Saturday, 28 November 2015

KAS Mains Books

ಪತ್ರಿಕೆ-2 : ಸಾಮಾನ್ಯ ಅಧ್ಯಯನ-1

ಭಾಗ 2: ಸಾಮಾಜಿಕ ಹಾಗೂ ರಾಜಕೀಯ ಚಿತ್ರಣ

ರಾಜ್ಯ ಸರ್ಕಾರದಿಂದ ಪ್ರಕಟಿತ ಪಿಯುಸಿ ಕನ್ನಡ ಮಾಧ್ಯಮದ ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರ ಪುಸ್ತಕಗಳು

ಕನ್ನಡ ಕನ್ನಡಿಗ ಕರ್ನಾಟಕ -  ಚಿದಾನಂದಮೂರ್ತಿ ,ಇತರರು

ಭಾರತೀಯ ಸಮಾಜ- ಶಂಕರರಾವ್

ಕರ್ನಾಟಕದ ಇತಿಹಾಸ  - ಫಾಲಾಕ್ಷ.

ಸಮಾಜಶಾಸ್ತ್ರ ಸಂಪುಟ 1 - ಶಂಕರರಾವ್

ಭಾರತದ ಸಂವಿಧಾನ - ಪಿ.ಎಸ್.ಗಂಗಾಧರ

ಗ್ರಾಮೀಣಾಭಿವೃದ್ಧಿ- ಹೆಚ್.ಆರ್.ಕೃಷ್ಣಯ್ಯಗೌಡ

ಗ್ರಾಮೀಣಾಭಿವೃದ್ಧಿ - ಕೆ.ಭೈರಪ್ಪ

ಭಾರತದ ಸಂವಿಧಾನ - ಮೇರುನಂದನ್

KAS Mains Books

ಪತ್ರಿಕೆ-2 : ಸಾಮಾನ್ಯ ಅಧ್ಯಯನ-1

ಭಾಗ 1:ಭಾರತ ಮತ್ತು ಕರ್ನಾಟಕದ ಇತಿಹಾಸ ಹಾಗೂ ಸಾಂಸ್ಕೃತಿಕ ಪರಂಪರೆ

ಭಾರತದ ಇತಿಹಾಸ-  ಸದಾಶಿವ

ಭಾರತದ ಇತಿಹಾಸ-  ಟಿ.ಜಿ.ಚಂದ್ರಶೇಖರಪ್ಪ

ಭಾರತೀಯ ಸಮಾಜ-  ಶಂಕರರಾವ್

ಪ್ರಾಚೀನ ಭಾರತ-  ಆರ್.ಎಸ್.ಶರ್ಮ

ಕರ್ನಾಟಕ ಸಾಂಸ್ಕೃತಿಕ ಸಮೀಕ್ಷೆ-  ತಿಪ್ಪೇರುದ್ರಸ್ವಾಮಿ

ಕರ್ನಾಟಕ ಸಂಸ್ಕೃತಿ-  ಚಿದಾನಂದಮೂರ್ತಿ

ಕರ್ನಾಟಕದ ಇತಿಹಾಸ-  ಕಾಮತ್
                               ಮತ್ತು ಫಾಲಾಕ್ಷ

ಕರ್ನಾಟಕ ಕೈಪಿಡಿ-  ಗೆಜೆಟಿಯರ್ ಇಲಾಖೆ

ರಾಜ್ಯ ಸರ್ಕಾರದಿಂದ ಪ್ರಕಟಿತ ಪಿಯುಸಿ ಕನ್ನಡ ಮಾಧ್ಯಮದ ಇತಿಹಾಸ  ಪುಸ್ತಕಗಳು

Thursday, 19 November 2015

"ವಿಜಯವಾಣಿ" ಲೇಖನ:

