂಡರ್ ಮತ್ತು ಪಿಸ್ಟನ್,
62) ಸಿಸ್ಟ್ಯೆಟಿಸ್ ಎಂಬ ಸೋಂಕು ಯಾವ ಅಂಗಕ್ಕೆ ಸಂಬಂಧಿಸಿದೆ?
ಉ:-ಮೂತ್ರಕೋಶ
63) ವಿಶ್ವ ಅರಣ್ಯ ದಿನವನ್ನು ಆಚರಿಸಲಾಗುವ ದಿನಾಂಕ ಯಾವುದು?
ಉ:- 21 ನೇ ಮಾರ್ಚ್
64) ಪಟಾಕಿಗಳಿಗೆ ಕೆಳಕಂಡ ಧಾತುಗಳ ಲವಣ ಗಳಿಂದ ಒಣ್ಣವನ್ನು ನೀಡಲಾಗುತ್ತದೆ.
ಉ:- ಸ್ಟ್ರಾನ್ಯಿಯಂ ಮತ್ತು ಬೇರಿಯಂ
65) ಕೊಳಚೆ ನೀರಿನ ಸಂಸ್ಕರನ ವ್ಯವಸ್ಥೆಗಳಲ್ಲಿ ನೀರನ್ನು ಕ್ರಿಮಿಶುದ್ಧಗೊಳಿಸುವುದಕ್ಕಾಗಿ
ಯಾವ ಎರಡು
ಅನಿಲಗಳ ಬಳಕೆಯಾಗುತ್ತದೆ?
ಉ:- ಒಜೋನ್ ಮತ್ತು ಜಲಜನಕ
ಉ:- ಒಜೋನ್ ಮತ್ತು ಜಲಜನಕ
66) ಗ್ರಾಫೀನ್ ಎಂಬುದು ನ್ಯಾನೊ ತಂತ್ರಜ್ಞಾನದ ುತ್ಪನ್ನವಾಗಿದೆ. ಇದರ
ಮಹತ್ವವೇನು?
ಉ:- ಇದು ಅತ್ಯಂತ ತೆಳುವಾದ, ಬಲವಾದ ಎರಡು ಆಯಾಮಗಳ ವಸ್ತುಗಳಲ್ಲೊಂದಾಗಿದೆ.
67) ಒಂದು ಯಂತ್ರವು 0,1,2,3,4,5 ಎಂಬುದನ್ನು ಅನುಕ್ರಮವಾಗಿ 0,1,10,11,100,101 ಎಮಬುದಾಗಿ
ವಾಚಿಸಿದರೆ 7 ಎಂಬುದರ
ವಚನಾಂಕ ಯಾವುದು?
ಉ:-1001
68) ಒಂದು ಸಮಭುಜೀಯ ತ್ರಿಕೋನದ ಪಾರ್ಶ್ವವನ್ನು ಅಷ್ಟೇ ಎತ್ತರದ ಇನ್ನೊಂದು
ಸಮಭುಜೀಯ
ತ್ರಿಕೋನದ ಪಾರ್ಶ್ವಕ್ಕೆ
ಅಂಟಿಸಿದರೆ ಯಾವ ಆಕಾರ ಸಿಗುತ್ತದೆ?
ಉ:-ಸಮಾಂತರ ಚತುರ್ಭುಜ
69) ದ್ಯುತಿ ಎಳೆಯು ಕೆಳಕಂಡ ತತ್ವದನ್ವಯ ಕಾರ್ಯ ನಿರ್ವಹಿಸುತ್ತದೆ.
ಉ:-ಸಂಪೂರ್ಣ ಅಂತರಿಕ ಪ್ರತಿಫಲನ
70) ಒಂದು ಪೂರ್ಣ ಸಂಖ್ಯೆ
ಹಾಗೂ ಅದರ ಅನಂತರದ ಸಂಖ್ಯೆಯ ಮೊತ್ತವನ್ನು ಇನ್ನುಂದು
ಪೂರ್ಣಸಂಕ್ಯೆ ಹಾಗೂ
ಅದರ ಅನಂತರದ ಸಂಖ್ಯೆಯ ಮೊತ್ತಕ್ಕೆ ಕೂಡಿಸಿದಾಗ ಬರುವ ಮೊತ್ತ 368
ಆಗಿದೆ. ಕೂಡುವಿಕೆಯ
ಬದಲು ಕಳೆಯುವಿಕೆ ಮಾಡಿದರೆ ಬರುವ ವ್ಯತ್ಯಾಸ 78 ಹಾಗಿದ್ದರೆ ಈ
ಸಂಖ್ಯೆಗಳು ಯಾವುವು?
