Friday, 14 June 2013

ಅಬಕಾರಿ ಉಪನಿರೀಕ್ಷಕರ ಪರೀಕ್ಷೆ – 2013
Series-B   
ಮೊದಲ 50 ಪ್ರಶ್ನೆಗಳ ಕೀ ಉತ್ತರಗಳು    

1. 2013ರ ಏಪ್ರಿಲ್ ನಲ್ಲಿ ಭಾರತದ ರಿಸರ್ವ್ ಬ್ಯಾಂಕಿನ ಗೌರ್ನರ್ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷರ  
    ಹೆಸರುಗಳು ಅನುಕ್ರಮವಾಗಿ --------------- ಮತ್ತು -----------------.
    ಉ:-  ಡಿ.ಸುಬ್ಬರಾವ್ ಮತ್ತು ಮಾಂಟೆಕ್ ಸಿಂಗ್ ಅಹ್ಲುವಾಲಿಯಾ

2.  ಪ್ರಸ್ತುತದಲ್ಲಿ ಪುರುಷರ ಹಾಗೂ ಮಹಿಳೆಯರ ವಿಶ್ವಕಪ್ ಕ್ರಿಕೆಟೆ ಪಂದ್ಯಗಳನ್ನು ಅನುಕ್ರಮವಾಗಿ ----------- 
    ಮತ್ತು ----------- ದೇಶಗಳು ನಡೆಸುತ್ತಿವೆ.
   ಉ:- ಆಸ್ಟ್ರೇಲಿಯಾ ಮತ್ತು ಭಾರತ

3. ಇತ್ತೀಚೆಗೆ -------------- ನದಿಯ ನೀರನ್ನು ದೇಶವು ತಿರುಗಿಸಿಕೊಳ್ಳಲು ಯೋಜನೆಗಳನ್ನು ಹಾಕುತ್ತಿರುವುದು
    ಭಾರತಕ್ಕೆ ಕಳವಳವನ್ನು ಉಂಟು ಮಾಡಿದೆ.
    ಉ:- ಬ್ರಹ್ಮಪುತ್ರ, ಚೀನಾ

4. ಬಂಧನದಲ್ಲಿದ್ದ ಅಪರಾಧಿಗಳನ್ನು ನೇಣಿಗೇರಿಸಿದ ಎರಡು ಪ್ರಕರಣಗಳಿಂದಾಗಿ, ಮರಣ ದಂಡನೆ ಕುರಿತಂತೆ
  ಭಾರತದಲ್ಲಿ ಮತ್ತೋಮ್ಮೆ ಚರ್ಚೆಗಳು ನಡೆದಿವೆ.  ಜಗತ್ತಿನಲ್ಲಿ ಈಗ ಮರಣ ದಂಡನೆಯನ್ನು ಸುಮಾರು ಎಷ್ಟು 
  ದೇಶಗಳು ರದ್ದುಪಡಿಸಿವೆ?
   ಉ:- 150

   5 ಹಾಗೂ 6ನೇ ಪ್ರಶ್ನೆಪತ್ರಿಕೆಯಲ್ಲಿ ವಿವರಣೇ I ಮತ್ತು ವಿವರಣೆ II ಎಂಬ ಎರಡು ವಿವರಣೆಗಳಿವೆ.  ಕೆಳಕಂಡ
   ಸಂಕೇತಗಳನ್ನು ಬಳಸಿ ಇವುಗಳಿಗೆ ಉತ್ತರಿಸಿ.

5.I 2013ರ ಏಪ್ರಿಲ್ ನಲ್ಲಿ ನಿಧನರಾದ ಶ್ರೀಮತಿ ಮಾರ್ಗರೆಟ್ ಥ್ಯಾಚರ್ ರವರು ಬ್ರಿಟನ್ನಿನ ಮೊದಲ ಮಹಿಳಾ ಪ್ರಧಾನ  
 ಪ್ರಧಾನ ಮಂತ್ರಿಯಾಗಿದ್ದರು.

