Saturday, 15 June 2013

ಅಬಕಾರಿ ನಿರೀಕ್ಷಕರ ಪರೀಕ್ಷೆ ಉಳಿದ 50 ಪ್ರಶ್ನೆಗಳ ಕೀ ಉತ್ತರಗಳು:
51)  ಭೂಮಿಯ ಒಳಭಾಗದ ಯಾವ ಪದರವು ಸ್ನಿಗ್ಧ ಸ್ಥಿತಿಯಲ್ಲಿದೆ?
ಉ:- ಆಸ್ತನೋಸ್ಪಿಯರ್

52) ಕೆಳಕಂಡ ಯಾವ ನದಿಯಯ ಪಕ್ಷಿಪಾದದ ಡೆಲ್ಟಾವನ್ನು ರೂಪಿಸಿದೆ?
ಉ:- ಮಿಸಿಸಿಪ್ಪಿ

53) ವೆಗೆನೆರ್ ನು  ದಿಕ್ ಚ್ಯುತಿ ಸಿದ್ಧಾಂತವನ್ನು ಮುಖ್ಯವಾಗಿ ಈ ಕೆಳಕಂಡ ಅಂಶವನ್ನು ವಿವರಿಸಲು
      ಪ್ರತಿಪಾದಿಸಿದ
ಉ:-ಭೂರೂಪಗಳ ವಿತರಣೆ

54)  ಕೀಲ್ ಕಾಲುವೆಯು ಈ ಕೆಳಗಿನವುಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಉ:- ಬಾಲ್ಟಿಕ್ ಸಮುದ್ರ ಹಾಗೂ ನಾರ್ತ್ ಸೀ

55)  ವಾತಾವರಣದ ಶಾಖ ಎರಿಕೆ ಹೇಗೆ ನಡೆಯುತ್ತದೆ?
ಉ:- ಭೂಮಿಯ ವಿಕಿರಣದಿಂದ

56)  ಕೊಟೋಪಾಕ್ಷಿ ಇರುವುದೆಲ್ಲಿ?
ಉ:- ಈಕ್ವೆಡಾರ್

57) ಪದರ ಕಳುಚುವಿಕೆ (Exfoliation) ಯು ಒಂದು
ಉ:- ರಾಸಾಯನಿಕ ಪ್ರಕ್ರಿಯೆ


58) ಚಿಕ್ಕದಾದ ಮಳೆಹನಿಗಳು ದುಂಡನೆಯ ಆಕಾರದಲ್ಲಿರುವುದಕ್ಕೆ ಕಾರಣ
ಉ:- ಮೇಲ್ಮೈ ಕರ್ಷಣ

59) ಅಂತರರಾಷ್ಟ್ರೀಯ ಖಗೋಳ ಶಾಸ್ತ್ರೀಯ ಸಂಘ (IAU) ವು ಗ್ರಹಗಳನ್ನು ಕುರಿತಂತೆ ನೀಡಿರುವ
     ಇತ್ತೀಚಿನ ವ್ಯಾಖ್ಯಾನದ ಪ್ರಕಾರ, ಈ ಕೆಳಗಿನದು ಗ್ರಹ ಎನಿಸಿಕೊಳ್ಳುವುದಿಲ್ಲ.
ಉ:- ಪ್ಲೂಟೊ

60) UHF  ಪಟ್ಟಯ ಅವರ್ತಾಂಕ ವ್ಯಾಪ್ತಿ ಎಷ್ಟು?
ಉ:- 300 ರಿಂದ 3000 ಮೆಗಾಹರ್ಟ್ಜ್

61) ಡೀಸೆಲ್ ಇಂಜಿನ್ನಿನಲ್ಲಿ ಈ ಕೆಳಗಿನವುಗಳು ಬಳಕೆಯಾಗುತ್ತವೆ.
ಉ:-ಸಿಲಿಂಡರ್ ಮತ್ತು ಪಿಸ್ಟನ್,

62) ಸಿಸ್ಟ್ಯೆಟಿಸ್ ಎಂಬ ಸೋಂಕು ಯಾವ ಅಂಗಕ್ಕೆ ಸಂಬಂಧಿಸಿದೆ?
ಉ:-ಮೂತ್ರಕೋಶ

63) ವಿಶ್ವ ಅರಣ್ಯ ದಿನವನ್ನು ಆಚರಿಸಲಾಗುವ ದಿನಾಂಕ ಯಾವುದು?
ಉ:- 21 ನೇ ಮಾರ್ಚ್

64) ಪಟಾಕಿಗಳಿಗೆ ಕೆಳಕಂಡ ಧಾತುಗಳ ಲವಣ ಗಳಿಂದ ಒಣ್ಣವನ್ನು ನೀಡಲಾಗುತ್ತದೆ.
ಉ:- ಸ್ಟ್ರಾನ್ಯಿಯಂ ಮತ್ತು ಬೇರಿಯಂ

65) ಕೊಳಚೆ ನೀರಿನ ಸಂಸ್ಕರನ ವ್ಯವಸ್ಥೆಗಳಲ್ಲಿ ನೀರನ್ನು ಕ್ರಿಮಿಶುದ್ಧಗೊಳಿಸುವುದಕ್ಕಾಗಿ ಯಾವ ಎರಡು 
    ಅನಿಲಗಳ ಬಳಕೆಯಾಗುತ್ತದೆ?
ಉ:- ಒಜೋನ್ ಮತ್ತು ಜಲಜನಕ

66) ಗ್ರಾಫೀನ್ ಎಂಬುದು ನ್ಯಾನೊ ತಂತ್ರಜ್ಞಾನದ ುತ್ಪನ್ನವಾಗಿದೆ. ಇದರ ಮಹತ್ವವೇನು?
ಉ:- ಇದು ಅತ್ಯಂತ ತೆಳುವಾದ, ಬಲವಾದ ಎರಡು ಆಯಾಮಗಳ ವಸ್ತುಗಳಲ್ಲೊಂದಾಗಿದೆ.

