Wednesday, 19 June 2013

ಅಬಕಾರಿ ರಕ್ಷಕರ ಪರೀಕ್ಷೆಯ ಕೀ ಉತ್ತರಗಳು………
    
          ಸಾಮಾನ್ಯ ಕನ್ನಡ

1.      ಬೆಟ್ಟದಾವರೆ – ಎಂಬುದು
ಉ:- ಆದೇಶ ಸಂಧಿ.

2.      ನೆಲವನ್ನು – ಎಂಬುದು
ಉ:- ವಕಾರಾಗಮ ಸಂಧಿ.

3.      ನಾವೆಲ್ಲಾ – ಎಂಬುದು
ಉ:- ಲೋಪ ಸಂದಿ.

4.      ಸೂರ್ಯೋದಯ – ಎಂಬುದು
ಉ:-ಗುಣ ಸಂಧಿ.

5.      ತೆನೆಯನ್ನು –ಎಂಬುದು
ಉ:- ಯಕಾರಾಗಮ ಸಂಧಿ

6.      ದಶರಥ- ಎಂಬುದು
ಉ:- ನಾಮಪದ

7.      ಹೊಲದಲ್ಲಿ- ಎಂಬುದು
ಉ:- ಸಪ್ತಮೀ ಅಲ್ಲಿ

8.      ಸೀತೆಯ ದೆಸೆಯಿಂದ
ಉ:- ಪಂಚಮೀ.

9.      ಅವನ, ಅವಳ, ಅಲ್ಲಿ-ಎಂಬುದು
ಉ:- ಸರ್ವನಾಮಗಳು

10.  ಮಾಡುತ್ತಾಳೆ- ಎಂಬುದು
ಉ:- ಕ್ರಿಯಾಪದ.

11.  ಅಕ್ಕಟಾ – ಎಂಬುದು
ಉ:- ಭಾವಸೂಚಕಾವ್ಯಯ

12.  ಗಾರ, ಕಾರ, ಇಗ – ಎಂಬುದು
ಉ:- ತದ್ಧಿತ ಪ್ರತ್ಯಯಗಳು

13.  ಮೈದಡವಿ –ಎಂಬುದು
ಉ:-ಕ್ರಿಯಾ ಸಮಾಸ

14.  ಬರುವನು – ಎಂಬುದು
ಉ:- ಭವಿಷ್ಯತ್ಕಾಲ

15.  ಸೊಗಸಾಗಿ – ಎಂಬುದು
ಉ:- ಸಾಮಾನ್ಯಾವ್ಯಯ

ಕನ್ನಡ ಪದವನ್ನು ಗುರುತಿಸಿ.
16.  ಹಿತ್ತಿಲು

17.  ಮನೆ

18.  ತೆಂಕಣ

19.  ಆಕಳು

20.  “ ; ” ಇದು_______ಚಿಹ್ನೆ

ಉ:- ಅರ್ಧವಿರಾಮ

21.  “ ! “ ಇದು_______ಚಿಹ್ನೆ

ಉ:- ಭಾವ ಸೂಚಕ
22.  ಗೀತಾ ನಾಗಭೂಷಣ ಅವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ತಂದುಕೊಟ್ಟ ಕೃತಿ

ಉ:- ಬದುಕು ( ಕಾದಂಬರಿ )
23.  _________ಇವರು ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು


ಉ:- ಡಾ. ಕೆ.ವಿ.ಪುಟ್ಟಪ್ಪ

24.  _____________ ಸಾಧನೆಗಾಗಿ ಡಾ. ಗಿರೀಶ್ ಕಾರ್ನಾಡರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿತು.
ಉ:- ನಾಟಕ ಸಾಹಿತ್ಯ

25.   ಈ ಕೆಳಗಿನ ನಾಲ್ಕು ಕೃತಿಗಳಲ್ಲಿ ಒಂದು ಗುಂಪಿಗೆ ಸೇರದ ಕೃತಿ ಇದೆ. ಅದು ಯಾವುದೆಂದು ಸಂಖ್ಯೆಯ ಮೂಲಕ ಗುರುತಿಸಿರಿ.
ಉ:- ಚಿದಂಬರ ರಹಸ್ಯ

