Wednesday, 27 January 2016

ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಸಮಯ, ಅವಕಾಶ ಸಿಕ್ಕಾಗ ದಿನಾಲೂ 2-3 ದಿನಪತ್ರಿಕೆಗಳು, ಸ್ಪರ್ಧಾತ್ಮಕ ಪರೀಕ್ಷಾ ಮಾಸಪತ್ರಿಕೆಗಳು, ಸುಧಾ,ತರಂಗ,ಕರ್ಮವೀರ, ದ ಸಂಡೆ ಇಂಡಿಯನ್, ಉತ್ಥಾನ ,ವಿಜಯ ನೆಕ್ಸ್ಟ್ ಮೊದಲಾದ ಪತ್ರಿಕೆಗಳನ್ನು ಓದುತ್ತಾ ಇರಬೇಕು.ಇದರಿಂದ ವಿಶಾಲವಾದ ಜ್ಞಾನ, ಬರವಣಿಗೆ ಕಲೆ ಬೆಳೆಯಲು ಸಹಾಯಕವಾಗತ್ತದೆ.

Saturday, 16 January 2016

"ರಾಜಕೀಯ ಪದ್ಧತಿ"(Polity) ವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಮುಖ ವಿಷಯವಾಗಿದೆ.ಕನ್ನಡ ಮಾಧ್ಯಮದವರು objective ಅಥವಾ ವಿವರಣಾತ್ಮಕ ಪ್ರಶ್ನೆಗಳಿಗೆ ಉತ್ತರಿಸಲು ಕೆಳಗಿನ ಪುಸ್ತಕಗಳಿಂದ ನೋಟ್ಸ್ ಮಾಡಿಕೊಳ್ಳುವುದು.

*ಭಾರತದ ಸಂವಿಧಾನ ಮತ್ತು ರಾಜಕೀಯ- ಪಿ.ಎಸ್.ಗಂಗಾಧರ

*ಭಾರತದ ಸಂವಿಧಾನ ಮತ್ತು ರಾಜಕೀಯ- ಎಚ್.ಎಂ.ರಾಜಶೇಖರ

*ಭಾರತದ ಸಂವಿಧಾನ ಮತ್ತು ರಾಜಕೀಯ-ಮೇರುನಂದನ್

*ಭಾರತದ ಸಂವಿಧಾನ - ಭಾರತ ಸರ್ಕಾರದ ಪುಸ್ತಕ

*ರಾಜ್ಯ ಸರ್ಕಾರದ ಪಿಯು ಪ್ರಥಮ ಮತ್ತು ದ್ವೀತಿಯ ವರ್ಷದ ರಾಜ್ಯಶಾಸ್ತ್ರ ಪುಸ್ತಕಗಳು

ಜೊತೆಗೆ ಪ್ರಚಲಿತ ಸಂವಿಧಾನಾತ್ಮಕ ಬೆಳವಣಿಗೆಗಳನ್ನು update ಮಾಡಿಕೊಳ್ಳುವುದು

ಆರ್ಥಿಕತೆ(Economy)ಯು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಮುಖ ವಿಷಯವಾಗಿದೆ.ಕನ್ನಡ ಮಾಧ್ಯಮದವರು objective ಅಥವಾ ವಿವರಣಾತ್ಮಕ ಪ್ರಶ್ನೆಗಳಿಗೆ ಉತ್ತರಿಸಲು ಕೆಳಗಿನ ಪುಸ್ತಕಗಳಿಂದ ನೋಟ್ಸ್ ಮಾಡಿಕೊಳ್ಳುವುದು.

