Saturday, 2 May 2015
Thursday, 30 April 2015
ಕರ್ನಾಟಕ ಸರ್ಕಾರದ ನೂತನ ಕೈಗಾರಿಕಾ ನೀತಿಯ ಮುಖ್ಯಾಂಶಗಳು :
* ಶೇ. 12ರ ಬೆಳವಣಿಗೆಯ 2014-19 ರ ಕೈಗಾರಿಕಾ ನೀತಿ
* 5 ಲಕ್ಷ ಕೋಟಿ ಬಂಡಾವಳ ಹೂಡಿಕೆ ಮತ್ತು 15 ಲಕ್ಷ ಜನರಿಗೆ ಉದ್ಯೋಗ ನೀಡುವ ಗುರಿ
* ಪ್ರತಿ ವರ್ಷ 5000 - 8000 ಎಕರೆ ವಿಸ್ತೀರ್ಣದ 5 ಕೈಗಾರಿಕಾ ವಲಯ ಸ್ಥಾಪನೆ ಮಾಡುವದು
* ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಹೈ-ಕ ವಲಯದಲ್ಲಿ 2 ಕೈಗಾರಿಕಾ ವಲಯ ಸ್ಥಾಪನೆ
* ಕೈಗಾರಿಕೆ ಸ್ಥಾಪನೆ ಮಾಡಲು ವಲಯಗಳಾಗಿ ರಾಜ್ಯವನ್ನು ವಿಭಾಗ ಮಾಡುವುದು
* ವಲಯ 1 ರಲ್ಲಿ 23 ಅತ್ಯಂತ ಹಿಂದುಳಿದ ತಾಲೂಕುಗಳು, ವಲಯ 2 ರಲ್ಲಿ 51 ಅತೀ ಹಿಂದುಳಿದ ತಾಲೂಕುಗಳು
* ವಲಯ 3 ರಲ್ಲಿ 62 ಹಿಂದುಳಿದ ಮತ್ತು 4 ರಲ್ಲಿ 9 ಅಭಿವೃದ್ದಿ ತಾಲೂಕುಗಳು ಸೇರ್ಪಡೆ.
* ಹೈ-ಕ ವಲಯ 1 ರಲ್ಲಿ 20 ಅತ್ಯಂತ ಹಿಂದುಳಿದ ಹಾಗೂ 2 ರಲ್ಲಿ 11 ಅತೀ ಹಿಂದುಳಿದ ತಾಲುಕುಗಳ ಸೇರ್ಪಡೆ
* ಅತೀ ಸಣ್ಣ ಕೈಗಾರಿಕೆಗಳಿಗೆ ಶೇ 20 ರಷ್ಟು ಜಮೀನು * ಸಣ್ಣ ಕೈಗಾರಿಕೆಗಳಿಗೆ 10 ಲಕ್ಷದಿಂದ 20 ಲಕ್ಷ ಹಾಗೂ ಗರಿಷ್ಠ 20 ಲಕ್ಷದಿಂದ 45 ಲಕ್ಷ ಸಹಾಯಧನ ಏರಿಕೆ.
* ಮಧ್ಯಮ ಕೈಗಾರಿಕೆಗಳಿಗೆ ಕನಿಷ್ಠ 20 ರಿಂದ 30 ಲಕ್ಷ ಹಾಗೂ ಗರಿಷ್ಠ 30 ರಿಂದ 55 ಲಕ್ಷ ಸಹಾಯಧನ ಏರಿಕೆ
* ಎಸ್‍ಸಿ, ಎಸ್‍ಟಿ ವರ್ಗದವರಿಗೆ ಕೆಐಎಡಿಬಿ/ಕೆಎಸ್‌ಡಿಸಿ ಯಲ್ಲಿ ಶೇ 22.50 ರಷ್ಟು ಜಮೀನು ಕಾಯ್ದಿರಿಸುವಿಕೆ.
* ಮಹಿಳೆಯರು, ಅಂಗವಿಕಲರು ಮಾಜಿ ಸೈನಿಕರು, ಅಲ್ಪಸಂಖ್ಯಾತ ಹಿಂದುಳಿದ ವರ್ಗಗಳ ಉದ್ದಿಮೆದಾರರಿಗೆ ಶೇ 5 ರಷ್ಟು ಜಮೀನು ಕಾಯ್ದಿರಿಸುವಿಕೆ.