67) ಒಂದು ಯಂತ್ರವು 0,1,2,3,4,5 ಎಂಬುದನ್ನು ಅನುಕ್ರಮವಾಗಿ  0,1,10,11,100,101 ಎಮಬುದಾಗಿ
    ವಾಚಿಸಿದರೆ 7 ಎಂಬುದರ ವಚನಾಂಕ ಯಾವುದು?
ಉ:-1001

68) ಒಂದು ಸಮಭುಜೀಯ ತ್ರಿಕೋನದ ಪಾರ್ಶ್ವವನ್ನು ಅಷ್ಟೇ ಎತ್ತರದ ಇನ್ನೊಂದು ಸಮಭುಜೀಯ
    ತ್ರಿಕೋನದ ಪಾರ್ಶ್ವಕ್ಕೆ ಅಂಟಿಸಿದರೆ ಯಾವ ಆಕಾರ ಸಿಗುತ್ತದೆ?
ಉ:-ಸಮಾಂತರ ಚತುರ್ಭುಜ

69) ದ್ಯುತಿ ಎಳೆಯು ಕೆಳಕಂಡ ತತ್ವದನ್ವಯ ಕಾರ್ಯ ನಿರ್ವಹಿಸುತ್ತದೆ.
ಉ:-ಸಂಪೂರ್ಣ  ಅಂತರಿಕ  ಪ್ರತಿಫಲನ

70)  ಒಂದು ಪೂರ್ಣ ಸಂಖ್ಯೆ ಹಾಗೂ ಅದರ ಅನಂತರದ ಸಂಖ್ಯೆಯ ಮೊತ್ತವನ್ನು ಇನ್ನುಂದು
     ಪೂರ್ಣಸಂಕ್ಯೆ ಹಾಗೂ ಅದರ ಅನಂತರದ ಸಂಖ್ಯೆಯ ಮೊತ್ತಕ್ಕೆ ಕೂಡಿಸಿದಾಗ ಬರುವ ಮೊತ್ತ 368  
      ಆಗಿದೆ. ಕೂಡುವಿಕೆಯ ಬದಲು ಕಳೆಯುವಿಕೆ ಮಾಡಿದರೆ ಬರುವ ವ್ಯತ್ಯಾಸ 78 ಹಾಗಿದ್ದರೆ ಈ
     ಸಂಖ್ಯೆಗಳು ಯಾವುವು?
ಉ:- 72 ಮತ್ತು 111

 71) 7,13,23,37,56,67 ಎಂಬ ಸಂಖ್ಯಾ ಸರಣಿಯಲ್ಲಿ ಒಂದು ಸಂಖ್ಯೆಯು ಒಂದು ಸಂಖ್ಯೆಯು
     ತಪ್ಪಾಗಿದೆ. ಇಲ್ಲಿರಬೇಕಾಗಿದ್ದ  ಸರಿಯಾದ ಸಂಖ್ಯೆ ಯಾವುದು?
ಉ:- 55

72)  ಒಂದು ಗಡಿಯಾರದಲ್ಲಿ ಸಂಜೆ 3:25 ಆಗಿದ್ದಾಗ ನಿಮಿಷದ ಮುಳ್ಳು ಹಾಗೂ ಗಂಟೆಯ ಮುಳ್ಳು
      ನಡುವೆ ಇರುವ ಕೋನ ಎಷ್ಟು?
ಉ:- {471/2}

73) A,B,C,D,E ಮತ್ತು  F ಎಂಬ ಆರು ರಾಜಕಾರಣಿಗಳು ಒಂದು ಸಭೆಯಲ್ಲಿ ಸಾಲಾಗಿ ಕುಳಿತಿದ್ದಾರೆ.
    B ಎಂಬಾತನು F ಮತ್ತು D ಗಳ ಮಧ್ಯೆ ಕುಳಿತಿದ್ದಾನೆ. E ಎಂಬಾತನು A ಮತ್ತು C ಗಳ ಮಧ್ಯೆ
    ಕುಳಿತಿದ್ದಾನೆ. A ಎಂಬಾತನು F ಅಥವಾ D ಯ ಪಕ್ಕದಲ್ಲಿ ಕುಳಿತಿಲ್ಲ. C ಎಂಬಾತನು D
    ಎಂಬಾತನ ಪಕ್ಕದಲ್ಲಿ ಕುಳಿತಿಲ್ಲ. ಹೀಗಿದ್ದಾಗ F ಎಂಬಾತನು ಯಾರ ನಡುವೆ ಕುಳಿತಿ್ದ್ಆನೆ?
ಉ:- B ಮತ್ತು C

74) 7 ಅಂಕಿಗಳ ಸಂಖ್ಯೆ 5 * 9 * 7 * 3 ರಲ್ಲಿ * ಎಂಬುದು ಕಾಣೆಯಾಗಿರುವ ಅಂಕಿ. ಈ ಅಂಕಿಯು
     11 ಭಾಗಿಸಲ್ಪಟ್ಟರೆ, ಕಾಣೆಯಾಗಿರುವ * ಅಂಕಿ ಯಾವುದು?
ಉ – 8

75) ಇಡೀ ದಿನವನ್ನು 24 ಗಂಟೆಗಳಿಗೆ ಬದಲಾಗಿ 20 ಗಂಟೆಗಳಾಗಿ ವಿಭಾಗಿಸಿದರೆ, ಈ ಹೊಸ
   ವ್ಯವಸ್ಥೆಯಲ್ಲಿ ಒಂದು ರೈಲು 108 ನಿಮಿಷಗಳಷ್ಟು ತಡವಾಗಿದ್ದರೆ, ಇಲ್ಲಿ ವಾಸ್ತವಾಗಿ ವಿಳಂಬವಾದ
   ಕಾಲ ಎಷ್ಟು?
ಉ:- 90 ನಿಮಿಷಗಳು
76) 3 ಸೆಂ ಮೀ ತ್ರಿಜ್ಯ ಹಾಗೂ ಸೆಂ ಮೀ ಎತ್ತರ ಇರುವ  ಒಂದು ಶಂಕುವಿನ ಗಾತ್ರವು ಅಷ್ಟೇ ತ್ರಿಜ್ಯ
     ಹಾಗೂ ಎತ್ತರ ಇರುವ ಒಂದು ಸಿಲಿಂಡರಿನ ಗಾತ್ರದ ಮೂರನೇ ಒಂದು  ರಷ್ಟಿದ್ದರೆ, ಆಗ
     ಸಿಲಿಂಡರ್ ಹಾಗೂ ಅಂತಹ ಮೂರು ಶಂಕುಗಳ ಗಾತ್ರಗಳ ಮೊತ್ತವು ______(x=22/7 ಎಂದು
     ಇಟ್ಟುಕೊಳ್ಳಿ)
ಉ:-396 ಚ.ಸೆಂ.ಮೀ.