ಉ:- 72 ಮತ್ತು 111
71)
7,13,23,37,56,67 ಎಂಬ ಸಂಖ್ಯಾ ಸರಣಿಯಲ್ಲಿ ಒಂದು ಸಂಖ್ಯೆಯು ಒಂದು ಸಂಖ್ಯೆಯು
ತಪ್ಪಾಗಿದೆ. ಇಲ್ಲಿರಬೇಕಾಗಿದ್ದ
ಸರಿಯಾದ ಸಂಖ್ಯೆ ಯಾವುದು?
ಉ:- 55
72) ಒಂದು ಗಡಿಯಾರದಲ್ಲಿ
ಸಂಜೆ 3:25 ಆಗಿದ್ದಾಗ ನಿಮಿಷದ ಮುಳ್ಳು ಹಾಗೂ ಗಂಟೆಯ ಮುಳ್ಳು
ನಡುವೆ ಇರುವ ಕೋನ
ಎಷ್ಟು?
ಉ:- {471/2}
73) A,B,C,D,E ಮತ್ತು
F ಎಂಬ ಆರು ರಾಜಕಾರಣಿಗಳು ಒಂದು ಸಭೆಯಲ್ಲಿ ಸಾಲಾಗಿ ಕುಳಿತಿದ್ದಾರೆ.
B ಎಂಬಾತನು F ಮತ್ತು
D ಗಳ ಮಧ್ಯೆ ಕುಳಿತಿದ್ದಾನೆ. E ಎಂಬಾತನು A ಮತ್ತು C ಗಳ ಮಧ್ಯೆ
ಕುಳಿತಿದ್ದಾನೆ. A
ಎಂಬಾತನು F ಅಥವಾ D ಯ ಪಕ್ಕದಲ್ಲಿ ಕುಳಿತಿಲ್ಲ. C ಎಂಬಾತನು D
ಎಂಬಾತನ ಪಕ್ಕದಲ್ಲಿ
ಕುಳಿತಿಲ್ಲ. ಹೀಗಿದ್ದಾಗ F ಎಂಬಾತನು ಯಾರ ನಡುವೆ ಕುಳಿತಿ್ದ್ಆನೆ?
ಉ:- B ಮತ್ತು C
74) 7 ಅಂಕಿಗಳ ಸಂಖ್ಯೆ 5 * 9 * 7 * 3 ರಲ್ಲಿ * ಎಂಬುದು ಕಾಣೆಯಾಗಿರುವ
ಅಂಕಿ. ಈ ಅಂಕಿಯು
11 ಭಾಗಿಸಲ್ಪಟ್ಟರೆ,
ಕಾಣೆಯಾಗಿರುವ * ಅಂಕಿ ಯಾವುದು?
ಉ – 8
75) ಇಡೀ ದಿನವನ್ನು 24 ಗಂಟೆಗಳಿಗೆ ಬದಲಾಗಿ 20 ಗಂಟೆಗಳಾಗಿ ವಿಭಾಗಿಸಿದರೆ,
ಈ ಹೊಸ
ವ್ಯವಸ್ಥೆಯಲ್ಲಿ ಒಂದು ರೈಲು 108 ನಿಮಿಷಗಳಷ್ಟು ತಡವಾಗಿದ್ದರೆ,
ಇಲ್ಲಿ ವಾಸ್ತವಾಗಿ ವಿಳಂಬವಾದ
ಕಾಲ ಎಷ್ಟು?
ಉ:- 90 ನಿಮಿಷಗಳು
76) 3 ಸೆಂ ಮೀ ತ್ರಿಜ್ಯ ಹಾಗೂ ಸೆಂ ಮೀ ಎತ್ತರ ಇರುವ ಒಂದು ಶಂಕುವಿನ ಗಾತ್ರವು ಅಷ್ಟೇ ತ್ರಿಜ್ಯ
ಹಾಗೂ ಎತ್ತರ ಇರುವ
ಒಂದು ಸಿಲಿಂಡರಿನ ಗಾತ್ರದ ಮೂರನೇ ಒಂದು ರಷ್ಟಿದ್ದರೆ,
ಆಗ
ಸಿಲಿಂಡರ್
ಹಾಗೂ ಅಂತಹ ಮೂರು ಶಂಕುಗಳ ಗಾತ್ರಗಳ ಮೊತ್ತವು ______(x=22/7 ಎಂದು
ಇಟ್ಟುಕೊಳ್ಳಿ)
ಉ:-396 ಚ.ಸೆಂ.ಮೀ.