26.   ಧನ ಧಾನ್ಯ ಜನಗಳಿಂದ ಸಮೃದ್ಧವಾದ ಕೋಸಲದೇಶ
ಉ:-  1QSPR6

27.  ಸಾಮಾನ್ಯವಾಗಿ ಜಗತ್ತಿನಲ್ಲಿ ಕೇಳಿ ಬರುವ ಸರ್ವಸ್ವರಗಳು
ಉ:-   1SPRQ6

28.  ಸಾಮಾನ್ಯವಾಗಿ ಮನುಷ್ಯ ಜೀವನದಲ್ಲಿ ಗೆಳೆತನಕ್ಕೆ
ಉ:-  1RPSQ6

29.  ದಾರಿ ಸವೆಸುತ್ತಾ ಗೌಹಾಟಿಯ ಒಳಹೊಕ್ಕು ಇನ್ನೊಂದು ಮೂಲೆ
ಉ:- 1QPSR6

30.  ಮನುಷ್ಯನು ತಾನೇನನ್ನು ಪ್ರೀತಿಸುವನೋ ಅದರೊಂದಿಗೆ ಬದುಕಿರಬೇಕು.
ಉ:-   1SPRQ6

31.  ‘ ಕೂಷ್ಮಾಂಡ ‘  ಎಂಬ ಪದಕ್ಕೆ ತದ್ಭವ ರೂಪ
ಉ:- ಕುಂಬಳ

32.  ‘ ಉಪಟಳ ‘ ಎಂಬ ಪದಕ್ಕೆ ತತ್ಸಮ ರೂಪ
ಉ:- ಉಪದ್ರವ

33.  ‘ ನಕ್ಕಳು ‘ ಎಂಬುದುಕ್ಕೆ ‘ ನಗಳು ‘ ಎಂಬುದು
ಉ:- ನಿಷೇದಾರ್ಥಕ ಪದ

34.  ‘ ಷಟ್ಪದಿಯ ಬ್ರಹ್ಮ ‘ ಎಂದು ಯಾರನ್ನು ಕರೆಯುತ್ತಾರೆ ?
ಉ:- ರಾಘವಾಂಕ

35.   ಕಂದ ಪದ್ಯದಲ್ಲಿ ಎಷ್ಟು ಸಾಲುಗಳಿರುತ್ತಾರೆ ?
ಉ:- ನಾಲ್ಕು ಸಾಲುಗಳು


36.  “ ಅಲ್ಪರ ಸಂಗ ಅಭಿಮಾನ ಭಂಗ “
ಉ:-ಕೆಟ್ಟವರ ಸಹಾವಾಸದಿಂದ ವ್ಯಕ್ತಿತ್ವ ಹಾಳಾಗುತ್ತದೆ.

37.  “ ಬೆಕ್ಕಿಲ್ಲದಾಗ  ಇಲಿ ಲಾಗ ಹೊಡೆಯಿತು “
ಉ:- ಹೇಳುವವರು, ಕೇಳುವವರು ಇಲ್ಲದಿದ್ದಾಗಿನ ಅವಸ್ಥೆ

38.  “ ಎಮ್ಮೆಯ ಮುಂದೆ ಕಿನ್ನರಿ ಬಾರಿಸಿದಂತೆ “

ಉ:- ಅವಿವೇಕಿಯ ಹತ್ತಿರ ಹಿತೋಪದೇಶ ಮಾಡುವುದು ವ್ಯರ್ಥ
39.  ಅದ್ಭತವಾದದ್ದು ಮತ್ತು ರೋಮಾಂಚನಕಾರಿಯಾದದ್ದು ಯಾವುದು ?
ಉ:- ಮನುಷ್ಯಾವತಾರದ ಕಥೆ

    40.ವಿಕಾಸವಾದವನ್ನು ಪ್ರತಿಪಾದಿಸಿದವರು ಯಾರು ?
ಉ:- ಡಾರ್ವಿನ್

    41. ನವಿಲಿನ ಸಹಜ ಸೌಂದರ್ಯವನ್ನು ಯಾರಿಗೆ ಹೋಲಿಸಲಾಗುವುದಿಲ್ಲ ?
ಉ:- ವಿಶ್ವಸುಂದರಿ

   42. ಹಸು ಯಾವುದುರ ಪ್ರತೀಕ ?
ಉ:- ನಿಷ್ಕಾಮಕರ್ಮದ

43.   ತನ್ನ ವಿಚಾರಶಕ್ತಿಯಿಂದ ಮನುಷ್ಯ ಏನಾಗಿದ್ದಾನೆ ?
ಉ:- ಸರ್ವಶ್ರೇಷ್ಠ ಪ್ರಾಣಿಯಾಗಿದ್ದಾನೆ.