    II ಟೋನಿಬ್ಲೇರ್ ರವರು ಇಂಗ್ಲೆಂಡಿನ ಈಗಿನ ಪ್ರಧಾನ ಮಂತ್ರಿ.
ಉ:- (2) 1 ನೇ ವಿವರಣೆ ಮಾತ್ರ ಸರಿಯಾಗಿದೆ
             

  6. I  ಸಶಸ್ತ್ರ ಬಲಗಳ ವಿಶೇಷ ಅಧಿಕಾರ ಕಾಯಿದೆ (AFSPA) 1958 ರ ವಿರುದ್ಧ ಆಮರಣಾಂತ ಉಪವಾಸ ಚಳುವಳಿ
         ನಡೆಸಿದ  ಕಾರಣಕ್ಕಾಗಿ ಮುಣಿಪುರದ ಮುಹಿಳೆ ಇರೋಮ್ ಶರ್ಮಿಳಾ ಅವರು ಸುದ್ದಿಯಲ್ಲಿದ್ದರು.

      II  ಮೇಧಾ ಪಾಟ್ಕರ್ ಅವರು ಮಹಿಳಾ ಕಾದಂಬರಿಗಾರ್ತಿಯಾಗಿದ್ದು ಪ್ರತಿಷ್ಠಿತ ಬೂಕರ್ ಬಹುಮಾನವನ್ನು
         ಗಳಿಸಿದ್ದಾರೆ.
     ಉ:- (2) 1 ನೇ ವಿವರಣೆ ಮಾತ್ರ ಸರಿಯಾಗಿದೆ


7. ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದೇ
     ಉ:- ಇಂಡೋನೇಷಿಯಾ

8. ಗಾಲಾಪಾಗೋಸ್ ಆರ್ಕಿಪೆಲಾಗೋ ಯಾವ ದೇಶಕ್ಕೆ ಸೇರಿದೆ?
    ಉ:- ಈಕ್ವೆಡಾರ್

9. ಐವರು ವಿದೇಶಿಯರು ಸೇರಿದಂತೆ ಹದಿನೇಳು ಮಂದಿಯ ಮರಣಕ್ಕೆ ಕಾರಣವಾದ ಹಾಗೂ 2013 ರ ಏಪ್ರಿಲ್ ನಲ್ಲಿ   
    ನ್ಯಾಯಾಲಯವು ತೀರ್ಪು ನೀಡಿರುವ “ ಜರ್ಮನ್ ಬೇಕರಿ ಪ್ರಕರಣ” ಸ್ಪೋಟಗಳ ನೆಡೆದದ್ದು
    ಉ:- ಪುಣೆ, 2010 ರಲ್ಲಿ

10. ಒಣ್ಣದ ಟಿ.ವಿ ಸೆಟ್ ಗಳಿಂದ CRT ಟ್ಯೂಬ್ ಮಾದರಿ ಬರುವ ಅಪಾಯಕಾರಿಯಾದ ವಿಕಿರಣಗಳು ಯಾವುವು?
     ಉ:- ಮೆದು ಕ್ಷ-ಕಿರಣಗಳು

11. 2013 ರ ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತರಾದ ಕರ್ನಾಟಕ ವ್ಯಕ್ತಿ
      ಉ:- ಬಿ.ಜಯಶ್ರೀ
12. ಆಸ್ಟ್ರೇಲಿಯಾದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾದವರು
      ಉ:- ರಿಕಿ ಪಾಂಟಿಂಗ್
13. ಇತ್ತೀಚೆಗೆ ನಿಧನರಾದ ಸುಪ್ರಸಿದ್ಧ ಕಾದಂಬರಿಕಾರ ಚಿನುವಾ ಅಚಿಬೆ ಯಾವ ದೇಶದವರು?
      ಉ:- ನೈಜೀರಿಯಾ

14. ಭಾರತದ ಮುಖ್ಯ ನ್ಯಾಯಾಮೂರ್ತಿ ಯಾರು?
      ಉ:- ಆಲ್ತಮಸ್ ಕಬೀರ್

15 .2012 ರ ಜುಲೈನಲ್ಲಿ ಭಾರತದ ಯಾವ ರಾಜ್ಯವು ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ಪ್ರಶಸ್ತಿ ಪ್ರಮಾಣಪತ್ರವನ್ನು   
     ಪಡೆದುಕೊಂಡಿತು?
    ಉ:- ಮಧ್ಯ ಪ್ರದೇಶ

16. ಭಾರತದಲ್ಲಿ ಜನವರಿ 25 ನ್ನು ಯಾವ ದಿನವೆಂದು ಆಚರಿಸಲಾಗುತ್ತದೆ?
      ಉ:- ರಾಷ್ಟ್ರೀಯಾ ಮತದಾರರ ದಿನ.