77) (a + x b) ಎಂದರೆ (a x b) + (a + b) ಎಂದರ್ಥ ಮತ್ತು (c) x
+ (d) ಎಂದರೆ (c x d) – (c + d )
ಎಂದರ್ಥ, ಆಗ ( 3
+ x 4) x + (0 + x 2)=
ಉ:- 17
78) ಬಾಲಕಿಯರ ಶಿಕ್ಷಣದ ಕಿರಿಯ ಹೋರಾಟಗಾರ್ತಿ ಹಾಗೂ 2012 ರ ಅಕ್ಟೋಬರ್,
ತಾಲಿಬಾನ್
ಭಯೋತ್ಪಾದಕ ಧಾಳಿಯಲ್ಲಿ
ಬದುಕುಳಿದ ಮಲಾಲ ಯೂಸುಫ್ಜಾಯಿ ಯಾವ ದೇಶದವಳು?
ಉ:- ಪಾಕಿಸ್ತಾನ
79) 2012 ರಲ್ಲಿ ರಾಜ್ಯಸಭೆಗೆ ನಾಮಕರಣಗೊಂಡ ಕ್ರಿಕೆಟ್ ಪಟು
ಉ:- ಸಚಿನ್ ತಂಡೂಲ್ಕರ್
80) ಅಂಧರಿಗಾಗಿ, ಪುರುಷರ ಇಪ್ಪತ್ತು ಇಪ್ಪತ್ತು ವಿಶ್ವ ಕ್ರಿಕೆಟ್ ಕಪ್
ಪಂದ್ಯಗಳನ್ನು
(2012)________ನಗರದಲ್ಲಿ
ನಡೆಸಲಾಯಿತು.
ಉ:- ಬೆಂಗಳೂರಿನಲ್ಲಿ ಮತ್ತು ಭಾರತವು ವಿಜಯ ಪಡೆಯಿತು.
81) “ಮನುಷ್ಯನಿಗೆ ಅದು ಒಂದು ಸಣ್ಣ ಹೆಜ್ಜೆ ಆದರೆ ಮನುಕುಲಕ್ಕೆ ಅದು ಭಾರೀ
ಜಿಗಿತ” ಈ ಪ್ರಸಿದ್ಧವಾದ
ಹೇಳಿಕೆ ಯಾರದ್ದು?
ಉ:- ನೀಲ್ ಆರ್ಮ್ ಸ್ಟ್ರಾಂಗ್
82) 2012 ರ ಡಿಸೆಂಬರ್ ತಿಂಗಳಲ್ಲಿ ನಡೆದ ಕೆಳಕಂಡ ದೇಶದ ಸಾರ್ವತ್ರಿಕ
ಚುನಾವಣೆಗಳಲ್ಲಿ, ಶ್ರೀ
ಶಿನ್ಜೊ ಅಬೆಯವರು ಲಿಬರಲ್
ಪ್ರಜಾಸತ್ತಾತ್ಮಕ ಪಕ್ಷವನ್ನು ಯಶಸ್ವಿಯಾಗಿ ಅಧಿಕಾರಕ್ಕೆ ತಂದರು.
ಉ:-ಜಪಾನ್
83) ಸತತವಾಗಿ ನಾಲ್ಕು ಬಲನ್ ಡೋರ್ ಪ್ರಶಸ್ತಿಗಳನ್ನು ಗೆ್ದ್ಉಕೊಂಡ ದಾಖಲೆ
ಮಾಡಿದ ಅಂತರ
ರಾಷ್ಟ್ರೀಯ ಸಾಕರ್
ಆಟಗಾರ
ಉ:- ಲಿಯೊನೆಲ್ ಮೆಸ್ಸಿ
84) ಮೊದಲ ಮಹಿಳಾ ಕಬಡ್ಡಿ ವಿಶ್ವ ಕಪ್ (2012) ಗೆದ್ದುಕೊಂಡ ದೇಶ
ಉ:- ಭಾರತ
85) ಮಿಯನ್ಮಾರ್ ( ಬರ್ಮಾ) ನ ಶ್ರೀಮತಿ ಆಂಗ್ ಸಾನ್ ಸೂಕಿ ಇವರು
ಉ:- ವಿರೋಧ ಪಕ್ಷದ ನಾಯಕಿ
86) 2013 ರ ಆರಂಭದಲ್ಲಿ ಆಫ್ರಿಕಾದ ಮಾಲಿ ದೇಶದ ಕೆಲವು ಭಾಗಗಳನ್ನು ವಶಪಡಿಸಿಕೊಂಡಿದ್ದ
ಇಸ್ಲಾಮಿಕ್ ದಂಗೆಕೋರರನ್ನು ಉಚ್ಛಾಟಿಸುವುದಕ್ಕಾಗಿ ಈ ಕೆಳಗಿನ ದೇಶವು ಮಧ್ಯ ಪ್ರವೇಶ
ಮಾಡಿತು.