ಬಾಂಗ್ಲಾ-ಭಾರತ  ಗಡಿ ಒಪ್ಪಂದ: ಸಂವಿಧಾನಕ್ಕೆ 100ನೇ ತಿದ್ದುಪಡಿ


ದಶಕಗಳಿಂದ ಕಗ್ಗಂಟಾಗಿದ್ದ ಭಾರತ-ಬಾಂಗ್ಲಾ ಗಡಿ ಬಿಕ್ಕಟ್ಟು ಈಗ ಇತಿಹಾಸ. ಉಭಯ ರಾಷ್ಟ್ರಗಳ ನಡುವಿನ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವ ಜತೆಯಲ್ಲೇ ಸ್ನೇಹವನ್ನೂ ಬೆಸೆದಿದ್ದು ಈ ಒಪ್ಪಂದದ ವಿಶೇಷ. ಹುಟ್ಟಿ, ಬೆಳೆದ ಭೂಮಿ, ಅನ್ನ, ನೀರು ಕೊಟ್ಟ ಹೊಲಗದ್ದೆ, ಕೆರೆ, ಝರಿ ಎಲ್ಲವೂ ರಾತ್ರೋ ರಾತ್ರಿ ಅದಲು ಬದಲು. ದಿನದ ಹಿಂದೆ ಭಾರತದಲ್ಲಿದ್ದವರು ಕೆಲವೇ ಗಂಟೆಗಳಲ್ಲಿ ಬಾಂಗ್ಲಾ ನಾಗರಿಕರಾದರೆ, ಬಾಂಗ್ಲಾದಲ್ಲಿ ಹುಟ್ಟಿಬೆಳೆದವರು ಈಗ ಭಾರತದ ಪೌರರು. ಈ ಐತಿಹಾಸಿಕ ಭೂ ಪ್ರದೇಶ ಹಸ್ತಾಂತರ ಪ್ರಕ್ರಿಯೆ ಗಡಿ ಕದನ ನಡೆಸುತ್ತಿರುವ ವಿಶ್ವದ ಇತರೆ ರಾಷ್ಟ್ರಗಳಿಗೂ ಮಾದರಿಯಾಯಿತು.

 ವಿಶ್ವದ ಅತ್ಯಂತ ಕಗ್ಗಂಟಿನ ಸಮಸ್ಯೆ ಎಂದೇ ಪರಿಗಣಿಸಲ್ಪಟ್ಟಿದ್ದ ಭಾರತ- ಬಾಂಗ್ಲಾ ಗಡಿ ಸಮಸ್ಯೆಗೆ ಅಧಿಕೃತ ಪರಿಹಾರ ದೊರಕಿದೆ. ಶನಿವಾರ ಮಧ್ಯರಾತ್ರಿ ಐತಿಹಾಸಿಕ ಭೂಪ್ರದೇಶ ಹಸ್ತಾಂತರ ಪ್ರಕ್ರಿಯೆ ನಡೆದಿದ್ದು, ಈ ಸಂದರ್ಭ ಉಭಯ ದೇಶಗಳ ಜನರು ಸಂಭ್ರಮಾಚರಣೆ ನಡೆಸಿದರು. ಒಪ್ಪಂದದ ಪ್ರಕಾರ ಬಾಂಗ್ಲಾದೇಶದ 51 ಪರಾವೃತ ಹಳ್ಳಿಗಳು (ಎನ್‌ಕ್ಲೇವ್ಸ್) ಭಾರತದ ವ್ಯಾಪ್ತಿಗೆ ಬಂದಿದ್ದು 14000 ಜನರಿಗೆ ಭಾರತೀಯ ಪೌರತ್ವ ದೊರಕಿದೆ.

ಹಸ್ತಾಂತರ ಪ್ರಕ್ರಿಯೆ ಘೋಷಣೆ ವೇಳೆ ಹಾಜರಿದ್ದ ಅಧಿಕಾರಿಗಳು 111 ಹಳ್ಳಿಗಳಲ್ಲಿ ಬಾಂಗ್ಲಾದೇಶದ ಧ್ವಜ ಹಾಗೂ 51 ಹಳ್ಳಿಗಳಲ್ಲಿ ಭಾರತದ ಧ್ವಜಾರೋಹಣ ನಡೆಸಿದರು. 68 ಮೇಣದ ಬತ್ತಿ ಬೆಳಗುವ ಮೂಲಕ 68 ವರ್ಷಗಳ ಅತಂತ್ರ ಜೀವನವನ್ನು ಸಾಂಕೇತಿಕವಾಗಿ ಬಿಂಬಿಸಲಾಯಿತು. 162 ಹಳ್ಳಿಗಳ ಜನರಿಗೆ ಅಧಿಕೃತ ಪೌರತ್ವ ದೊರಕಿರುವ ಹಿನ್ನೆಲೆಯಲ್ಲಿ ಶಾಲೆ, ಆಸ್ಪತ್ರೆ ಮತ್ತಿತರ ಮೂಲಭೂತ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಲಿದೆ. ಪಡಿತರ ಚೀಟಿ, ಆಧಾರ್‌ಕಾರ್ಡ್‌ನಂಥ ಸೌಲಭ್ಯಗಳೂ ಈ ನಾಗರಿಕರಿಗೆ ಸಿಗಲಿವೆ.

ಗೊಂದಲಕ್ಕೆ ತೆರೆ: ಬ್ರಿಟಿಷ್ ಆಡಳಿತ ಮುಗಿದು ದೇಶ ಸ್ವತಂತ್ರವಾದ ಸಂದರ್ಭ ಸೃಷ್ಟಿಯಾಗಿದ್ದ ಈ ಪ್ರದೇಶಗಳ ಗೊಂದಲ 1971ರ ಬಾಂಗ್ಲಾ-ಪಾಕ್ ಯುದ್ಧದ ಬಳಿಕವೂ ಹಾಗೇ ಮುಂದುವರಿದಿತ್ತು. 1974ರಲ್ಲಿ ಬಾಂಗ್ಲಾದೇಶ ಈ ವಿವಾದ ಬಗೆಹರಿಸುವ ಪ್ರಸ್ತಾಪ ಮಂಡಿಸಿತ್ತು. ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಢಾಕಾಗೆ ಭೇಟಿ ನೀಡಿದ್ದ ಸಂದರ್ಭ ಒಪ್ಪಂದಕ್ಕೆ ಅಂಕಿತ ಹಾಕಿದ್ದರು.

51 ಹಳ್ಳಿಗಳ 14000 ಜನರಿಗೆ ಭಾರತೀಯ ಪೌರತ್ವ111 ಗ್ರಾಮಗಳ 37 ಸಾವಿರ ಜನರು ಈಗ ಬಾಂಗ್ಲಾ ನಾಗರಿಕರು

 ಜನಸಂಖ್ಯೆ

2011ರ ಜನಗಣತಿಯ ಪ್ರಕಾರ 162 ಹಳ್ಳಿಗಳ ಒಟ್ಟು ಜನಸಂಖ್ಯೆ 51,549. ಈ ಪೈಕಿ ಬಾಂಗ್ಲಾದ ಪರಾವೃತ ಪ್ರದೇಶಗಳಲ್ಲಿ 14, 215 ಹಾಗೂ ಭಾರತದಲ್ಲಿ 37,334 ಜನರಿದ್ದಾರೆ.

ಬಾಂಗ್ಲಾಗೆ ಹೋಗಲು ಹಿಂಜರಿಕೆ

ಮಾಹಿತಿಯ ಪ್ರಕಾರ ಬಾಂಗ್ಲಾಕ್ಕೆ ಸೇರಿರುವ ಭಾರತದ 111 ಹಳ್ಳಿಗಳ ಒಂದಿಷ್ಟು ನಾಗರಿಕರಿಗೆ ಬಾಂಗ್ಲಾ ಪೌರತ್ವ ಪಡೆಯುವುದು ಇಷ್ಟವಿಲ್ಲ. ಈ ಪೈಕಿ 979 ಮಂದಿ ಭಾರತದ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದು ಇವರಲ್ಲಿ 169 ಮುಸ್ಲಿಮರೂ ಇದ್ದಾರೆ. ಇವರಿಗೆ ನವೆಂಬರ್ ಬಳಿಕ ಪೌರತ್ವ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಎನ್‌ಕ್ಲೇವ್‌ಎಂದರೆ..

ಪರ ದೇಶದ ಗಡಿಯಿಂದ ಸುತ್ತುವರಿದಿರುವ ಪ್ರದೇಶಕ್ಕೆ ಎನ್‌ಕ್ಲೇವ್(ಪರಾವೃತ ಪ್ರದೇಶ) ಎನ್ನಲಾಗುತ್ತದೆ. ಬಾಂಗ್ಲಾದಲ್ಲಿ ಭಾರತದ 111 ಹಾಗೂ ಭಾರತದಲ್ಲಿ ಬಾಂಗ್ಲಾದ 51 ಎನ್‌ಕ್ಲೇವ್‌ಗಳಿದ್ದವು. ಈ 162 ಪ್ರದೇಶಗಳು 18ನೇ ಶತಮಾನದಲ್ಲಿ ಕೂಚ್‌ಬಿಹಾರ್ ಮತ್ತು ರಂಗಾಪುರ ದೊರೆಗಳ ಆಡಳಿತಕ್ಕೆ ಒಳಪಟ್ಟಿದ್ದವು. 1947ರಲ್ಲಿ ಭಾರತ ಸ್ವತಂತ್ರವಾದ ಸಂದರ್ಭ ಎಲ್ಲ ಪ್ರದೇಶಗಳೂ ಭಾರತ ಮತ್ತು ಪಾಕಿಸ್ತಾನದ ನಡುವೆ ವಿಂಗಡಣೆಯಾದರೂ ಈ 162 ಹಳ್ಳಿಗಳ ವಿಷಯ ಮಾತ್ರ ಬಗೆಹರಿದಿರಲಿಲ್ಲ. ಹಾಗಾಗಿ ಇಲ್ಲಿ ನೆಲೆಸಿರುವ ನಾಗರಿಕರಿಗೆ ಅಧಿಕೃತವಾಗಿ ಯಾವ ದೇಶದ ಪೌರತ್ವವೂ ಸಿಕ್ಕಿರಲಿಲ್ಲ. ಮೂಲಸೌಕರ್ಯ ಪಡೆಯುವುದಕ್ಕೂ ಇವರು ಕಳ್ಳಹಾದಿ ತುಳಿಯುವ ಅನಿವಾರ್ಯತೆ ಇತ್ತು.

ಬಾಂಗ್ಲಾದಲ್ಲೂ ಗಡಿ ಸಂಭಮ...

ಗಡಿ ಒಪ್ಪಂದದಿಂದ 37000ಕ್ಕೂ ಹೆಚ್ಚು ಬಾಂಗ್ಲಾ ಜನರಿಗೂ ಅನುಕೂಲವಾಗಿದೆ. ‘ಹಿಂದೆ ಗುರುತಿನ ಚೀಟಿಯೂ ಇರಲಿಲ್ಲ. ಕೆಲಸ ಹುಡುಕಿಕೊಂಡು ಭಾರತಕ್ಕೆ ಹೋಗುತ್ತಿದ್ದೆವು. ಆ ಸಂದರ್ಭ ನಕಲಿ ಗುರುತುಪತ್ರಗಳನ್ನು ಮಾಡಿಸಿಕೊಳ್ಳಬೇಕಾಗುತ್ತಿತ್ತು. ಆದರೆ ಇನ್ನು ಮುಂದೆ ನಾವು ಬಾಂಗ್ಲಾ ನಾಗರಿಕರು. ಹಾಗಾಗಿ ಆ ಅನಿವಾರ್ಯತೆ ಇಲ್ಲ ಎಂದು ಸಂತಸ ಹಂಚಿಕೊಂಡಿದ್ದಾರೆ.

ಒಪ್ಪಂದದ ಪರಿಣಾಮ

ಭಯೋತ್ಪಾದಕರ ಒಳನುಸುಳುವಿಕೆಗೆ ತಡೆಗೆ ಸಹಕಾರಿ ಉಭಯ ದೇಶಗಳ ಗಡಿ ರಕ್ಷಣಾ ಪಡೆ ಸಿಬ್ಬಂದಿಗೂ ಅನುಕೂಲ ಮೂಲಸೌಕರ್ಯ ಕಲ್ಪಿಸಲು ಅನುಕೂಲ ಉಗ್ರರ ನಿಗ್ರಹ ಕಾರ್ಯಾಚರಣೆಗೂ ಪೂರಕ ಈಶಾನ್ಯ ರಾಜ್ಯಗಳಲ್ಲಿ ಶಾಂತಿ ನೆಲೆಸುವುದಕ್ಕೆ ಸಹಕಾರಿಯಾಗಲಿದೆ. ಪುನರ್ವಸತಿ ವ್ಯವಸ್ಥೆ ಏರ್ಪಟ್ಟು ನಾಗರಿಕರ ಬವಣೆ ತಪ್ಪಲಿದೆ.

Sunday, 15 November 2015

PSI ಪ್ರಬಂಧ ರೈತರ ಆತ್ಮಹತ್ಯೆ ಕುರಿತು ಕೇಳಬಹುದು..

Friday, 13 November 2015

PDO/RDO Books

ಈ ಪುಸ್ತಕಗಳು ಬೆಂಗಳೂರಿನ ವಿಜಯನಗರದ ಅರವಿಂದ ಬುಕ್ ಸ್ಟೋರಲ್ಲಿ ಸಿಗುತ್ತವೆ.

a4dable.in ನಲ್ಲಿ ಆನ್ ಲೈನ್ ಮೂಲಕ ಖರೀದಿಸಬಹದು.

Wednesday, 11 November 2015

Books

SDA, FDA, PDO, KAS(ಪೂರ್ವಭಾವಿ/ ಮುಖ್ಯಪರೀಕ್ಷೆ), PSI, SUB- REGISTRAR ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಬೇಕಾದ ಪುಸ್ತಕಗಳು :

ಇತಿಹಾಸ:

1.ಭಾರತದ ಸಮಗ್ರ ಇತಿಹಾಸ- ಟಿ. ಜಿ. ಚಂದ್ರಶೇಖರಪ್ಪ
2. ಭಾರತದ ಸಮಗ್ರ ಇತಿಹಾಸ- ಕೆ. ಸದಾಶಿವ
3.ಆಧುನಿಕ ಭಾರತ- ಬಿಪಿನ್ ಚಂದ್ರ.
4.ಸ್ವಾತಂತ್ರ್ಯದ ಹೋರಾಟ- ಬಿಪಿನ್ ಚಂದ್ರ
5.ಕರ್ನಾಟಕದ ಸಂಕ್ಷಿಪ್ತ ಚರಿತ್ರೆ - ಸೂರ್ಯನಾಥ ಕಾಮತ್
6. ಕರ್ನಾಟಕದ ಸಮಗ್ರ ಇತಿಹಾಸ - ಫಾಲಾಕ್ಷ

7.ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು-ಎನ್.ಪಿ.ಶಂಕರನಾರಾಯಣರಾವ್

ಭಾರತದ ಸಂವಿಧಾನ :

1. ಭಾರತದ ಸಂವಿಧಾನ ಮತ್ತು ರಾಜಕೀಯ- ಹೆಚ್.ಎಮ್.ರಾಜಶೇಖರ
2. ಭಾರತದ ಸಂವಿಧಾನ ಮತ್ತು ರಾಜಕೀಯ- ಪಿ.ಎಸ್. ಗಂಗಾಧರ್
3. ಭಾರತದ ಸಂವಿಧಾನ- ಮೇರುನಂದನ್

ಅರ್ಥಶಾಸ್ತ್ರ:

1. ಭಾರತದ ಆರ್ಥಿಕ ವ್ಯವಸ್ಥೆ – ಹೆಚ್ಆರ್ಕೆ
2. ಕರ್ನಾಟಕದ ಆರ್ಥಿಕತೆ – ನೇ.ತಿ.ಸೋಮಶೇಖರ್
3.ಅರ್ಥಶಾಸ್ತ್ರದ ಕುರಿತಾದ ಸ್ಪರ್ಧಾಚೈತ್ರದ ಪುಸ್ತಕಗಳು

ಭೂಗೋಳಶಾಸ್ತ್ರ:

1. ಭಾರತದ ಭೂಗೋಳಶಾಸ್ತ್ರ - ರಂಗನಾಥ್
2. ಪ್ರಪಂಚದ ಭೂಗೋಳಶಾಸ್ತ್ರ - ರಂಗನಾಥ್
3. ಕರ್ನಾಟಕದ ಭೂಗೋಳಶಾಸ್ತ್ರ – ರಂಗನಾಥ್ / ಪಿ.ಮಲ್ಲಪ್ಪ
4. ಭಾರತದ ಆರ್ಥಿಕ ಮತ್ತು ಪ್ರಾಕೃತಿಕ ಭೂಗೋಳಶಾಸ್ತ್ರ - ರಂಗನಾಥ್

ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಪರಿಸರ ವಿಜ್ಞಾನ:

1. 8, 9 ಮತ್ತು 10 ನೇ ತರಗತಿಯ ವಿಜ್ಞಾನ ಪುಸ್ತಕಗಳು
2. ಪರಿಸರ ವಿಜ್ಞಾನ - ರಂಗನಾಥ್ / ಕೆ.ಭೈರಪ್ಪ
3. ವಿಜ್ಞಾನ ಮತ್ತು ತಂತ್ರಜ್ಞಾನ – ಹರಿಪ್ರಸಾದ್ (ಸ್ಪರ್ಧಾಚೈತ್ರ) 
4. ನವಕರ್ನಾಟಕದ ಪ್ರಕಾಶನದ ವಿಜ್ಞಾನ ಪುಸ್ತಕಗಳು