77) (a + x b) ಎಂದರೆ (a x b) + (a + b) ಎಂದರ್ಥ ಮತ್ತು (c) x + (d) ಎಂದರೆ (c x d) – (c + d )
    ಎಂದರ್ಥ, ಆಗ ( 3 + x 4) x + (0 + x 2)=
ಉ:- 17

78) ಬಾಲಕಿಯರ ಶಿಕ್ಷಣದ ಕಿರಿಯ ಹೋರಾಟಗಾರ್ತಿ ಹಾಗೂ 2012 ರ ಅಕ್ಟೋಬರ್, ತಾಲಿಬಾನ್
     ಭಯೋತ್ಪಾದಕ ಧಾಳಿಯಲ್ಲಿ ಬದುಕುಳಿದ ಮಲಾಲ ಯೂಸುಫ್ಜಾಯಿ ಯಾವ ದೇಶದವಳು?
ಉ:- ಪಾಕಿಸ್ತಾನ

79) 2012 ರಲ್ಲಿ ರಾಜ್ಯಸಭೆಗೆ ನಾಮಕರಣಗೊಂಡ ಕ್ರಿಕೆಟ್  ಪಟು
ಉ:- ಸಚಿನ್ ತಂಡೂಲ್ಕರ್

80) ಅಂಧರಿಗಾಗಿ, ಪುರುಷರ ಇಪ್ಪತ್ತು ಇಪ್ಪತ್ತು ವಿಶ್ವ ಕ್ರಿಕೆಟ್ ಕಪ್ ಪಂದ್ಯಗಳನ್ನು
    (2012)________ನಗರದಲ್ಲಿ ನಡೆಸಲಾಯಿತು.
ಉ:- ಬೆಂಗಳೂರಿನಲ್ಲಿ ಮತ್ತು ಭಾರತವು ವಿಜಯ ಪಡೆಯಿತು.


81) “ಮನುಷ್ಯನಿಗೆ ಅದು ಒಂದು ಸಣ್ಣ ಹೆಜ್ಜೆ ಆದರೆ ಮನುಕುಲಕ್ಕೆ ಅದು ಭಾರೀ ಜಿಗಿತ” ಈ ಪ್ರಸಿದ್ಧವಾದ
     ಹೇಳಿಕೆ ಯಾರದ್ದು?
ಉ:- ನೀಲ್ ಆರ್ಮ್ ಸ್ಟ್ರಾಂಗ್

82) 2012 ರ ಡಿಸೆಂಬರ್ ತಿಂಗಳಲ್ಲಿ ನಡೆದ ಕೆಳಕಂಡ ದೇಶದ ಸಾರ್ವತ್ರಿಕ ಚುನಾವಣೆಗಳಲ್ಲಿ, ಶ್ರೀ
   ಶಿನ್ಜೊ ಅಬೆಯವರು ಲಿಬರಲ್ ಪ್ರಜಾಸತ್ತಾತ್ಮಕ ಪಕ್ಷವನ್ನು ಯಶಸ್ವಿಯಾಗಿ ಅಧಿಕಾರಕ್ಕೆ ತಂದರು.
ಉ:-ಜಪಾನ್

83) ಸತತವಾಗಿ ನಾಲ್ಕು ಬಲನ್ ಡೋರ್ ಪ್ರಶಸ್ತಿಗಳನ್ನು ಗೆ್ದ್ಉಕೊಂಡ ದಾಖಲೆ ಮಾಡಿದ ಅಂತರ
     ರಾಷ್ಟ್ರೀಯ ಸಾಕರ್ ಆಟಗಾರ
ಉ:- ಲಿಯೊನೆಲ್ ಮೆಸ್ಸಿ

84) ಮೊದಲ ಮಹಿಳಾ ಕಬಡ್ಡಿ ವಿಶ್ವ ಕಪ್ (2012) ಗೆದ್ದುಕೊಂಡ ದೇಶ
ಉ:- ಭಾರತ

85) ಮಿಯನ್ಮಾರ್ ( ಬರ್ಮಾ) ನ ಶ್ರೀಮತಿ ಆಂಗ್ ಸಾನ್ ಸೂಕಿ ಇವರು
ಉ:- ವಿರೋಧ ಪಕ್ಷದ ನಾಯಕಿ

86) 2013 ರ ಆರಂಭದಲ್ಲಿ ಆಫ್ರಿಕಾದ ಮಾಲಿ ದೇಶದ ಕೆಲವು ಭಾಗಗಳನ್ನು ವಶಪಡಿಸಿಕೊಂಡಿದ್ದ
   ಇಸ್ಲಾಮಿಕ್ ದಂಗೆಕೋರರನ್ನು  ಉಚ್ಛಾಟಿಸುವುದಕ್ಕಾಗಿ ಈ ಕೆಳಗಿನ ದೇಶವು ಮಧ್ಯ ಪ್ರವೇಶ
   ಮಾಡಿತು.
ಉ:-ಫ್ರಾನ್ಸ್
87) ಬೆಂಗಳೂರನ್ನು ಈ ಕೆಳಗಿನ ಪ್ರದೇಶಕ್ಕೆ ಸಂಪರ್ಕಿಸುವ 1000 ಕಿಮೀ ಗ್ಯಾಸ್ ಕೊಳವೆ
    ಮಾರ್ಗವನ್ನು 2013 ರ ಫಬ್ರವರಿಯಲ್ಲಿ ಮೊದಲ ಬಾರಿಗೆ ರಾಜ್ಯ ಸ್ವಾಮ್ಯದ ಗ್ಯಾಸ್ ಅಥಾರಿಟಿ ಆಫ್
    ಇಂಡಿಯಾ ಲಿಮಿಟೆಡ್ ಕಾರ್ಯಾರಂಭಗೊಳಿಸಿತು.
ಉ:-ಮಹಾರಾಷ್ಟ್ರದಲ್ಲಿರುವ ದಭೋಲ್

88) ಏಷಿಯಾದ ಯಾವ ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಮೂರ್ತಿಯವರು 2013 ರ ಜನವರಿಯಲ್ಲಿ ಸಂಸತ್ತಿನಿಂದ ಖಂಡನೆಗೊಳಗಾದರು?
ಉ:-ಶ್ರೀ ಲಂಕಾ