17. ಅಲಿಪ್ತ ಚಳುವಳಿ XVI  ನೇ ಶೃಂಗ ಸಭೆಯು 2012 ರಲ್ಲಿ ಎಲ್ಲಿ ನಡೆಯಿತು?
       ಉ:- ತೆಹರಾನ್

18. 2013 ರ ಜನವರಿಯಲ್ಲಿ, ಭಾರತದ ಗಣರಜ್ಯೋತ್ಸವ ಅಚರಣೆಯ ಮುಖ್ಯ ಅತಿಥಿಯಾಗಿದ್ದವರು
      ಉ:- ಭೂತಾನಿನ ರಾಜ ಜಿಗ್ಮೆ ಖೇಸರ್ ನಾಮ್ ಗೈಲ್ ವಾಂಗ್ ಚುಕ್

19. 2012 ರ ಜುಲೈನಲ್ಲಿ ನಡೆದ ಲಂಡನ್ ಒಲಂಪಿಕ್ಸ್ ನ ಪ್ರಾರಂಭೋತ್ಸವದಲ್ಲಿ ಭಾರತೀಯ ವಿಭಾಗದ ಧ್ವಜವನ್ನು    
       ಹಿಡಿದಿದ್ದವರು
    ಉ:-ಸುಶೀಲ ಕುಮಾರ್

20. 2012 -13 ರಲ್ಲಿ 20 ನೇ ಕಾನೂನು ಆಯೋಗದ ಅಧ್ಯಕ್ಷರಾಗಿ ನೇಮಕ ಗೊಂಡಿರುವವರು
     ಉ:- ನ್ಯಾಯಮೂರ್ತಿ ಡಿ.ಕೆ.ಜೈನ್

21.  2012 ರ ಜುಲೈನಲ್ಲಿ ನೆಡದ ಲಂಡನ್ ಒಲಂಪಿಕ್ಸ್ ಧ್ಯೇಯ ವಾಕ್ಯ
      ಉ:-  Inspire a Generation

22. 2012 ರಲ್ಲಿ ನೊಬಲ್ ಶಾಂತಿ ಪ್ರಶಸ್ತಿಯನ್ನು ಯಾರಿಗೆ ನೀಡಲಾಯಿತು?
     ಉ:- ಯೂರೋಪಿಯನ್ ಒಕ್ಕೂಟ

23.  ಯೂರೋಪಿಯನ್ ಒಕ್ಕೂಟದ ಹನ್ನೆರಡು ಸದಸ್ಯ ರಾಜ್ಯಗಳು ಯೂರೊ ಎಂಬ ತಮ್ಮ ಹೊಸ ನಾಣ್ಯ ಪದ್ಧತಿಯನ್ನು    
      ದಿನಾಂಕದಿಂದ ಜಾರಿಗೊಳಿಸಿದರು.
      ಉ:-  ಜನವರಿ 1, 2002
24.  2012ರ ಜುಲೈನಲ್ಲಿ, ಸಂಯುಕ್ತ ಸಂಸ್ಥಾನವು ಯಾವ ದೇಶವನ್ನು ಪ್ರಮುಖ Non-Nato ಮಿತ್ರರಾಷ್ಟ್ರ  ಎಂದು     
      ಘೋಷಿಸಿದೆ?
     ಉ:-  ಆಫ್ಘಾನಿಸ್ತಾನ

25.  2009 ರಲ್ಲಿ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮಕ್ಕೆ ಈ ಕೆಳಕಂಡಂತೆ ಪುನರ್ ನಾಮಕರಣ   
       ಮಾಡಲಾಯಿತು.
      ಉ:- ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮ.

26. “ಕಾನೂನು ಪ್ರಕಾರ ರಾಜ್ಯವು ನಿರ್ಣಯಿಸಿದ ರೀತಿಯಲ್ಲಿ ರಾಜ್ಯವು ಆದರಿಂದ ಹದಿನಾಲ್ಕರ ವಯಸ್ಸಿನವರೆಗಿನ ಎಲ್ಲಾ   
       ಮಕ್ಕಳಿಗೂ ಉಚಿತವಾಗಿ ಹಾಗೂ ಕಡ್ಡಾಯವಾಗಿ ಶಿಕ್ಷಣವನ್ನು ಒದಗಿಸತಕ್ಕದ್ದು.” ಇದು ಭಾರತದ ಸಂವಿಧಾನಕ್ಕೆ    
      ಸೇರ್ಪಡೆ ಮಾಡಲಾದ ಹೊಸ ಅನುಚ್ಛೇದ. ಇದು ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
      ಉ:- ಮೂಲಭೂತ ಹಕ್ಕುಗಳು.
27.   2012 ರ ಜೂನ್ 2 ರಂದು ಜೀವಾವಧಿ ಕಾರಾಗೃಹ ಶಕ್ಷೆಯನ್ನು ಪಡೆದ ಈಜಿಪ್ತ್ ಹಿಂದಿನ ಅಧ್ಯಕ್ಷರ ಹೆಸರೇನು?
        ಉ:-ಹೋಸ್ನಿ ಮುಬಾರಕ್.


28.  ರಷ್ಯಾ ದೇಶವು 2012 ರ ಆಗಸ್ಟ್ 22 ರಂದು_______ನೇ ಸದಸ್ಯ ದೇಶವಾಗಿ ವಿಶ್ವ ವ್ಯಪಾರ ಸಂಸ್ಥೆಗೆ ಪ್ರವೇಶಿಸಿತು.
        ಉ:-  156 ನೇ

29.  ರಾಜ್ಯವೊಂದರ ರಾಜ್ಯಪಾಲರು ಈ ಕೆಳಗಿನದನ್ನು ಮಾಡುವ ಹಾಗಿಲ್ಲ.
      ಉ:-ರಾಜ್ಯ ವಿಧಾನ ಮಂಡಲಕ್ಕೆ ಇರುವ ಕಾನೂನು ರೂಪಿಸುವ ಅಧಿಕಾರಕ್ಕೆ ಬದಲಾಗಿ ಆಧ್ಯಾದೇಶವನ್ನು   
      ಹೊರಡಿಸುವುದು.

30.  ಭಾರತೀಯ ಸಂವಿಧಾನದ 72 ನೇ ಅನುಚ್ಛೇದದ ಅನ್ವಯ, ರಾಷ್ಟ್ರಪತಿಯವರು ಕೆಳಕಂಡ ಅಧಿಕಾರವನ್ನು   
       ಚಲಾಯಿಸುವಂತಿಲ್ಲ.
       ಉ:- ಖುಲಾಸೆ ನೀಡಿಕೆ.
31. ಅತ್ಯಾಚಾರ ಹಾಗೂ ಕೊಲೆಯ ಅಪರಾಧಕ್ಕಾಗಿ ಜೈಲಿನಲ್ಲಿರಿಸಲಾದ ವ್ಯಕ್ತಿಯು
      ಉ:- ಸಂವಿಧಾನದ 21 ನೇ ಅನುಚ್ಛೇದದಲ್ಲಿರುವ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

32.  ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸಂವಿಧಾನದಲ್ಲಿ   
       ಒದಗಿಸಲಾಗಿದ ಅವಕಾಶಗಳು ಈ ಕೆಳಕಂಡ ಅವಧಿ ಮುಗಿದ ನಂತರ ನೀಮತು ಹೋಗುತ್ತವೆ.
       ಉ:- 70 ವರ್ಷಗಳು
33. ಪ್ರತಿಪಾದನೆ(A) : ಕೇಂದ್ರದ ನಾಗರಿಕ ಸೇವೆಗಳ ಒಬ್ಬ ಸದಸ್ಯನು ಇಲಾಖೆಯ ಹಣವನ್ನು ದುರುಪಯೋಗ   
     ಮಾಡಿಕೊಂಡಿದ್ದಕ್ಕಾಗಿ ನ್ಯಾಯಾಲಯದಿಂದ ತಪ್ಪಿತಸ್ಥನೆಂದು ನಿರ್ಣಯಿತವಾಗುತ್ತಾನೆ. ಹೀಗಾಗಿ ಆತನನ್ನು ವಜಾ   
     ಮಾಡುವಂತಿಲ್ಲ.
     ಕಾರಣ ( R ) : ಯಾವುದೇ ವ್ಯಕ್ತಿಯ ವಿರುದ್ಧ ಏನಾದರೂ ಆರೋಪಗಳನ್ನನು ಮಾಡಿದ್ದಾಗ ಅದಕ್ಕೆ ಸಂಬಂಧಿಸಿದಂತೆ   
     ಆತನ  ಅಹವಾಲುಗಳನ್ನು ಹೇಳಿಕೊಳ್ಳಲು ಆತನಿಗೆ ಸೂಕ್ತ ಅವಕಾಶ ಕೊಡದ ಹೊರತು ಆತನನ್ನು ವಜಾ   
    ಮಾಡುವಂತಿಲ್ಲ.



ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಬಳಸಿ ನಿಮ್ಮ ಉತ್ತರಗಳನ್ನು ಗುರುತು ಮಾಡಿ.
ಉ:-  A  ಮತ್ತು R ಎರಡು ಸರಿ. A ಗೆ R ಸರಿಯಾದ ವಿವರಣೆ

34. ಪಟ್ಟಿ | ನ್ನು ಪಟ್ಟಿ || ರೊಂದಿಸಿ. ಪಟ್ಟಿಗಲ ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಬಳಸಿ ನಿಮ್ಮ ಉತ್ತರವನ್ನು ಗುರುತು   
     ಮಾಡಿ
    ಉತ್ತರ-:- ( 3 ) A   B   C  D
                          4    5    1  2
    ಪಟ್ಟಿ-1                                                                       ಪಟ್ಟಿ-||
QUO Warranto                 ಒಂದು ಹುದ್ದೆಯನ್ನು ಹೊಂದಿರುವ ವ್ಯಕ್ತಿಯ ಅಧಿಕಾರವನ್ನು ಪ್ರಶ್ನಿಸುವುದು
Certiorari                         ಮಿತಿಮೀರಿದ ಅಧಿಕಾರ ವ್ಯಪ್ತಿಯ ಸಂದರ್ಭದಲ್ಲಿ ಅಧಿಕಾರವ್ಯಾಪ್ತಿಯ ರಿಟ್
Prohibition                      ಅಧಿಕಾರವನ್ನು ಮೀರದಂತೆ ಅಧೀನ ನ್ಯಾಯಾಲಯವನ್ನು ತಡೆಯುವುದು
Habeas Corpus               ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ನೀಡಲಾದ ನಿರ್ದೇಶನ

35. ಈ ಕೆಳಕಂಡ ಸಂದರ್ಭದಲ್ಲಿ ರಾಷ್ಟ್ರಪತಿಯವರು ತುರ್ತು ಪರಿಸ್ಥಿತಿಯ ಘೋಷಣೆಯನ್ನು ಹೊರಡಿಸಬಹುದು
      ಉ:- (2) 1,3,4 ನೇ ವಿವರಣೆಗಳು ಸರಿಯಾಗಿವೆ.

36. 1976 ರಲ್ಲಿ ಮಾಡಲಾದ ನಲವತ್ತೆರಡನೆ ತಿದ್ದುಪಡಿಯು ಭಾರತದ ಸಂವಿಧಾನಕ್ಕೆ ಈ ಕೆಳಕಂಡ ಪದಗಳನ್ನು    
      ಸೇರಿಸಿತು.
     ಉ:-  ಸಮಾಜವಾದಿ ಹಾಗೂ ಜಾತ್ಯಾತೀತ.
37.  ಒಬ್ಬ ಸ್ವತಂತ್ರ ರಾಜನೆಂದು ಶಿವಾಜಿಗೆ ಕಿರೀಟಧಾರಣೆ ಎಲ್ಲಿ ನಡೆಯಿತು?
       ಉ:-  ರಾಯ ಗಢ






38. ಕೆಳಗಿನವುಗಳನ್ನು ಸರಿಯಾಗಿ ಹೊಂದಿಸಿ
     ಉ:-     ( 3 )  A   B   C  D
                         3    4   1   2
       A                                       B
312 ನೇ ಅನುಚ್ಛೇದ                      ಅಖಿಲ ಭಾರತ ಸೇವೆಗಳು
368 ನೇ ಅನುಚ್ಛೇದ                      ಸಂವಿಧಾನದ ತಿದ್ದುಪಡಿ
131 ನೇ ಅನುಚ್ಛೇದ                      ಸರ್ವೋಚ್ಚ ನ್ಯಾಯಾಲಯದ ಮೂಲ ಅಧಿಕಾರ ವ್ಯಾಪ್ತಿ
280 ನೇ ಅನುಚ್ಛೇದ                      ಹಣಕಾಸು ಆಯೋಗದ ಸ್ಥಾಪನೆ