    44. ಪ್ರಾಣಿಗಳಿಗೂ ಮತ್ತು ಮನುಷ್ಯನಿಗೂ ಇರುವ ಮುಖ್ಯ ವ್ಯತ್ಯಾಸ ಯಾವುದು ?
ಉ:- ವಿವೇಚನೆ ಮತ್ತು ವಾಕ್ ಶಕ್ತಿ

45.  ವೇಗವಾಗಿ ಚಲಿಸುವ ಪ್ರಾಣಿಗಳು ಯಾವುವು ?
ಉ:- ಜಿಂಕೆ ಮತ್ತು ಕುದುರೆ

    46.ಚಾರಿತ್ರ್ಯ

    47. ಪ್ರೀತಿಸುತ್ತಾರೆ

    48.ಲೋಕಾಂತ

    49. ಹಣ

    50. ಆಸ್ತಿ

    51.ವಡ್ಡಾರಾಧನೆ ‘ – ಇದು, ಯಾರ ಗದ್ಯ ಕೃತಿ ?

ಉ:- ಶಿವಕೋಟ್ಯಾಚಾರ್ಯ
  
52.‘ ಮರುಳ ಮುನಿಯನ ಕಗ್ಗ ‘- ಕೃತಿಯ ಕರ್ತೃ ?
ಉ:- ಡಿ.ವಿ. ಗುಂಡಪ್ಪ

53.‘ ಮೋಡಣ್ಣನ ತಮ್ಮ ‘ ಇದು ಯಾರ ಮಕ್ಕಳ ನಾಟಕ ?
ಉ:- ಕುವೆಂಪು

54.‘ ಶರಪಂಜರ ‘- ಇದು ಯಾರ ಕಾದಂಬರಿ ?
ಉ:- ತ್ರೀವೇಣಿ

55.‘ ದೀಪವು ನಿನ್ನದೆ, ಗಾಳಿಯು ನಿನ್ನದೆ ‘ – ಗೇತೆಯ ರಚನೆ ಯಾರದು ?
ಉ:- ಕೆ.ಎಸ್.ನರಸಿಂಹಸ್ವಾಮಿ

56.ನಾಗಮಂಡಲ ‘- ಈ ನಾಟಕ ಯಾರದು ?
ಉ:- ಗಿರೀಶ್ ಕಾರ್ನಾಡ್

57. ದ.ರಾ.ಬೇಂದ್ರೆಯವರಿಗೆ ಜ್ಞಾನಪೀಠ ತಂದ ಕೃತಿ ?
ಉ:- ನಾಕುತಂತಿ

58.“ ಸಾಹಸ ಭೀಮ ವಿಜಯಂ “ ಎಂಥಹ ಕಾವ್ಯ ?
ಉ:- ಚಂಫೂ ಕಾವ್ಯ

59.‘ ಕನ್ನಡಂ ಕತ್ತುರಿ ‘ ಯಲ್ತೆ – ಎಂದವರು ?
ಉ:- ಕೆಂಪುನಾರಾಯಣ

60.‘ ಜೋಕುಮಾರ ಸ್ವಾಮಿ ‘-ಎಂಬುದು ?
ಉ:- ನಾಟಕ

61.ಸು.ರಂ. ಎಕ್ಕುಂಡಿಯವರು ಈ ಕ್ಷೇತ್ರದಲ್ಲಿ ಪ್ರಮುಖರು.
ಉ:- ಕಥನ ಕವನ

62.ಯಾರನ್ನು ‘ ನಡೆದಾಡುವ ವಿಶ್ವಕೋಶ ಎನ್ನುತ್ತಿದ್ದರು.
ಉ:- ಶಿವರಾಮ ಕಾರಂತ

ನುಡಿಗಟ್ಟಿನ ಅರ್ಥ:

63. ಹಲ್ಲು ಕಿಸಿ
ಉ:- ದೈನ್ಯತೆ

64.ರಾಮ ಬಾಣ
ಉ:- ಗುರಿ ತಪ್ಪದ

65.ಮುಖ ಊದಿಸು
ಉ:- ಅಸಮಾಧಾನಗೊಳ್ಳು

66.ತೊಡೆತಟ್ಟು-
ಉ:- ಸವಾಲುಹಾಕು

67.ಗಂಟಲು ಕಟ್ಟು
ಉ:- ಮಾತು ಮೂಕವಾಗು

68.‘ ಗಂಧವತಿ ‘ ಎಂದರೆ ?
ಉ:- ಭೂಮಿ

69.‘ ಕೇವಲ ; ಎಂದರೆ
ಉ:- ಸಮಗ್ರ

70.‘ ಚೇಗು ‘ ಎಂದರೆ
ಉ:-ಚೆಲುವು


71.‘ ತರಳ ‘ ಎಂದರೆ ?
ಉ:- ಹುಡುಗ

72.‘ ಮಹಿಷ ‘ ಎಂದರೆ ?
ಉ:- ಕೋಣ

73.ಗುರಿ ತಲುಪಲು ಸಾಧ್ಯ
               P
ದೂರವಾದರೂ ಸಾಗಬಲ್ಲೆವೆಂಬ
           Q
ಪಯಣದ ಹಾದಿ ಎಷ್ಟೇ
          R
ಧೈರ್ಯ ದ್ದವರು ಮಾತ್ರ
            S
ಉ:- RQSP