89) ಈ ಕೆಳಗಿನ ನಗರದಲ್ಲಿ 2013 ರ ಜನವರಿಯಲ್ಲಿ ರಾಷ್ಟ್ರೀಯ ಸಾಹಿತ್ಯೋತ್ಸವ ನಡೆಯಿತು
ಉ:-ಜೈಪುರ್

90) 2013 ಎ ಮಾರ್ಚ್ ನಲ್ಲಿ ಪೋಪ್ ಫ್ರಾನ್ಸಿಸ್ 1 ಆಗಿ ಆಯ್ಕೆಯಾದ ಕಾರ್ಡಿನಲ್ ಜಾರ್ಜ್ ಮಾರಿಯೊ
    ಬರ್ಗಾಗ್ಲಿಯೋ ಯಾವ ದೇಶದವರು?
ಉ:-ಅರ್ಜೆಂಟೈನಾ

91) ಪ್ರತಿಷ್ಠಿತವಾದ ದಾದಾ ಸಾಹೇಬ್ ಫಾಲ್ಕೆ ಹಾಗೂ ಎನ್.ಟಿ.ರಾಮರಾವ್ ಚಲನಚಿತ್ರ ಪ್ರಶಸ್ತಿಗಳನ್ನು
    ಇತ್ತೀಚೆಗೆ (ಏಪ್ರಿಲ್ 2013 ) ಅನುಕ್ರಮವಾಗಿ ಈ ಕೆಳಗಿನವರಿಗೆ ನೀಡಲಾಯಿತು.
ಉ:- ಪ್ರಾಣ್ ಕಿಶನ್ ಸಿಕಂದ್ ಮತ್ತು ಅಮಿತಾಬ್ ಬಚ್ಚನ್



92) 2013 ರಲ್ಲಿ ನೀಡಲಾದ 85 ನೇ ವಾರ್ಷಿಕ ಅಕಾಡಮಿ ಪ್ರಶಸ್ತಿ ( ಆಸ್ಕರ್ ಪ್ರಶಸ್ತಿ) ಗಳ ಪೈಕಿ ಅಂಗಹ
      ಲೀ ಯವರ ಲೈಫ್ ಆಫ್ ಪೈ ಎಂಬ ಚಲನಚಿತ್ರ ಎಷ್ಟು ಪ್ರಶಸ್ತಿಗಳನ್ನು ಗೆದ್ದುಕೊಂಡಿತು?
ಉ:- ನಾಲ್ಕು

93) ನ್ಯಾಯಾಮೂರ್ತಿ ಡಿ.ಎಚ್. ವಘೇಲಾ ಅವರಿಗಿಂತ ಮುಂಚೆ ಇದ್ದ ಕರ್ನಾಟಕ ಉಚ್ಚ
     ನ್ಯಾಯಾಲಯದ ಮುಖ್ಯ ನ್ಯಾಯಾಮೂರ್ತಿ ಯಾರು?
ಉ:- ವಿಕ್ರಂಜಿತ್ ಸೆನ್

94) ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ವಿಕಾಸ್ ಗೌಡ ಅವರ ಹೆಸರು ಯಾವ ಅಥ್ಲೆಟಿಕ್ ಆಟಕ್ಕೆ
     ಸಂಬಂಧಿಸಿದೆ?
ಉ:-ಡಿಸ್ಕಸ್ ಎಸೆತ

95) ಐದು ದೇಶಗಳ ಒಂದು ಸಮೂಹಕ್ಕೆ ಸಂಬಂಧಿಸಿದ BRICS ಎಂಬಸಂಕ್ಷಿಪ್ತ ರೂಪದಲ್ಲಿ B ಮತ್ತು C
    ಅಕ್ಷರಗಳು ಅನುಕ್ರಮವಾಗಿ ಯಾವ ದೇಶಗಳನ್ನು ಪ್ರತಿನಿಧಿಸುತ್ತವೆ?
ಉ:-ಬ್ರೆಜಿಲ್ ಮತ್ತು ಚೀನಾ

96)ಚೀನಾದ ಈಗಿನ ಅಧ್ಯಕ್ಷರು
     ಉ: ಕ್ಸಿ ಜಿನ್ ಪಿಂಗ್
97) ನೊವಾರ್ಟಿಸ್ ಉತ್ಸನ್ನವೊಂದರ ಮಾರ್ಪಾಟಿಗೆ ಪೇಟೆಂಟ್ ನೀಡಬೇಕೆಂಬ ಮನವಿಯನ್ನು
    ತಿರಸ್ಕರಿಸಿ 2013 ರ ಏಪ್ರಿಲ್ ನಲ್ಲಿ ಸರ್ವೊಚ್ಚ ನ್ಯಾಯಾಲಯವು ನೀಡಿದ ಒಂದು ಮಹತ್ವದ ತೀರ್ಪು
    ಯಾವ ಔಷಧಕ್ಕೆ ಸಂಬಂಧಿಸಿದ್ದಾಗಿದೆ?
ಉ:-ದೀರ್ಘಕಾಲದ ಲುಕೇಮಿಯಾಗೆ ನೀಡವ ಗ್ಲೀವೆಕ್


98) ಇತ್ತೀಚೆಗೆ_________ತೀರದಿಂದಾಚೆಗೆ_______ ಕಡಲಸೈನಿಕರಿಂದ  ಭಾರತದ ಇಬ್ಬರು
     ಮೀನುಗಾರರು ಮರಣಾಂತಿಕ ಗುಂಡಿನೇಟಿಗೆ ತುತ್ತಾದರು. ಇದು ಗಂಭೀರವಾದ ಕಾನೂನು 
     ಹಾಗೂ  ರಾಜಕೀಯ ಗಮನವನ್ನು ಸೆಳೆದಿದೆ.
ಉ:- ಕೇರಳ, ಇಟಲಿಯ  ಕಡಲ ಸೈನಿಕರು.

99) ‘ ಟೈಗರ್ ’ ಮತ್ತು ‘ಪಿಜನ್ ‘ ಎಂಬ ಅಡ್ಡ ಹೆಸರುಗಳನ್ನು ಪಡೆದಿರುವ  ಅಂತರ  ರಾಷ್ಟ್ರೀಯ
     ಕ್ರಿಕೆಟ್ ಪಟುಗಳ ಹಸರುಗಳು ಅನುಕ್ರಮ ವಾಗಿ ಹೀಗಿವೆ.
ಉ:-ಎಂ.ಎ.ಕೆ.ಪಟೌಡಿ ಮತ್ತು ಗ್ಲೆನ್ ಮೆಕ್ ಗ್ರಾತ್

100) 2013 ರ ಏಪ್ರಿಲ್ ನಲ್ಲಿ ಇರುವಂತೆ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ
ಉ:- ಬಾನ್ ಕಿ ಮೂನ್







Friday, 14 June 2013

ಅಬಕಾರಿ ಉಪನಿರೀಕ್ಷಕರ ಪರೀಕ್ಷೆ – 2013
Series-B   
ಮೊದಲ 50 ಪ್ರಶ್ನೆಗಳ ಕೀ ಉತ್ತರಗಳು    

1. 2013ರ ಏಪ್ರಿಲ್ ನಲ್ಲಿ ಭಾರತದ ರಿಸರ್ವ್ ಬ್ಯಾಂಕಿನ ಗೌರ್ನರ್ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷರ  
    ಹೆಸರುಗಳು ಅನುಕ್ರಮವಾಗಿ --------------- ಮತ್ತು -----------------.
    ಉ:-  ಡಿ.ಸುಬ್ಬರಾವ್ ಮತ್ತು ಮಾಂಟೆಕ್ ಸಿಂಗ್ ಅಹ್ಲುವಾಲಿಯಾ

2.  ಪ್ರಸ್ತುತದಲ್ಲಿ ಪುರುಷರ ಹಾಗೂ ಮಹಿಳೆಯರ ವಿಶ್ವಕಪ್ ಕ್ರಿಕೆಟೆ ಪಂದ್ಯಗಳನ್ನು ಅನುಕ್ರಮವಾಗಿ ----------- 
    ಮತ್ತು ----------- ದೇಶಗಳು ನಡೆಸುತ್ತಿವೆ.
   ಉ:- ಆಸ್ಟ್ರೇಲಿಯಾ ಮತ್ತು ಭಾರತ

3. ಇತ್ತೀಚೆಗೆ -------------- ನದಿಯ ನೀರನ್ನು ದೇಶವು ತಿರುಗಿಸಿಕೊಳ್ಳಲು ಯೋಜನೆಗಳನ್ನು ಹಾಕುತ್ತಿರುವುದು
    ಭಾರತಕ್ಕೆ ಕಳವಳವನ್ನು ಉಂಟು ಮಾಡಿದೆ.
    ಉ:- ಬ್ರಹ್ಮಪುತ್ರ, ಚೀನಾ

4. ಬಂಧನದಲ್ಲಿದ್ದ ಅಪರಾಧಿಗಳನ್ನು ನೇಣಿಗೇರಿಸಿದ ಎರಡು ಪ್ರಕರಣಗಳಿಂದಾಗಿ, ಮರಣ ದಂಡನೆ ಕುರಿತಂತೆ
  ಭಾರತದಲ್ಲಿ ಮತ್ತೋಮ್ಮೆ ಚರ್ಚೆಗಳು ನಡೆದಿವೆ.  ಜಗತ್ತಿನಲ್ಲಿ ಈಗ ಮರಣ ದಂಡನೆಯನ್ನು ಸುಮಾರು ಎಷ್ಟು 
  ದೇಶಗಳು ರದ್ದುಪಡಿಸಿವೆ?
   ಉ:- 150

   5 ಹಾಗೂ 6ನೇ ಪ್ರಶ್ನೆಪತ್ರಿಕೆಯಲ್ಲಿ ವಿವರಣೇ I ಮತ್ತು ವಿವರಣೆ II ಎಂಬ ಎರಡು ವಿವರಣೆಗಳಿವೆ.  ಕೆಳಕಂಡ
   ಸಂಕೇತಗಳನ್ನು ಬಳಸಿ ಇವುಗಳಿಗೆ ಉತ್ತರಿಸಿ.

5.I 2013ರ ಏಪ್ರಿಲ್ ನಲ್ಲಿ ನಿಧನರಾದ ಶ್ರೀಮತಿ ಮಾರ್ಗರೆಟ್ ಥ್ಯಾಚರ್ ರವರು ಬ್ರಿಟನ್ನಿನ ಮೊದಲ ಮಹಿಳಾ ಪ್ರಧಾನ  
 ಪ್ರಧಾನ ಮಂತ್ರಿಯಾಗಿದ್ದರು.

    II ಟೋನಿಬ್ಲೇರ್ ರವರು ಇಂಗ್ಲೆಂಡಿನ ಈಗಿನ ಪ್ರಧಾನ ಮಂತ್ರಿ.
ಉ:- (2) 1 ನೇ ವಿವರಣೆ ಮಾತ್ರ ಸರಿಯಾಗಿದೆ
             

  6. I  ಸಶಸ್ತ್ರ ಬಲಗಳ ವಿಶೇಷ ಅಧಿಕಾರ ಕಾಯಿದೆ (AFSPA) 1958 ರ ವಿರುದ್ಧ ಆಮರಣಾಂತ ಉಪವಾಸ ಚಳುವಳಿ
         ನಡೆಸಿದ  ಕಾರಣಕ್ಕಾಗಿ ಮುಣಿಪುರದ ಮುಹಿಳೆ ಇರೋಮ್ ಶರ್ಮಿಳಾ ಅವರು ಸುದ್ದಿಯಲ್ಲಿದ್ದರು.

      II  ಮೇಧಾ ಪಾಟ್ಕರ್ ಅವರು ಮಹಿಳಾ ಕಾದಂಬರಿಗಾರ್ತಿಯಾಗಿದ್ದು ಪ್ರತಿಷ್ಠಿತ ಬೂಕರ್ ಬಹುಮಾನವನ್ನು
         ಗಳಿಸಿದ್ದಾರೆ.
     ಉ:- (2) 1 ನೇ ವಿವರಣೆ ಮಾತ್ರ ಸರಿಯಾಗಿದೆ


7. ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದೇ
     ಉ:- ಇಂಡೋನೇಷಿಯಾ

8. ಗಾಲಾಪಾಗೋಸ್ ಆರ್ಕಿಪೆಲಾಗೋ ಯಾವ ದೇಶಕ್ಕೆ ಸೇರಿದೆ?
    ಉ:- ಈಕ್ವೆಡಾರ್

9. ಐವರು ವಿದೇಶಿಯರು ಸೇರಿದಂತೆ ಹದಿನೇಳು ಮಂದಿಯ ಮರಣಕ್ಕೆ ಕಾರಣವಾದ ಹಾಗೂ 2013 ರ ಏಪ್ರಿಲ್ ನಲ್ಲಿ   
    ನ್ಯಾಯಾಲಯವು ತೀರ್ಪು ನೀಡಿರುವ “ ಜರ್ಮನ್ ಬೇಕರಿ ಪ್ರಕರಣ” ಸ್ಪೋಟಗಳ ನೆಡೆದದ್ದು
    ಉ:- ಪುಣೆ, 2010 ರಲ್ಲಿ

10. ಒಣ್ಣದ ಟಿ.ವಿ ಸೆಟ್ ಗಳಿಂದ CRT ಟ್ಯೂಬ್ ಮಾದರಿ ಬರುವ ಅಪಾಯಕಾರಿಯಾದ ವಿಕಿರಣಗಳು ಯಾವುವು?
     ಉ:- ಮೆದು ಕ್ಷ-ಕಿರಣಗಳು

11. 2013 ರ ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತರಾದ ಕರ್ನಾಟಕ ವ್ಯಕ್ತಿ
      ಉ:- ಬಿ.ಜಯಶ್ರೀ
12. ಆಸ್ಟ್ರೇಲಿಯಾದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾದವರು
      ಉ:- ರಿಕಿ ಪಾಂಟಿಂಗ್
13. ಇತ್ತೀಚೆಗೆ ನಿಧನರಾದ ಸುಪ್ರಸಿದ್ಧ ಕಾದಂಬರಿಕಾರ ಚಿನುವಾ ಅಚಿಬೆ ಯಾವ ದೇಶದವರು?
      ಉ:- ನೈಜೀರಿಯಾ

14. ಭಾರತದ ಮುಖ್ಯ ನ್ಯಾಯಾಮೂರ್ತಿ ಯಾರು?
      ಉ:- ಆಲ್ತಮಸ್ ಕಬೀರ್

15 .2012 ರ ಜುಲೈನಲ್ಲಿ ಭಾರತದ ಯಾವ ರಾಜ್ಯವು ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ಪ್ರಶಸ್ತಿ ಪ್ರಮಾಣಪತ್ರವನ್ನು   
     ಪಡೆದುಕೊಂಡಿತು?
    ಉ:- ಮಧ್ಯ ಪ್ರದೇಶ

16. ಭಾರತದಲ್ಲಿ ಜನವರಿ 25 ನ್ನು ಯಾವ ದಿನವೆಂದು ಆಚರಿಸಲಾಗುತ್ತದೆ?
      ಉ:- ರಾಷ್ಟ್ರೀಯಾ ಮತದಾರರ ದಿನ.

17. ಅಲಿಪ್ತ ಚಳುವಳಿ XVI  ನೇ ಶೃಂಗ ಸಭೆಯು 2012 ರಲ್ಲಿ ಎಲ್ಲಿ ನಡೆಯಿತು?
       ಉ:- ತೆಹರಾನ್

18. 2013 ರ ಜನವರಿಯಲ್ಲಿ, ಭಾರತದ ಗಣರಜ್ಯೋತ್ಸವ ಅಚರಣೆಯ ಮುಖ್ಯ ಅತಿಥಿಯಾಗಿದ್ದವರು
      ಉ:- ಭೂತಾನಿನ ರಾಜ ಜಿಗ್ಮೆ ಖೇಸರ್ ನಾಮ್ ಗೈಲ್ ವಾಂಗ್ ಚುಕ್

19. 2012 ರ ಜುಲೈನಲ್ಲಿ ನಡೆದ ಲಂಡನ್ ಒಲಂಪಿಕ್ಸ್ ನ ಪ್ರಾರಂಭೋತ್ಸವದಲ್ಲಿ ಭಾರತೀಯ ವಿಭಾಗದ ಧ್ವಜವನ್ನು    
       ಹಿಡಿದಿದ್ದವರು
    ಉ:-ಸುಶೀಲ ಕುಮಾರ್

20. 2012 -13 ರಲ್ಲಿ 20 ನೇ ಕಾನೂನು ಆಯೋಗದ ಅಧ್ಯಕ್ಷರಾಗಿ ನೇಮಕ ಗೊಂಡಿರುವವರು
     ಉ:- ನ್ಯಾಯಮೂರ್ತಿ ಡಿ.ಕೆ.ಜೈನ್

21.  2012 ರ ಜುಲೈನಲ್ಲಿ ನೆಡದ ಲಂಡನ್ ಒಲಂಪಿಕ್ಸ್ ಧ್ಯೇಯ ವಾಕ್ಯ
      ಉ:-  Inspire a Generation

22. 2012 ರಲ್ಲಿ ನೊಬಲ್ ಶಾಂತಿ ಪ್ರಶಸ್ತಿಯನ್ನು ಯಾರಿಗೆ ನೀಡಲಾಯಿತು?
     ಉ:- ಯೂರೋಪಿಯನ್ ಒಕ್ಕೂಟ

23.  ಯೂರೋಪಿಯನ್ ಒಕ್ಕೂಟದ ಹನ್ನೆರಡು ಸದಸ್ಯ ರಾಜ್ಯಗಳು ಯೂರೊ ಎಂಬ ತಮ್ಮ ಹೊಸ ನಾಣ್ಯ ಪದ್ಧತಿಯನ್ನು    
      ದಿನಾಂಕದಿಂದ ಜಾರಿಗೊಳಿಸಿದರು.
      ಉ:-  ಜನವರಿ 1, 2002
24.  2012ರ ಜುಲೈನಲ್ಲಿ, ಸಂಯುಕ್ತ ಸಂಸ್ಥಾನವು ಯಾವ ದೇಶವನ್ನು ಪ್ರಮುಖ Non-Nato ಮಿತ್ರರಾಷ್ಟ್ರ  ಎಂದು     
      ಘೋಷಿಸಿದೆ?
     ಉ:-  ಆಫ್ಘಾನಿಸ್ತಾನ

25.  2009 ರಲ್ಲಿ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮಕ್ಕೆ ಈ ಕೆಳಕಂಡಂತೆ ಪುನರ್ ನಾಮಕರಣ   
       ಮಾಡಲಾಯಿತು.
      ಉ:- ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮ.