1.ಭಾರತದ ಆರ್ಥಿಕ ವ್ಯವಸ್ಥೆ - ಹೆಚ್.ಆರ್.ಕೆ

2.ಭಾರತದ ಆರ್ಥಿಕ ವ್ಯವಸ್ಥೆ - ಸ್ಪರ್ಧಾಚೈತ್ರ ಪ್ರಕಾಶನದ ಪುಸ್ತಕಗಳು

3.ಕರ್ನಾಟಕದ ಆರ್ಥಿಕ ವ್ಯವಸ್ಥೆ -ನೇ.ತಿ.ಸೋಮಶೇಖರ

4.ಗ್ರಾಮೀಣಾಭಿವೃದ್ಧಿ- ಹೆಚ್.ಆರ್.ಕೃಷ್ಣಯ್ಯಗೌಡ

5.ಗ್ರಾಮೀಣಾಭಿವೃದ್ಧಿ - ಕೆ.ಭೈರಪ್ಪ

6.ಕರ್ನಾಟಕದ ಆರ್ಥಿಕ ಸಮೀಕ್ಷೆ

7.ಅಂತರರಾಷ್ಟ್ರೀಯ ಅರ್ಥಶಾಸ್ತ್ರ - ಹೆಚ್.ಆರ್.ಕೃಷ್ಣಯ್ಯಗೌಡ

8.ಭಾರತದ ಪ್ರಾದೇಶಿಕ ಮತ್ತು ಆರ್ಥಿಕ ಭೂಗೋಳಶಾಸ್ತ್ರ - ರಂಗನಾಥ್

9.ರಾಜ್ಯ ಸರ್ಕಾರದಿಂದ ಪ್ರಕಟಿತ ಪಿಯುಸಿ ಕನ್ನಡ ಮಾಧ್ಯಮದ ಅರ್ಥಶಾಸ್ತ್ರ ಪುಸ್ತಕಗಳು

ಭೂಗೋಳಶಾಸ್ತ್ರವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಮುಖ ವಿಷಯವಾಗಿದೆ.ಕನ್ನಡ ಮಾಧ್ಯಮದವರು objective ಅಥವಾ ವಿವರಣಾತ್ಮಕ ಪ್ರಶ್ನೆಗಳಿಗೆ ಉತ್ತರಿಸಲು ಕೆಳಗಿನ ಪುಸ್ತಕಗಳಿಂದ ನೋಟ್ಸ್ ಮಾಡಿಕೊಳ್ಳುವುದು.

ಡಾ.ರಂಗನಾಥ್ ಅವರ
*ಪ್ರಪಂಚದ ಭೂಗೋಳಶಾಸ್ತ್ರ
*ಭಾರತದ ಭೂಗೋಳಶಾಸ್ತ್ರ
*ಕರ್ನಾಟಕದ ಭೂಗೋಳಶಾಸ್ತ್ರ
*ಭಾರತದ ಆರ್ಥಿಕ ಮತ್ತು ಪ್ರಾಕೃತಿಕ ಭೂಗೋಳಶಾಸ್ತ್ರ

*ಪ್ರಾಕೃತಿಕ ಭೂಗೋಳಶಾಸ್ತ್ರದ ಮೂಲತತ್ವಗಳು
 

ಕರ್ನಾಟಕದ ಭೂಗೋಳಶಾಸ್ತ್ರಕ್ಕೆ ಪಿ.ಮಲ್ಲಪ್ಪ ಅವರ ಪುಸ್ತಕ ಮತ್ತು ಕರ್ನಾಟಕ ಕೈಪಿಡಿಯನ್ನೂ ಗಮನಿಸಬಹುದು.

Thursday, 14 January 2016


ಚ.ನ.ಶಂಕರರಾವ್ ಅವರ ಮೂರು ಪುಸ್ತಕಗಳು ಕೆ.ಎ.ಎಸ್ ಮುಖ್ಯಪರೀಕ್ಷೆಯ ಸಾಮಾನ್ಯ ಅಧ್ಯಯನ ಪತ್ರಿಕೆ - 1 ಮತ್ತು ಪ್ರಬಂಧ ಪತ್ರಿಕೆಗೆ ತುಂಬಾ ಉಪಯುಕ್ತ.

ಅಲ್ಲದೆ ಪಿ.ಎಸ್.ಐ ಪ್ರಬಂಧ ಒಳಗೊಂಡಂತೆ ವಿವರಣಾತ್ಮಕ ಮಾದರಿಯ ಉತ್ತರಗಳನ್ನು ಬರೆಯಲು ಸಹಾಯಕವಾಗುತ್ತವೆ.