ಉ:-ಫ್ರಾನ್ಸ್
87) ಬೆಂಗಳೂರನ್ನು ಈ ಕೆಳಗಿನ ಪ್ರದೇಶಕ್ಕೆ ಸಂಪರ್ಕಿಸುವ 1000 ಕಿಮೀ ಗ್ಯಾಸ್
ಕೊಳವೆ
ಮಾರ್ಗವನ್ನು 2013
ರ ಫಬ್ರವರಿಯಲ್ಲಿ ಮೊದಲ ಬಾರಿಗೆ ರಾಜ್ಯ ಸ್ವಾಮ್ಯದ ಗ್ಯಾಸ್ ಅಥಾರಿಟಿ ಆಫ್
ಇಂಡಿಯಾ ಲಿಮಿಟೆಡ್
ಕಾರ್ಯಾರಂಭಗೊಳಿಸಿತು.
ಉ:-ಮಹಾರಾಷ್ಟ್ರದಲ್ಲಿರುವ ದಭೋಲ್
88) ಏಷಿಯಾದ ಯಾವ ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಮೂರ್ತಿಯವರು
2013 ರ ಜನವರಿಯಲ್ಲಿ ಸಂಸತ್ತಿನಿಂದ ಖಂಡನೆಗೊಳಗಾದರು?
ಉ:-ಶ್ರೀ ಲಂಕಾ
89) ಈ ಕೆಳಗಿನ ನಗರದಲ್ಲಿ 2013 ರ ಜನವರಿಯಲ್ಲಿ ರಾಷ್ಟ್ರೀಯ ಸಾಹಿತ್ಯೋತ್ಸವ
ನಡೆಯಿತು
ಉ:-ಜೈಪುರ್
90) 2013 ಎ ಮಾರ್ಚ್ ನಲ್ಲಿ ಪೋಪ್ ಫ್ರಾನ್ಸಿಸ್ 1 ಆಗಿ ಆಯ್ಕೆಯಾದ ಕಾರ್ಡಿನಲ್
ಜಾರ್ಜ್ ಮಾರಿಯೊ
ಬರ್ಗಾಗ್ಲಿಯೋ ಯಾವ
ದೇಶದವರು?
ಉ:-ಅರ್ಜೆಂಟೈನಾ
91) ಪ್ರತಿಷ್ಠಿತವಾದ ದಾದಾ ಸಾಹೇಬ್ ಫಾಲ್ಕೆ ಹಾಗೂ ಎನ್.ಟಿ.ರಾಮರಾವ್ ಚಲನಚಿತ್ರ
ಪ್ರಶಸ್ತಿಗಳನ್ನು
ಇತ್ತೀಚೆಗೆ (ಏಪ್ರಿಲ್
2013 ) ಅನುಕ್ರಮವಾಗಿ ಈ ಕೆಳಗಿನವರಿಗೆ ನೀಡಲಾಯಿತು.
ಉ:- ಪ್ರಾಣ್ ಕಿಶನ್ ಸಿಕಂದ್ ಮತ್ತು ಅಮಿತಾಬ್ ಬಚ್ಚನ್
92) 2013 ರಲ್ಲಿ ನೀಡಲಾದ 85 ನೇ ವಾರ್ಷಿಕ ಅಕಾಡಮಿ ಪ್ರಶಸ್ತಿ ( ಆಸ್ಕರ್
ಪ್ರಶಸ್ತಿ) ಗಳ ಪೈಕಿ ಅಂಗಹ
ಲೀ ಯವರ ಲೈಫ್ ಆಫ್
ಪೈ ಎಂಬ ಚಲನಚಿತ್ರ ಎಷ್ಟು ಪ್ರಶಸ್ತಿಗಳನ್ನು ಗೆದ್ದುಕೊಂಡಿತು?
ಉ:- ನಾಲ್ಕು
93) ನ್ಯಾಯಾಮೂರ್ತಿ ಡಿ.ಎಚ್. ವಘೇಲಾ ಅವರಿಗಿಂತ ಮುಂಚೆ ಇದ್ದ ಕರ್ನಾಟಕ
ಉಚ್ಚ
ನ್ಯಾಯಾಲಯದ ಮುಖ್ಯ
ನ್ಯಾಯಾಮೂರ್ತಿ ಯಾರು?
ಉ:- ವಿಕ್ರಂಜಿತ್ ಸೆನ್
94) ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ವಿಕಾಸ್ ಗೌಡ ಅವರ ಹೆಸರು ಯಾವ
ಅಥ್ಲೆಟಿಕ್ ಆಟಕ್ಕೆ
ಸಂಬಂಧಿಸಿದೆ?
ಉ:-ಡಿಸ್ಕಸ್ ಎಸೆತ
95) ಐದು ದೇಶಗಳ ಒಂದು ಸಮೂಹಕ್ಕೆ ಸಂಬಂಧಿಸಿದ BRICS ಎಂಬಸಂಕ್ಷಿಪ್ತ ರೂಪದಲ್ಲಿ
B ಮತ್ತು C
ಅಕ್ಷರಗಳು ಅನುಕ್ರಮವಾಗಿ
ಯಾವ ದೇಶಗಳನ್ನು ಪ್ರತಿನಿಧಿಸುತ್ತವೆ?
ಉ:-ಬ್ರೆಜಿಲ್ ಮತ್ತು ಚೀನಾ
96)ಚೀನಾದ ಈಗಿನ ಅಧ್ಯಕ್ಷರು
ಉ: ಕ್ಸಿ ಜಿನ್ ಪಿಂಗ್
97) ನೊವಾರ್ಟಿಸ್ ಉತ್ಸನ್ನವೊಂದರ ಮಾರ್ಪಾಟಿಗೆ
ಪೇಟೆಂಟ್ ನೀಡಬೇಕೆಂಬ ಮನವಿಯನ್ನು
ತಿರಸ್ಕರಿಸಿ 2013
ರ ಏಪ್ರಿಲ್ ನಲ್ಲಿ ಸರ್ವೊಚ್ಚ ನ್ಯಾಯಾಲಯವು ನೀಡಿದ ಒಂದು ಮಹತ್ವದ ತೀರ್ಪು
ಯಾವ ಔಷಧಕ್ಕೆ ಸಂಬಂಧಿಸಿದ್ದಾಗಿದೆ?
ಉ:-ದೀರ್ಘಕಾಲದ ಲುಕೇಮಿಯಾಗೆ ನೀಡವ ಗ್ಲೀವೆಕ್
98) ಇತ್ತೀಚೆಗೆ_________ತೀರದಿಂದಾಚೆಗೆ_______ ಕಡಲಸೈನಿಕರಿಂದ ಭಾರತದ ಇಬ್ಬರು
ಮೀನುಗಾರರು ಮರಣಾಂತಿಕ
ಗುಂಡಿನೇಟಿಗೆ ತುತ್ತಾದರು. ಇದು ಗಂಭೀರವಾದ ಕಾನೂನು
ಹಾಗೂ ರಾಜಕೀಯ ಗಮನವನ್ನು ಸೆಳೆದಿದೆ.
ಉ:- ಕೇರಳ, ಇಟಲಿಯ ಕಡಲ
ಸೈನಿಕರು.
99) ‘ ಟೈಗರ್ ’ ಮತ್ತು ‘ಪಿಜನ್ ‘ ಎಂಬ ಅಡ್ಡ ಹೆಸರುಗಳನ್ನು ಪಡೆದಿರುವ ಅಂತರ ರಾಷ್ಟ್ರೀಯ
ಕ್ರಿಕೆಟ್ ಪಟುಗಳ
ಹಸರುಗಳು ಅನುಕ್ರಮ ವಾಗಿ ಹೀಗಿವೆ.
ಉ:-ಎಂ.ಎ.ಕೆ.ಪಟೌಡಿ ಮತ್ತು ಗ್ಲೆನ್ ಮೆಕ್ ಗ್ರಾತ್
100) 2013 ರ ಏಪ್ರಿಲ್ ನಲ್ಲಿ ಇರುವಂತೆ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ
ಉ:- ಬಾನ್ ಕಿ ಮೂನ್
Your doing a good job continue it
ReplyDelete