26. “ಕಾನೂನು ಪ್ರಕಾರ ರಾಜ್ಯವು ನಿರ್ಣಯಿಸಿದ ರೀತಿಯಲ್ಲಿ ರಾಜ್ಯವು ಆದರಿಂದ ಹದಿನಾಲ್ಕರ ವಯಸ್ಸಿನವರೆಗಿನ ಎಲ್ಲಾ   
       ಮಕ್ಕಳಿಗೂ ಉಚಿತವಾಗಿ ಹಾಗೂ ಕಡ್ಡಾಯವಾಗಿ ಶಿಕ್ಷಣವನ್ನು ಒದಗಿಸತಕ್ಕದ್ದು.” ಇದು ಭಾರತದ ಸಂವಿಧಾನಕ್ಕೆ    
      ಸೇರ್ಪಡೆ ಮಾಡಲಾದ ಹೊಸ ಅನುಚ್ಛೇದ. ಇದು ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
      ಉ:- ಮೂಲಭೂತ ಹಕ್ಕುಗಳು.
27.   2012 ರ ಜೂನ್ 2 ರಂದು ಜೀವಾವಧಿ ಕಾರಾಗೃಹ ಶಕ್ಷೆಯನ್ನು ಪಡೆದ ಈಜಿಪ್ತ್ ಹಿಂದಿನ ಅಧ್ಯಕ್ಷರ ಹೆಸರೇನು?
        ಉ:-ಹೋಸ್ನಿ ಮುಬಾರಕ್.


28.  ರಷ್ಯಾ ದೇಶವು 2012 ರ ಆಗಸ್ಟ್ 22 ರಂದು_______ನೇ ಸದಸ್ಯ ದೇಶವಾಗಿ ವಿಶ್ವ ವ್ಯಪಾರ ಸಂಸ್ಥೆಗೆ ಪ್ರವೇಶಿಸಿತು.
        ಉ:-  156 ನೇ

29.  ರಾಜ್ಯವೊಂದರ ರಾಜ್ಯಪಾಲರು ಈ ಕೆಳಗಿನದನ್ನು ಮಾಡುವ ಹಾಗಿಲ್ಲ.
      ಉ:-ರಾಜ್ಯ ವಿಧಾನ ಮಂಡಲಕ್ಕೆ ಇರುವ ಕಾನೂನು ರೂಪಿಸುವ ಅಧಿಕಾರಕ್ಕೆ ಬದಲಾಗಿ ಆಧ್ಯಾದೇಶವನ್ನು   
      ಹೊರಡಿಸುವುದು.

30.  ಭಾರತೀಯ ಸಂವಿಧಾನದ 72 ನೇ ಅನುಚ್ಛೇದದ ಅನ್ವಯ, ರಾಷ್ಟ್ರಪತಿಯವರು ಕೆಳಕಂಡ ಅಧಿಕಾರವನ್ನು   
       ಚಲಾಯಿಸುವಂತಿಲ್ಲ.
       ಉ:- ಖುಲಾಸೆ ನೀಡಿಕೆ.
31. ಅತ್ಯಾಚಾರ ಹಾಗೂ ಕೊಲೆಯ ಅಪರಾಧಕ್ಕಾಗಿ ಜೈಲಿನಲ್ಲಿರಿಸಲಾದ ವ್ಯಕ್ತಿಯು
      ಉ:- ಸಂವಿಧಾನದ 21 ನೇ ಅನುಚ್ಛೇದದಲ್ಲಿರುವ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

32.  ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸಂವಿಧಾನದಲ್ಲಿ   
       ಒದಗಿಸಲಾಗಿದ ಅವಕಾಶಗಳು ಈ ಕೆಳಕಂಡ ಅವಧಿ ಮುಗಿದ ನಂತರ ನೀಮತು ಹೋಗುತ್ತವೆ.
       ಉ:- 70 ವರ್ಷಗಳು
33. ಪ್ರತಿಪಾದನೆ(A) : ಕೇಂದ್ರದ ನಾಗರಿಕ ಸೇವೆಗಳ ಒಬ್ಬ ಸದಸ್ಯನು ಇಲಾಖೆಯ ಹಣವನ್ನು ದುರುಪಯೋಗ   
     ಮಾಡಿಕೊಂಡಿದ್ದಕ್ಕಾಗಿ ನ್ಯಾಯಾಲಯದಿಂದ ತಪ್ಪಿತಸ್ಥನೆಂದು ನಿರ್ಣಯಿತವಾಗುತ್ತಾನೆ. ಹೀಗಾಗಿ ಆತನನ್ನು ವಜಾ   
     ಮಾಡುವಂತಿಲ್ಲ.
     ಕಾರಣ ( R ) : ಯಾವುದೇ ವ್ಯಕ್ತಿಯ ವಿರುದ್ಧ ಏನಾದರೂ ಆರೋಪಗಳನ್ನನು ಮಾಡಿದ್ದಾಗ ಅದಕ್ಕೆ ಸಂಬಂಧಿಸಿದಂತೆ   
     ಆತನ  ಅಹವಾಲುಗಳನ್ನು ಹೇಳಿಕೊಳ್ಳಲು ಆತನಿಗೆ ಸೂಕ್ತ ಅವಕಾಶ ಕೊಡದ ಹೊರತು ಆತನನ್ನು ವಜಾ   
    ಮಾಡುವಂತಿಲ್ಲ.



ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಬಳಸಿ ನಿಮ್ಮ ಉತ್ತರಗಳನ್ನು ಗುರುತು ಮಾಡಿ.
ಉ:-  A  ಮತ್ತು R ಎರಡು ಸರಿ. A ಗೆ R ಸರಿಯಾದ ವಿವರಣೆ

34. ಪಟ್ಟಿ | ನ್ನು ಪಟ್ಟಿ || ರೊಂದಿಸಿ. ಪಟ್ಟಿಗಲ ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಬಳಸಿ ನಿಮ್ಮ ಉತ್ತರವನ್ನು ಗುರುತು   
     ಮಾಡಿ
    ಉತ್ತರ-:- ( 3 ) A   B   C  D
                          4    5    1  2
    ಪಟ್ಟಿ-1                                                                       ಪಟ್ಟಿ-||
QUO Warranto                 ಒಂದು ಹುದ್ದೆಯನ್ನು ಹೊಂದಿರುವ ವ್ಯಕ್ತಿಯ ಅಧಿಕಾರವನ್ನು ಪ್ರಶ್ನಿಸುವುದು
Certiorari                         ಮಿತಿಮೀರಿದ ಅಧಿಕಾರ ವ್ಯಪ್ತಿಯ ಸಂದರ್ಭದಲ್ಲಿ ಅಧಿಕಾರವ್ಯಾಪ್ತಿಯ ರಿಟ್
Prohibition                      ಅಧಿಕಾರವನ್ನು ಮೀರದಂತೆ ಅಧೀನ ನ್ಯಾಯಾಲಯವನ್ನು ತಡೆಯುವುದು
Habeas Corpus               ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ನೀಡಲಾದ ನಿರ್ದೇಶನ

35. ಈ ಕೆಳಕಂಡ ಸಂದರ್ಭದಲ್ಲಿ ರಾಷ್ಟ್ರಪತಿಯವರು ತುರ್ತು ಪರಿಸ್ಥಿತಿಯ ಘೋಷಣೆಯನ್ನು ಹೊರಡಿಸಬಹುದು
      ಉ:- (2) 1,3,4 ನೇ ವಿವರಣೆಗಳು ಸರಿಯಾಗಿವೆ.