ಪುಸ್ತಕಗಳು:
* ಭಾರತೀಯ ಸಮಾಜ
*ಸಮಾಜಶಾಸ್ತ್ರ ಸಂಪುಟ -1
* ಭಾರತದ ಸಾಮಾಜಿಕ ಸಮಸ್ಯೆಗಳು

"ಇತಿಹಾಸ" ವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಮುಖ ವಿಷಯವಾಗಿದೆ.ಕನ್ನಡ ಮಾಧ್ಯಮದವರು objective ಅಥವಾ ವಿವರಣಾತ್ಮಕ ಪ್ರಶ್ನೆಗಳಿಗೆ ಉತ್ತರಿಸಲು ಕೆಳಗಿನ ಪುಸ್ತಕಗಳಿಂದ ನೋಟ್ಸ್ ಮಾಡಿಕೊಳ್ಳುವುದು.

*ಭಾರತದ ಇತಿಹಾಸ - ಸದಾಶಿವ

*ಭಾರತದ ಇತಿಹಾಸ - ಟಿ.ಜಿ.ಚಂದ್ರಶೇಖರಪ್ಪ

*ಆಧುನಿಕ ಭಾರತದ ಇತಿಹಾಸ - ಬಿಪಿನ್ ಚಂದ್ರ

*ಸ್ವಾತಂತ್ರ್ಯದ ಹೋರಾಟ - ಬಿಪಿನ್ ಚಂದ್ರ

*ಸ್ವಾತಂತ್ರ್ಯಗಂಗೆಯ ಸಾವಿರ ತೊರೆಗಳು - ಶಂಕರನಾರಾಯಣರಾವ್

*ಕರ್ನಾಟಕದ ಇತಿಹಾಸ - ಕಾಮತ್

*ಕರ್ನಾಟಕದ ಇತಿಹಾಸ - ಫಾಲಾಕ್ಷ

*ಕರ್ನಾಟಕ ಕೈಪಿಡಿ ಮತ್ತು
ಕರ್ನಾಟಕದ ಸಂಗಾತಿ- ಕರ್ನಾಟಕ ಸರಕಾರದ ಪ್ರಕಟಣೆಗಳು

*ಕರ್ನಾಟಕ ಸಾಂಸ್ಕೃತಿಕ ಸಮೀಕ್ಷೆ - ತಿಪ್ಪೇರುದ್ರಸ್ವಾಮಿ


ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ಮಾಧ್ಯಮದ  ಮಾಸಪತ್ರಿಕೆಗಳು:

*ಯೋಜನಾ
*ಕರ್ನಾಟಕ ವಿಕಾಸ
*ಜನಪದ
* ಸ್ಪರ್ಧಾಚೈತ್ರ
*ಸ್ಪರ್ಧಾ ವಿಜೇತ
*ಬುತ್ತಿ

Sunday, 10 January 2016


ಕನ್ನಡ ಮಾಧ್ಯಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ವಿಜ್ಞಾನ ವಿಷಯದ ಉತ್ತಮ ಪುಸ್ತಕಗಳು ಲಭ್ಯವಿಲ್ಲ ಎಂಬ ಅಭಿಪ್ರಾಯವಿದೆ.ಅದು ನಿಜ ಕೂಡ.

Objective type ಮತ್ತು ವಿವರಣಾತ್ಮಕ ಪರೀಕ್ಷೆಗಳಿಗೆ ಉತ್ತರ ಬರೆಯಲು ಸಧ್ಯ ಕನ್ನಡದಲ್ಲಿ ಲಭ್ಯವಿರುವ ವಿಜ್ಞಾನ ಪುಸ್ತಕಗಳು:

*ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಜ್ಞಾನ ಪುಸ್ತಕಗಳು

*ಸಾಮಾನ್ಯ ವಿಜ್ಞಾನ ‌- SMV ಗೋಲ್ಡ್

*ಸಾಮಾನ್ಯ ವಿಜ್ಞಾನ-ಸ್ಪರ್ಧಾಚೈತ್ರ

*ಸಾಮಾನ್ಯ ವಿಜ್ಞಾನ -ಕೆ.ಎಂ.ಸುರೇಶ್

*ವಿಜ್ಞಾನ ಮತ್ತು ತಂತ್ರಜ್ಞಾನ- ಹರಿಪ್ರಸಾದ್

*ತಂತ್ರಜ್ಞಾನ - ಬಾಲರಾಜು

*ಪರಿಸರ ಅಧ್ಯಯನ- ರಂಗನಾಥ್

*ಪ್ರಾಕೃತಿಕ ಭೂಗೋಳಶಾಸ್ತ್ರ- ರಂಗನಾಥ್

*ಪರಿಸರ ಅಧ್ಯಯನ - ಭೈರಪ್ಪ

*ನವಕರ್ನಾಟಕ ಪ್ರಕಾಶನದ ವಿಜ್ಞಾನ ಪುಸ್ತಕಗಳು

ಪ್ರಚಲಿತ ಘಟನೆಗಳಿಗಾಗಿ ಕನ್ನಡ ಮಾಧ್ಯಮದವರು ಪ್ರತಿದಿನ ಪ್ರಜಾವಾಣಿ,ವಿಜಯ ಕರ್ನಾಟಕ ಪತ್ರಿಕೆಗಳನ್ನು ಓದಿ,ಒಂದು ನೋಟ್ ಬುಕ್ಕಿನಲ್ಲಿ ಆಯಾ ದಿನದ ಮುಖ್ಯ ಸಂಗತಿಗಳನ್ನು ಬರೆದಿಡಬೇಕು.ಬರೆಯುವಾಗ ರಾಷ್ಟ್ರೀಯ,ಅಂತರರಾಷ್ಟ್ರೀಯ,ರಾಜ್ಯ,ಆರ್ಥಿಕ ,ಕ್ರೀಡೆ,ಪ್ರಶಸ್ತಿ -ಎಂಬ ಶೀರ್ಷಿಕೆಗಳ ಅಡಿಯಲ್ಲಿ ನೋಟ್ಸ್ ಮಾಡಿಕೊಳ್ಳಬೇಕು.ಕನ್ನಡ ಮಾಧ್ಯಮದವರಾಗಿದ್ದರೂ ಪ್ರತಿದಿನ "ಹಿಂದು"ಪತ್ರಿಕೆ ಓದಿ ನೋಟ್ಸ್ ಮಾಡುವುದು ಒಳ್ಳೆಯದು.
ಇನ್ನು,ಪ್ರಜಾವಾಣಿ,ವಿಜಯ ಕರ್ನಾಟಕ ಪತ್ರಿಕೆಯ  ಪ್ರಚಲಿತ ಘಟನೆಗಳ ಕುರಿತಾದ ಸಂಪಾದಕೀಯ ಪುಟಗಳ ಲೇಖನಗಳು ಮತ್ತು ಇತರೆ ಸುದ್ದಿ ಲೇಖನಗಳಲ್ಲಿನ ಪ್ರಮುಖ ಅಂಶಗಳನ್ನು ಬರೆದಿಟ್ಟುಕೊಂಡರೆ,ಆ ವಿಷಯದ ಕುರಿತಾದ objective type ಮತ್ತು ವಿವರಣಾತ್ಮಕ ಪ್ರಶ್ನೆಗಳಿಗೆ ಉತ್ತರಿಸಲು ಸಹಾಯವಾಗುತ್ತದೆ.ಜೊತೆಗೆ ಆ ಲೇಖನಗಳನ್ನು ಕಟ್ ಮಾಡಿ ಸಹ  ಇಟ್ಟುಕೊಳ್ಳಬಹುದು. ವಿಜಯವಾಣಿ ಪತ್ರಿಕೆಯಲ್ಲಿಯೂ ಸಂಪಾದಕೀಯ ಪುಟಗಳಲ್ಲಿನ ಮತ್ತು ಇತರೆ ಲೇಖನಗಳು ಚೆನ್ನಾಗಿರುತ್ತವೆ.ಹಿಂದು ಪತ್ರಿಕೆಯ ಲೇಖನಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಬರೆದುಕೊಳ್ಳಬಹುದು.