39. ಸೂರತ್ ನಲ್ಲಿ ಕಾರ್ಖಾನೆಯನ್ನು ಆರಂಭಸಲು ಬ್ರಿಟಷರ ಪರವಾಗಿ ಆಜ್ಷಾಪನೆ ಹೊರೆಇಸಿದ ಮೊದಲ ಮೊಘಲ್   
     ಚಕ್ರವರ್ತಿ
    ಉ:-  ಜಹಂಗೀರ್

40. ರಾಮ ಮತ್ತು ರಹಿಂ ಇವೆರಡೂ ಒಂದೇ ದೈವದ ಬೇರೆಬೇರೆ ಹೆಸರುಗಳು ಎಂದು ಹೇಳಿದವರು
      ಉ:- ಕಬೀರ್

41. ಕಪ್ಪು ರಂಧ್ರದ ದುರಂತವು ಕೆಳಕಂಡ ಕದನಕ್ಕೆ ಮುಖ್ಯ ಕಾರಣ
     ಉ:-ಪ್ಲಾಸಿ

42. ಬಾದಾಮಿ ಚಾಲುಕ್ಯರು ಅಭಿವೃದ್ಧಿ ಪಡಿಸಿದ ವಾಸ್ತು ಶಲ್ಪದ ಶೈಲಿ ಯಾವುದು?
     ಉ:-ವೆಸರ

43. ಈ ಕಳೆಕಂಡ ಪ್ರದೇಶದಲ್ಲಿ ಶಾಸನಗಳು ಚೋಳರ ಕಾಲದಲ್ಲಿದ್ದಂತಹ ಗ್ರಾಮಾಡಳಿತದ ವಿವರಗಳನ್ನು ಒದಗಿಸುತ್ತವೆ.
      ಉ:-ಉತ್ತರ ಮೆರೂರ್


 44. ಮೈಸೂರು ಚಲೊ ಚಳುವಳಿ ನಡೆದ ವರ್ಷ
      ಉ:- 1947

45. ಹಿಂದೂಸ್ತಾನ್ ಸೇವಾದಳವನ್ನು ಹುಬ್ಬಳ್ಳಿ ಯಲ್ಲಿ  ಸ್ಥಾಪಿಸಿದವರು
      ಉ:- ಡಾ.ಎನ್.ಎಸ್.ಹರ್ಡೀಕರ್

46 .  ಪಟ್ಟಿ | ಮತ್ತು || ನ್ನು ಸರಿಹೊಂದಿಸಿ ಕೆಳಕಂಡ ಸಂಕೇತಗಳನ್ನು ಬಳಸಿ ಸರಿ ಉತ್ತರ ತಿಳಿಸಿ

                ಪಟ್ಟಿ |                                         ಪಟ್ಟಿ-||
A.      ಆಹ್ಮದ್ ನಗರ                 1. ನಿಜಾಂ ಶಾಹಿ
B.      ಗೋಲ್ಕೊಂಡ                  2. ಕುತುಬ್ ಶಾಹಿ
C.      ಬೀಜಾಪುರ                     3. ಆದಿಲ್ ಶಾಹಿ
D.      ಬೀದರ್                          4. ಬರೀದ್ ಶಾಹಿ
           ಉತ್ತರ: (3) 1, 2, 3, 4

47. ಸಂವಿಧಾನ ಸಭೆಯ ಅಧ್ಯಕ್ಷರಾಗಿದ್ದವರು
     ಉ:- ಡಾ|| ರಾಜೇಂದ್ರ ಪ್ರಸಾದ್

48. ಕರ್ನಾಟಕ ರೈಲ್ವೆ ಜಾಲದ ಒಟ್ಟು ಉದ್ದವು ಸುಮಾರು______
      ಉ:-  3100 ಕಿ.ಮೀ

49. ಕಲಹರಿ ಮರುಭೂಮಿ ಎಲ್ಲಿದೆ?
      ಉ:- ಬೋಟ್ಸ್ ವಾನಾ

50. ಈ ಕೆಳಗಿನವುಗಳಲ್ಲಿ ದೊಡ್ಡ ಅಳತೆಯ ಭೂಪಟ ಯಾವುದು?
     ಉ:-  (ಕಡಸ್ಟ್ರಲ್ ) ಜಮೀನಿನ ಭೂಪಟಗಳು
  











No comments:

Post a Comment