36. 1976 ರಲ್ಲಿ ಮಾಡಲಾದ ನಲವತ್ತೆರಡನೆ ತಿದ್ದುಪಡಿಯು ಭಾರತದ ಸಂವಿಧಾನಕ್ಕೆ ಈ ಕೆಳಕಂಡ ಪದಗಳನ್ನು    
      ಸೇರಿಸಿತು.
     ಉ:-  ಸಮಾಜವಾದಿ ಹಾಗೂ ಜಾತ್ಯಾತೀತ.
37.  ಒಬ್ಬ ಸ್ವತಂತ್ರ ರಾಜನೆಂದು ಶಿವಾಜಿಗೆ ಕಿರೀಟಧಾರಣೆ ಎಲ್ಲಿ ನಡೆಯಿತು?
       ಉ:-  ರಾಯ ಗಢ






38. ಕೆಳಗಿನವುಗಳನ್ನು ಸರಿಯಾಗಿ ಹೊಂದಿಸಿ
     ಉ:-     ( 3 )  A   B   C  D
                         3    4   1   2
       A                                       B
312 ನೇ ಅನುಚ್ಛೇದ                      ಅಖಿಲ ಭಾರತ ಸೇವೆಗಳು
368 ನೇ ಅನುಚ್ಛೇದ                      ಸಂವಿಧಾನದ ತಿದ್ದುಪಡಿ
131 ನೇ ಅನುಚ್ಛೇದ                      ಸರ್ವೋಚ್ಚ ನ್ಯಾಯಾಲಯದ ಮೂಲ ಅಧಿಕಾರ ವ್ಯಾಪ್ತಿ
280 ನೇ ಅನುಚ್ಛೇದ                      ಹಣಕಾಸು ಆಯೋಗದ ಸ್ಥಾಪನೆ

39. ಸೂರತ್ ನಲ್ಲಿ ಕಾರ್ಖಾನೆಯನ್ನು ಆರಂಭಸಲು ಬ್ರಿಟಷರ ಪರವಾಗಿ ಆಜ್ಷಾಪನೆ ಹೊರೆಇಸಿದ ಮೊದಲ ಮೊಘಲ್   
     ಚಕ್ರವರ್ತಿ
    ಉ:-  ಜಹಂಗೀರ್

40. ರಾಮ ಮತ್ತು ರಹಿಂ ಇವೆರಡೂ ಒಂದೇ ದೈವದ ಬೇರೆಬೇರೆ ಹೆಸರುಗಳು ಎಂದು ಹೇಳಿದವರು
      ಉ:- ಕಬೀರ್

41. ಕಪ್ಪು ರಂಧ್ರದ ದುರಂತವು ಕೆಳಕಂಡ ಕದನಕ್ಕೆ ಮುಖ್ಯ ಕಾರಣ
     ಉ:-ಪ್ಲಾಸಿ

42. ಬಾದಾಮಿ ಚಾಲುಕ್ಯರು ಅಭಿವೃದ್ಧಿ ಪಡಿಸಿದ ವಾಸ್ತು ಶಲ್ಪದ ಶೈಲಿ ಯಾವುದು?
     ಉ:-ವೆಸರ

43. ಈ ಕಳೆಕಂಡ ಪ್ರದೇಶದಲ್ಲಿ ಶಾಸನಗಳು ಚೋಳರ ಕಾಲದಲ್ಲಿದ್ದಂತಹ ಗ್ರಾಮಾಡಳಿತದ ವಿವರಗಳನ್ನು ಒದಗಿಸುತ್ತವೆ.
      ಉ:-ಉತ್ತರ ಮೆರೂರ್


 44. ಮೈಸೂರು ಚಲೊ ಚಳುವಳಿ ನಡೆದ ವರ್ಷ
      ಉ:- 1947

45. ಹಿಂದೂಸ್ತಾನ್ ಸೇವಾದಳವನ್ನು ಹುಬ್ಬಳ್ಳಿ ಯಲ್ಲಿ  ಸ್ಥಾಪಿಸಿದವರು
      ಉ:- ಡಾ.ಎನ್.ಎಸ್.ಹರ್ಡೀಕರ್

46 .  ಪಟ್ಟಿ | ಮತ್ತು || ನ್ನು ಸರಿಹೊಂದಿಸಿ ಕೆಳಕಂಡ ಸಂಕೇತಗಳನ್ನು ಬಳಸಿ ಸರಿ ಉತ್ತರ ತಿಳಿಸಿ

                ಪಟ್ಟಿ |                                         ಪಟ್ಟಿ-||
A.      ಆಹ್ಮದ್ ನಗರ                 1. ನಿಜಾಂ ಶಾಹಿ
B.      ಗೋಲ್ಕೊಂಡ                  2. ಕುತುಬ್ ಶಾಹಿ
C.      ಬೀಜಾಪುರ                     3. ಆದಿಲ್ ಶಾಹಿ
D.      ಬೀದರ್                          4. ಬರೀದ್ ಶಾಹಿ
           ಉತ್ತರ: (3) 1, 2, 3, 4

47. ಸಂವಿಧಾನ ಸಭೆಯ ಅಧ್ಯಕ್ಷರಾಗಿದ್ದವರು
     ಉ:- ಡಾ|| ರಾಜೇಂದ್ರ ಪ್ರಸಾದ್

48. ಕರ್ನಾಟಕ ರೈಲ್ವೆ ಜಾಲದ ಒಟ್ಟು ಉದ್ದವು ಸುಮಾರು______
      ಉ:-  3100 ಕಿ.ಮೀ

49. ಕಲಹರಿ ಮರುಭೂಮಿ ಎಲ್ಲಿದೆ?
      ಉ:- ಬೋಟ್ಸ್ ವಾನಾ

50. ಈ ಕೆಳಗಿನವುಗಳಲ್ಲಿ ದೊಡ್ಡ ಅಳತೆಯ ಭೂಪಟ ಯಾವುದು?
     ಉ:-  (ಕಡಸ್ಟ್ರಲ್ ) ಜಮೀನಿನ ಭೂಪಟಗಳು