774.     .ಜೀವನದಲ್ಲಿ ಯಶಸ್ಸು   ಯಾರು ಸದಾ
        P                          Q
ಸಾಧಿಸುತ್ತಾರೆ ಚೈತನ್ಯಶಾಲಿಗಳೋ ಅವರು
R                                  S
ಉ:- QSPR

775.   ಕಲಿಯುತ್ತಾರೆ  ತಮ್ಮ ಶತ್ರುಗಳಿಂದಲೂ
P                                  Q
ಅನೇಕ ವಿಷಯಗಳನ್ನು   ವಿವೇಕಿಗಳು ಮಾತ್ರ
R                                              S
ಉ:-SQRP



776.   ಪ್ರಯತ್ನಿಸದಿರಿ
P
ಸಹಾಯ ಮಾಡಿ ನಿಮಗೆ ಸಹಾಯ
Q
ಮಾಡಲಾಗದಿದ್ದರೆ ನೋಯಿಸಲು
R
ಸಾಧ್ಯವಾದರೆ
S
   ಉ:- SQRP

777.   ದುಬಾರಿ ವಸ್ತುಗಳನ್ನಲ್ಲ
ಸಂಗ್ರಹಿಸ ಬೇಕಾಗಿರುವುದು
ಬದುಕಿನಲ್ಲಿ ನಾವು
ಸುಂದರ ಕ್ಷಣಗಳನ್ನೇ ಹೊರತು
ಉ:- RQSP

78. ಸಾಕ್ಷರತೆ
ಉ:-ನಿರಕ್ಷರತೆ

79. ಅನುಮತಿಸು
ಉ:-ನಿರಾಕರಿಸು

80.ಆರೋಹಣ
ಉ:- ಅವರೋಹಣ

81. ಆಯುಧ
ಉ:-ನಿರಾಯುಧ

82.ಶಮನ
ಉ:-ಉಲ್ಬಣ


ಭಿನ್ನವಾದ ಪದವನ್ನು ಗುರುತಿಸಿ:
83.ಚಾಮರಸ

84. ಪುರಂದರದಾಸ

85. ಮಾವ

86. ಕವಿರಾಜ ಮಾರ್ಗ

87. ನಾಗವರ್ಮ

ದೋಷವನ್ನು ಗುರುತಿಸಿ:

88. ಯುಗಾದಿ ಹಬ್ಬದ ಶುಭಾಷಯಗಳು
ಉ:- ಶುಭಾಶಯಗಳು

89. ಅರ್ಥದೋಶಕ್ಕೆ ಅವಕಾಶವಿರಬಾರದು
ಉ:- ಅರ್ಥದೋಷಕ್ಕೆ

90. ಕನ್ನಡ ಮಾತೆಯ ಮುದ್ದಿನ ಕಂದ
ಉ:- ಸರಿಯಾಗಿದೆ

91. ಹೊಂದಾಣಿಕೆಯ ಗುಣ ಇರಬೇಕೆಂದರೆ ಕನಿಷ್ಠ ತಿಳುವಳಿಕೆ ಇರಬೇಕು.
ಉ:- ಸರಿಯಾಗಿದೆ

92. ರಾಮಾಯಣದಲ್ಲಿ ಮಂಥರೆಯ ಪಾತ್ರ ಪ್ರದಾನವಾದದ್ದು
ಉ:- ಪ್ರಧಾನವಾದದ್ದು

ಪದಗಳನ್ನು ಸುಧಾರಿಸಿ:

93. ಅನಾವಶ್ಯಕ
ಉ:- ಅನವಶ್ಯಕ

94. ದ್ರಾಕ್ಷಾಯಣಿ
ಉ:- ದಾಕ್ಷಾಯಣಿ

95. ಪ್ರದಾನ ಸಂಪಾದಕ
ಉ:- ಪ್ರಧಾನ ಸಂಪಾದಕ

96. ನ್ಯೂನ್ಯತೆ
ಉ:- ನ್ಯೂನತೆ

97. ಹಾದರದ ಸ್ವಾಗತ
ಉ:- ಆದರದ ಸ್ವಾಗತ

ಹೊಂದಿಕೆಯಾಗದ ಪದವನ್ನು ಗುರುತಿಸಿ:

98. ದೆಸೆದೆಸೆಗೆ

99. ತಳಬುಡ

100. ನಿಗಿನಿಗಿ


1 comment: