ಮೋದಿ ಸರಕಾರದಿಂದ ನಿರ್ಮಾಣವಾಗಲಿದೆ ‘ಭಾರತಮಾಲಾ’ ರಸ್ತೆ..!
ಈ ಹಿಂದೆ ಎನ್’ಡಿಎ ಸರಕಾರದ ವೇಳೆ ಅಂದಿನ ಪ್ರಧಾನಿ ವಾಜಪೇಯಿ ಗೋಲ್ಡನ್ ಕ್ವಾಡ್ರಾಲ್ಯಾಟರಲ್ (ಸುವರ್ಣ ಚತುಷ್ಪಥ ರಸ್ತೆ) ನಿರ್ಮಿಸಿದ್ದರು. ಈ ಮೂಲಕ ದೇಶದ 4 ಮೂಲೆಗಳನ್ನು ರಸ್ತೆ ಮೂಲಕ ಬೆಸೆಯುವ ಕೆಲಸ ಮಾಡಿದ್ದರು. ಇದೇ ರೀತಿ ಈಗ ಪ್ರಧಾನಿ ನರೇಂದ್ರ ಮೋದಿ ಹೊಸ ಯೋಜನೆ ಹಾಕಿಕೊಂಡಿದ್ದಾರೆ. ಅದೇ ಭಾರತಮಾಲಾ ರಸ್ತೆ. ಈ ರಸ್ತೆಯ ಮೂಲಕ ಪೂರ್ವ, ಉತ್ತರ ಹಾಗೂ ಪಶ್ಚಿಮದ ಗಡಿ ಭಾಗಗಳನ್ನು ಬೆಸೆಯಲು ಮುಂದಾಗಿದ್ದಾರೆ.
ಏನಿದು ಭಾರತಮಾಲಾ ರಸ್ತೆ..?
ಭಾರತದ ಗಡಿ ಉದ್ದದಲ್ಲೂ ನಿರ್ಮಾಣವಾಗುವ ರಸ್ತೆ ಯೋಜನೆ ಇದು. ಗುಜರಾತ್’ನಿಂದ ಆರಂಭವಾಗುವ ಈ ರಸ್ತೆ ರಾಜಸ್ಥಾನ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರಪ್ರದೇಶ, ಬಿಹಾರ. ಸಿಕ್ಕಿಂ, ಅಸ್ಸಾಂ, ಅರುನಾಚಲ ಪ್ರದೇಶ, ಭಾರತ ಹಾಗೂ ಮಯನ್ಮಾರ್ ಗಡಿ ಮೂಲಕ ಸಾಗಿ ಮಣಿಪುರ-ಮಿಜೋರಾಂ ತಲುಪಲಿದೆ. ಯೋಜನೆ ಪೂರ್ಣಗೊಂಡ ಬಳಿಕ ಇಡೀ ರಸ್ತೆಯು ಮಾಲೆಯ ರೀತಿಯಲ್ಲಿ ಕಾಣುತ್ತದೆ. ಈ ಕಾರಣದಿಂದಾಗಿ ಭಾರತಮಾಲಾ ಎಂದು ಹೆಸರಿಡಲಾಗಿದೆ.
ಈ ಯೋಜನೆಗೆ 14 ಸಾವಿರ ಕೋಟಿ ರೂ. ಖರ್ಚು ಆಗಲಿದೆ ಎಂದು ಅಂದಾಜಿಸಲಾಗಿದೆ. ದಕ್ಷಿಣ ಭಾರತದ ಕರಾವಳಿ ನಗರಗಳನ್ನು ಬೆಸೆಯಲು ನಿರ್ಮಿಸಲು ಉದ್ದೇಶಿಸಿರುವ ‘ಸಾಗರ ಮಾಲಾ’ ಯೋಜನೆ ಜೊತೆ ಸಂಪರ್ಕಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ಯೋಜನೆಗೆ ಸಂಬಂಧಿಸಿದ ಎಲ್ಲ ಅನುಮತಿಗಳು ದೊರೆತಿದ್ದು, ಈ ವರ್ಷದ ಅತ್ಯಂಕ್ಕೆ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
ಇದರಿಂದ ಆಗುವ ಪ್ರಯೋಜನೆಗಳೇನು..?
> ಈ ರಸ್ತೆಯಿಂದಾಗಿ ಚೀನಾಗೆ ಪಾಠ ಕಲಿಸಿದಂತಾಗುತ್ತದೆ. ಏಕೆಂದರೆ ಚೀನಾ ಈಗಾಗಲೇ ಗಡಿಯಲ್ಲಿ ಉತ್ತಮ ರಸ್ತೆ ಹೊಂದಿದೆ. ಭಾರತವೂ ರಸ್ತೆ ನಿರ್ಮಿಸಿದರೆ ಚೀನಾಕ್ಕೆ ಉತ್ತರ ನೀಡಲು ಹಾಗೂ ಗಡಿಯಲ್ಲಿ ಸಂಪರ್ಕ ಸುಲಭವಾಗುತ್ತದೆ.
> ಯುದ್ಧದ ಸಂದರ್ಭದಲ್ಲಿ ಗಡಿಗೆ ಸಮರ ಸಾಮಗ್ರಿ ಹೊತ್ತೊಯ್ಯಲು ಹಾಗೂ ಯೋಧರನ್ನು ಸಾಗಿಸಲು ಬಳಸಲು ಕೆಟ್ಟದಾಗಿವೆ. ಈ ಯೋಜನೆಯಿಂದಾಗಿ ಸಂಚಾರ ಸುಲಭವಾಗಲಿದೆ.
> ರಸ್ತೆ ಅಭಿವೃದ್ಧಿಯಾದರೆ ಗಡಿಯಲ್ಲಿ ವ್ಯಾಪಾರ ಚಟುವಟಿಕೆ ವೃದ್ಧಿಯಾಗುತ್ತದೆ. ಆರ್ಥಿಕ ಚಟುವಟಿಕೆಗಳು ಗರಿಗೆದರುತ್ತದೆ.
ಒಟ್ಟಿನಲ್ಲಿ ಈ ಭಾರತಮಾಲಾ ರಸ್ತೆ ದೇಶದ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಕೇಂದ್ರ ರಸ್ತೆ ಇಲಾಖೆ ಕಾರ್ಯದರ್ಶಿ ವಿಜಯ್ ಛಿಬ್ಬರ್ ತಿಳಿಸಿದ್ದಾರೆ.
No comments:
Post a Comment