ಪ್ರಚಲಿತ ಘಟನೆಗಳು: 

1. MANORAMA YEAR BOOK
2. ವಾಸನ್ಸ್ ಈಯರ್ ಬುಕ್
3. ಮಾಸಪತ್ರಿಕೆಗಳು - ಸ್ಪರ್ಧಾಚೈತ್ರ, ಬುತ್ತಿ, ಜನಪದ, ಯೋಜನಾ, ಕರ್ನಾಟಕ ವಿಕಾಸ
4. ದಿನಪತ್ರಿಕೆಗಳು - ಪ್ರಜಾವಾಣಿ, HINDU

ಯೋಜನೆಗಳು ಮತ್ತು ಇತರೆ:

1. INDIA -2016 year book
2. ECONOMIC SURVEY OF INDIA
3. ಕರ್ನಾಟಕ ಆರ್ಥಿಕ ಸಮೀಕ್ಷೆ
4. ಕರ್ನಾಟಕ ಕೈಪಿಡಿ 
5. ಕರ್ನಾಟಕ ಸಂಗಾತಿ
6. ಗ್ರಾಮೀಣಾಭಿವೃದ್ಧಿ – ಕೆ.ಭೈರಪ್ಪ
7. ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಕಟಣೆಗಳು

ಸಾಮಾನ್ಯ ಮನೋಸಾಮರ್ಥ್ಯ:
• ಮಾನಸಿಕ ಸಾಮರ್ಥ್ಯ - ಗುರುರಾಜ ಬುಲಬುಲೆ
• ಮನೋಸಾಮರ್ಥ್ಯ - ಸ್ಪರ್ಧಾಚೈತ್ರದ ಪ್ರಕಟಣೆ

ಸ್ನೇಹಿತರೆ ,ನಾನು ಶಂಕರ ಗೌಡಿ.
ಸರ್ಕಾರಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿ ನಡೆಸುತ್ತಿರುವ ಅಭ್ಯರ್ಥಿ.ಮೂರ್ನಾಲ್ಕು ಗ್ರೂಪ್ "ಸಿ" ಸರ್ಕಾರಿ   ಹುದ್ದೆಗಳಿಗೆ ಆಯ್ಕೆಯಾಗಿದ್ದೆ.ಎರಡು ವರ್ಷ ಸಚಿವಾಲಯದಲ್ಲಿ FDA ಆಗಿ ಕೆಲಸ ಮಾಡಿದ್ದೇನೆ. 2011 ರ ಕೆಎಎಸ್ ಬ್ಯಾಚಲ್ಲಿ ಯಾವುದೋ ಗ್ರೂಪ್ "ಬಿ" ಹುದ್ದೆಗೆ ಆಯ್ಕೆಯಾಗಿದ್ದೆ.ಆದರೆ ಅದು ರದ್ದಾಯಿತು.2014 ರ ಕೆಎಎಸ್ ಮುಖ್ಯ ಪರೀಕ್ಷೆ ಬರೆದಿರುವೆ.ನನ್ನದು ಕನ್ನಡ ಮಾಧ್ಯಮ.ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ಕನ್ನಡ ಮಾಧ್ಯಮದವರು ಎದುರಿಸುವ ಅಡ್ಡಿಗಳ ಕುರಿತು ನನಗೆ ಅರಿವಿದೆ.ಅಂತಹ ಅಭ್ಯರ್ಥಿಗಳಿಗೆ ನನಗೆ ತಿಳಿದಷ್ಟು ಸಲಹೆಗಳನ್ನು ಹೇಳಬೇಕೆಂದುಕೊಂಡಿದ್ದೇನೆ.
ಇದೇನು ಮಾರ್ಗದರ್ಶನವಲ್ಲ.ಸುಮ್ಮನೆ ನನ್ನ ಕನ್ನಡ ಮಾಧ್ಯಮದ ಸ್ನೇಹಿತರಿಗೆ ನನಗೆ ತಿಳಿದ ವಿಷಯಗಳನ್ನು ಹೇಳುವ ಪ್ರಯತ್ನ ಅಷ್ಟೇ.
ನನ್ನ ದೂರವಾಣಿ:9164874231.                  ಇ-ಮೇಲ್:goudishankar@gmail.com

Blog: shankargoudi.blogspot.com

Facebook ಮೆಸೇಜ್ ಬೇಡ.