Thursday, 30 April 2015

ಕರ್ನಾಟಕ ಸರ್ಕಾರದ ನೂತನ ಕೈಗಾರಿಕಾ ನೀತಿಯ ಮುಖ್ಯಾಂಶಗಳು :
* ಶೇ. 12ರ ಬೆಳವಣಿಗೆಯ 2014-19 ರ ಕೈಗಾರಿಕಾ ನೀತಿ
* 5 ಲಕ್ಷ ಕೋಟಿ ಬಂಡಾವಳ ಹೂಡಿಕೆ ಮತ್ತು 15 ಲಕ್ಷ ಜನರಿಗೆ ಉದ್ಯೋಗ ನೀಡುವ ಗುರಿ
* ಪ್ರತಿ ವರ್ಷ 5000 - 8000 ಎಕರೆ ವಿಸ್ತೀರ್ಣದ 5 ಕೈಗಾರಿಕಾ ವಲಯ ಸ್ಥಾಪನೆ ಮಾಡುವದು
* ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಹೈ-ಕ ವಲಯದಲ್ಲಿ 2 ಕೈಗಾರಿಕಾ ವಲಯ ಸ್ಥಾಪನೆ
* ಕೈಗಾರಿಕೆ ಸ್ಥಾಪನೆ ಮಾಡಲು ವಲಯಗಳಾಗಿ ರಾಜ್ಯವನ್ನು ವಿಭಾಗ ಮಾಡುವುದು
* ವಲಯ 1 ರಲ್ಲಿ 23 ಅತ್ಯಂತ ಹಿಂದುಳಿದ ತಾಲೂಕುಗಳು, ವಲಯ 2 ರಲ್ಲಿ 51 ಅತೀ ಹಿಂದುಳಿದ ತಾಲೂಕುಗಳು
* ವಲಯ 3 ರಲ್ಲಿ 62 ಹಿಂದುಳಿದ ಮತ್ತು 4 ರಲ್ಲಿ 9 ಅಭಿವೃದ್ದಿ ತಾಲೂಕುಗಳು ಸೇರ್ಪಡೆ.
* ಹೈ-ಕ ವಲಯ 1 ರಲ್ಲಿ 20 ಅತ್ಯಂತ ಹಿಂದುಳಿದ ಹಾಗೂ 2 ರಲ್ಲಿ 11 ಅತೀ ಹಿಂದುಳಿದ ತಾಲುಕುಗಳ ಸೇರ್ಪಡೆ
* ಅತೀ ಸಣ್ಣ ಕೈಗಾರಿಕೆಗಳಿಗೆ ಶೇ 20 ರಷ್ಟು ಜಮೀನು * ಸಣ್ಣ ಕೈಗಾರಿಕೆಗಳಿಗೆ 10 ಲಕ್ಷದಿಂದ 20 ಲಕ್ಷ ಹಾಗೂ ಗರಿಷ್ಠ 20 ಲಕ್ಷದಿಂದ 45 ಲಕ್ಷ ಸಹಾಯಧನ ಏರಿಕೆ.
* ಮಧ್ಯಮ ಕೈಗಾರಿಕೆಗಳಿಗೆ ಕನಿಷ್ಠ 20 ರಿಂದ 30 ಲಕ್ಷ ಹಾಗೂ ಗರಿಷ್ಠ 30 ರಿಂದ 55 ಲಕ್ಷ ಸಹಾಯಧನ ಏರಿಕೆ
* ಎಸ್‍ಸಿ, ಎಸ್‍ಟಿ ವರ್ಗದವರಿಗೆ ಕೆಐಎಡಿಬಿ/ಕೆಎಸ್‌ಡಿಸಿ ಯಲ್ಲಿ ಶೇ 22.50 ರಷ್ಟು ಜಮೀನು ಕಾಯ್ದಿರಿಸುವಿಕೆ.
* ಮಹಿಳೆಯರು, ಅಂಗವಿಕಲರು ಮಾಜಿ ಸೈನಿಕರು, ಅಲ್ಪಸಂಖ್ಯಾತ ಹಿಂದುಳಿದ ವರ್ಗಗಳ ಉದ್ದಿಮೆದಾರರಿಗೆ ಶೇ 5 ರಷ್ಟು ಜಮೀನು ಕಾಯ್ದಿರಿಸುವಿಕೆ.
* ಹುಬ್ಬಳ್ಳಿ ಹಾರೋಹಳ್ಳಿಯಲ್ಲಿ ಮಹಿಳಾ ಕೈಗಾರಿಕಾ ವಲಯ ಸ್ಥಾಪನೆ, ಜವಳಿ ಆಭರಣ ಕ್ಷೇತ್ರದಲ್ಲಿ ಕ್ಲಸ್ಟರ್ ಸ್ಥಾಪನೆ * ಅನಿವಾಸಿ ಕನ್ನಡಿಗರಿಗೆ ಬಂಡವಾಳ ಹೂಡಿಕೆ ಪ್ರೋತ್ಸಾಹಧನ ಕೇಂದ್ರ ಸ್ಥಾಪನೆ

ಮೋದಿ ಸರಕಾರದಿಂದ ನಿರ್ಮಾಣವಾಗಲಿದೆ ‘ಭಾರತಮಾಲಾ’ ರಸ್ತೆ..!

ಈ ಹಿಂದೆ ಎನ್’ಡಿಎ ಸರಕಾರದ ವೇಳೆ ಅಂದಿನ ಪ್ರಧಾನಿ ವಾಜಪೇಯಿ ಗೋಲ್ಡನ್ ಕ್ವಾಡ್ರಾಲ್ಯಾಟರಲ್ (ಸುವರ್ಣ ಚತುಷ್ಪಥ ರಸ್ತೆ) ನಿರ್ಮಿಸಿದ್ದರು. ಈ ಮೂಲಕ ದೇಶದ 4 ಮೂಲೆಗಳನ್ನು ರಸ್ತೆ ಮೂಲಕ ಬೆಸೆಯುವ ಕೆಲಸ ಮಾಡಿದ್ದರು. ಇದೇ ರೀತಿ ಈಗ ಪ್ರಧಾನಿ ನರೇಂದ್ರ ಮೋದಿ ಹೊಸ ಯೋಜನೆ ಹಾಕಿಕೊಂಡಿದ್ದಾರೆ. ಅದೇ ಭಾರತಮಾಲಾ ರಸ್ತೆ. ಈ ರಸ್ತೆಯ ಮೂಲಕ ಪೂರ್ವ, ಉತ್ತರ ಹಾಗೂ ಪಶ್ಚಿಮದ ಗಡಿ ಭಾಗಗಳನ್ನು ಬೆಸೆಯಲು ಮುಂದಾಗಿದ್ದಾರೆ.

ಏನಿದು ಭಾರತಮಾಲಾ ರಸ್ತೆ..?

ಭಾರತದ ಗಡಿ ಉದ್ದದಲ್ಲೂ ನಿರ್ಮಾಣವಾಗುವ ರಸ್ತೆ ಯೋಜನೆ ಇದು. ಗುಜರಾತ್’ನಿಂದ ಆರಂಭವಾಗುವ ಈ ರಸ್ತೆ ರಾಜಸ್ಥಾನ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರಪ್ರದೇಶ, ಬಿಹಾರ. ಸಿಕ್ಕಿಂ, ಅಸ್ಸಾಂ, ಅರುನಾಚಲ ಪ್ರದೇಶ, ಭಾರತ ಹಾಗೂ ಮಯನ್ಮಾರ್ ಗಡಿ ಮೂಲಕ ಸಾಗಿ ಮಣಿಪುರ-ಮಿಜೋರಾಂ ತಲುಪಲಿದೆ. ಯೋಜನೆ ಪೂರ್ಣಗೊಂಡ ಬಳಿಕ ಇಡೀ ರಸ್ತೆಯು ಮಾಲೆಯ ರೀತಿಯಲ್ಲಿ ಕಾಣುತ್ತದೆ. ಈ ಕಾರಣದಿಂದಾಗಿ ಭಾರತಮಾಲಾ ಎಂದು ಹೆಸರಿಡಲಾಗಿದೆ.

ಈ ಯೋಜನೆಗೆ 14 ಸಾವಿರ ಕೋಟಿ ರೂ. ಖರ್ಚು ಆಗಲಿದೆ ಎಂದು ಅಂದಾಜಿಸಲಾಗಿದೆ. ದಕ್ಷಿಣ ಭಾರತದ  ಕರಾವಳಿ ನಗರಗಳನ್ನು ಬೆಸೆಯಲು ನಿರ್ಮಿಸಲು ಉದ್ದೇಶಿಸಿರುವ ‘ಸಾಗರ ಮಾಲಾ’ ಯೋಜನೆ ಜೊತೆ ಸಂಪರ್ಕಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ಯೋಜನೆಗೆ ಸಂಬಂಧಿಸಿದ ಎಲ್ಲ ಅನುಮತಿಗಳು ದೊರೆತಿದ್ದು, ಈ ವರ್ಷದ ಅತ್ಯಂಕ್ಕೆ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

ಇದರಿಂದ ಆಗುವ ಪ್ರಯೋಜನೆಗಳೇನು..?

> ಈ ರಸ್ತೆಯಿಂದಾಗಿ ಚೀನಾಗೆ ಪಾಠ ಕಲಿಸಿದಂತಾಗುತ್ತದೆ. ಏಕೆಂದರೆ ಚೀನಾ ಈಗಾಗಲೇ ಗಡಿಯಲ್ಲಿ ಉತ್ತಮ ರಸ್ತೆ ಹೊಂದಿದೆ. ಭಾರತವೂ ರಸ್ತೆ ನಿರ್ಮಿಸಿದರೆ ಚೀನಾಕ್ಕೆ ಉತ್ತರ ನೀಡಲು ಹಾಗೂ ಗಡಿಯಲ್ಲಿ ಸಂಪರ್ಕ ಸುಲಭವಾಗುತ್ತದೆ.   

> ಯುದ್ಧದ ಸಂದರ್ಭದಲ್ಲಿ ಗಡಿಗೆ ಸಮರ ಸಾಮಗ್ರಿ ಹೊತ್ತೊಯ್ಯಲು ಹಾಗೂ ಯೋಧರನ್ನು ಸಾಗಿಸಲು ಬಳಸಲು ಕೆಟ್ಟದಾಗಿವೆ. ಈ ಯೋಜನೆಯಿಂದಾಗಿ ಸಂಚಾರ ಸುಲಭವಾಗಲಿದೆ.

> ರಸ್ತೆ ಅಭಿವೃದ್ಧಿಯಾದರೆ ಗಡಿಯಲ್ಲಿ ವ್ಯಾಪಾರ ಚಟುವಟಿಕೆ ವೃದ್ಧಿಯಾಗುತ್ತದೆ. ಆರ್ಥಿಕ ಚಟುವಟಿಕೆಗಳು ಗರಿಗೆದರುತ್ತದೆ.

ಒಟ್ಟಿನಲ್ಲಿ ಈ ಭಾರತಮಾಲಾ ರಸ್ತೆ ದೇಶದ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಕೇಂದ್ರ ರಸ್ತೆ ಇಲಾಖೆ ಕಾರ್ಯದರ್ಶಿ ವಿಜಯ್ ಛಿಬ್ಬರ್ ತಿಳಿಸಿದ್ದಾರೆ.

Saturday, 25 April 2015

Industrial Policy of Karnataka 2014-19

Books:

ಸ್ನೇಹಿತರೆ,  objective type ಪರೀಕ್ಷೆಗಳಿಗೆ ಈ ಎರಡು ಬುಕ್ಸ್ ಉತ್ತಮವಾಗಿವೆ.

Current Affairs:

Mission Indradhanush....

SDA, FDA, PDO, KAS(ಪೂರ್ವಭಾವಿ/ ಮುಖ್ಯಪರೀಕ್ಷೆ), PSI, SUB- REGISTRAR ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಬೇಕಾದ ಪುಸ್ತಕಗಳು :

ಇತಿಹಾಸ:

1.ಭಾರತದ ಸಮಗ್ರ ಇತಿಹಾಸ- ಟಿ. ಜಿ. ಚಂದ್ರಶೇಖರಪ್ಪ
2. ಭಾರತದ ಸಮಗ್ರ ಇತಿಹಾಸ- ಕೆ. ಸದಾಶಿವ
3.ಆಧುನಿಕ ಭಾರತ- ಬಿಪಿನ್ ಚಂದ್ರ.
4.ಸ್ವಾತಂತ್ರ್ಯದ ಹೋರಾಟ- ಬಿಪಿನ್ ಚಂದ್ರ
5.ಕರ್ನಾಟಕದ ಸಂಕ್ಷಿಪ್ತ ಚರಿತ್ರೆ - ಸೂರ್ಯನಾಥ ಕಾಮತ್
6. ಕರ್ನಾಟಕದ ಸಮಗ್ರ ಇತಿಹಾಸ - ಫಾಲಾಕ್ಷ
7.ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು-ಎನ್.ಪಿ.ಶಂಕರನಾರಾಯಣರಾವ್

ಭಾರತದ ಸಂವಿಧಾನ :

1. ಭಾರತದ ಸಂವಿಧಾನ ಮತ್ತು ರಾಜಕೀಯ- ಹೆಚ್.ಎಮ್.ರಾಜಶೇಖರ
2. ಭಾರತದ ಸಂವಿಧಾನ ಮತ್ತು ರಾಜಕೀಯ- ಪಿ.ಎಸ್. ಗಂಗಾಧರ್
3. ಭಾರತದ ಸಂವಿಧಾನ- ಮೇರುನಂದನ್

ಅರ್ಥಶಾಸ್ತ್ರ:

1. ಭಾರತದ ಆರ್ಥಿಕ ವ್ಯವಸ್ಥೆ – ಹೆಚ್ಆರ್ಕೆ
2. ಕರ್ನಾಟಕದ ಆರ್ಥಿಕತೆ – ನೇ.ತಿ.ಸೋಮಶೇಖರ್

ಭೂಗೋಳಶಾಸ್ತ್ರ:

1. ಭಾರತದ ಭೂಗೋಳಶಾಸ್ತ್ರ - ರಂಗನಾಥ್
2. ಪ್ರಪಂಚದ ಭೂಗೋಳಶಾಸ್ತ್ರ - ರಂಗನಾಥ್
3. ಕರ್ನಾಟಕದ ಭೂಗೋಳಶಾಸ್ತ್ರ – ರಂಗನಾಥ್ / ಪಿ.ಮಲ್ಲಪ್ಪ
4. ಭಾರತದ ಆರ್ಥಿಕ ಮತ್ತು ಪ್ರಾಕೃತಿಕ ಭೂಗೋಳಶಾಸ್ತ್ರ - ರಂಗನಾಥ್

ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಪರಿಸರ ವಿಜ್ಞಾನ:

1. 8, 9 ಮತ್ತು 10 ನೇ ತರಗತಿಯ ವಿಜ್ಞಾನ ಪುಸ್ತಕಗಳು
2. ಪರಿಸರ ವಿಜ್ಞಾನ - ರಂಗನಾಥ್ / ಕೆ.ಭೈರಪ್ಪ
3. ವಿಜ್ಞಾನ ಮತ್ತು ತಂತ್ರಜ್ಞಾನ – ಹರಿಪ್ರಸಾದ್ (ಸ್ಪರ್ಧಾಚೈತ್ರ) 
4. ನವಕರ್ನಾಟಕದ ಪ್ರಕಾಶನದ ವಿಜ್ಞಾನ ಪುಸ್ತಕಗಳು

ಪ್ರಚಲಿತ ಘಟನೆಗಳು: 

1. MANORAMA YEAR BOOK
2. ವಾಸನ್ಸ್ ಈಯರ್ ಬುಕ್
3. ಮಾಸಪತ್ರಿಕೆಗಳು - ಸ್ಪರ್ಧಾಚೈತ್ರ, ಬುತ್ತಿ, ಜನಪದ, ಯೋಜನಾ, ಕರ್ನಾಟಕ ವಿಕಾಸ
4. ದಿನಪತ್ರಿಕೆಗಳು - ಪ್ರಜಾವಾಣಿ, HINDU

ಯೋಜನೆಗಳು ಮತ್ತು ಇತರೆ:

1. INDIA -2015
2. ECONOMIC SURVEY OF INDIA : 2014-15
3. ಕರ್ನಾಟಕ ಆರ್ಥಿಕ ಸಮೀಕ್ಷೆ : 2014-15
4. ಕರ್ನಾಟಕ ಕೈಪಿಡಿ 
5. ಸಾಹಿತ್ಯ ಕರ್ನಾಟಕ
6. ಚಾರಿತ್ರಿಕ ಕರ್ನಾಟಕ
7. ಅಭಿವೃದ್ಧಿ ಪಥ
8. ಸಾಂಸ್ಕೃತಿಕ ಪಥ
9. ಗ್ರಾಮೀಣಾಭಿವೃದ್ಧಿ – ಕೆ.ಭೈರಪ್ಪ
10. ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಕಟಣೆಗಳು

ಸಾಮಾನ್ಯ ಮನೋಸಾಮರ್ಥ್ಯ:
• ಮಾನಸಿಕ ಸಾಮರ್ಥ್ಯ - ಗುರುರಾಜ ಬುಲಬುಲೆ
• ಮನೋಸಾಮರ್ಥ್ಯ - ಸ್ಪರ್ಧಾಚೈತ್ರದ ಪ್ರಕಟಣೆ

2011 KAS prelims cut off.. ee sala 20-25 marks kadime irabahudu..