* ಹುಬ್ಬಳ್ಳಿ ಹಾರೋಹಳ್ಳಿಯಲ್ಲಿ ಮಹಿಳಾ ಕೈಗಾರಿಕಾ ವಲಯ ಸ್ಥಾಪನೆ, ಜವಳಿ ಆಭರಣ ಕ್ಷೇತ್ರದಲ್ಲಿ ಕ್ಲಸ್ಟರ್ ಸ್ಥಾಪನೆ * ಅನಿವಾಸಿ ಕನ್ನಡಿಗರಿಗೆ ಬಂಡವಾಳ ಹೂಡಿಕೆ ಪ್ರೋತ್ಸಾಹಧನ ಕೇಂದ್ರ ಸ್ಥಾಪನೆ
ಮೋದಿ ಸರಕಾರದಿಂದ ನಿರ್ಮಾಣವಾಗಲಿದೆ ‘ಭಾರತಮಾಲಾ’ ರಸ್ತೆ..!
ಈ ಹಿಂದೆ ಎನ್’ಡಿಎ ಸರಕಾರದ ವೇಳೆ ಅಂದಿನ ಪ್ರಧಾನಿ ವಾಜಪೇಯಿ ಗೋಲ್ಡನ್ ಕ್ವಾಡ್ರಾಲ್ಯಾಟರಲ್ (ಸುವರ್ಣ ಚತುಷ್ಪಥ ರಸ್ತೆ) ನಿರ್ಮಿಸಿದ್ದರು. ಈ ಮೂಲಕ ದೇಶದ 4 ಮೂಲೆಗಳನ್ನು ರಸ್ತೆ ಮೂಲಕ ಬೆಸೆಯುವ ಕೆಲಸ ಮಾಡಿದ್ದರು. ಇದೇ ರೀತಿ ಈಗ ಪ್ರಧಾನಿ ನರೇಂದ್ರ ಮೋದಿ ಹೊಸ ಯೋಜನೆ ಹಾಕಿಕೊಂಡಿದ್ದಾರೆ. ಅದೇ ಭಾರತಮಾಲಾ ರಸ್ತೆ. ಈ ರಸ್ತೆಯ ಮೂಲಕ ಪೂರ್ವ, ಉತ್ತರ ಹಾಗೂ ಪಶ್ಚಿಮದ ಗಡಿ ಭಾಗಗಳನ್ನು ಬೆಸೆಯಲು ಮುಂದಾಗಿದ್ದಾರೆ.
ಏನಿದು ಭಾರತಮಾಲಾ ರಸ್ತೆ..?
ಭಾರತದ ಗಡಿ ಉದ್ದದಲ್ಲೂ ನಿರ್ಮಾಣವಾಗುವ ರಸ್ತೆ ಯೋಜನೆ ಇದು. ಗುಜರಾತ್’ನಿಂದ ಆರಂಭವಾಗುವ ಈ ರಸ್ತೆ ರಾಜಸ್ಥಾನ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರಪ್ರದೇಶ, ಬಿಹಾರ. ಸಿಕ್ಕಿಂ, ಅಸ್ಸಾಂ, ಅರುನಾಚಲ ಪ್ರದೇಶ, ಭಾರತ ಹಾಗೂ ಮಯನ್ಮಾರ್ ಗಡಿ ಮೂಲಕ ಸಾಗಿ ಮಣಿಪುರ-ಮಿಜೋರಾಂ ತಲುಪಲಿದೆ. ಯೋಜನೆ ಪೂರ್ಣಗೊಂಡ ಬಳಿಕ ಇಡೀ ರಸ್ತೆಯು ಮಾಲೆಯ ರೀತಿಯಲ್ಲಿ ಕಾಣುತ್ತದೆ. ಈ ಕಾರಣದಿಂದಾಗಿ ಭಾರತಮಾಲಾ ಎಂದು ಹೆಸರಿಡಲಾಗಿದೆ.
ಈ ಯೋಜನೆಗೆ 14 ಸಾವಿರ ಕೋಟಿ ರೂ. ಖರ್ಚು ಆಗಲಿದೆ ಎಂದು ಅಂದಾಜಿಸಲಾಗಿದೆ. ದಕ್ಷಿಣ ಭಾರತದ ಕರಾವಳಿ ನಗರಗಳನ್ನು ಬೆಸೆಯಲು ನಿರ್ಮಿಸಲು ಉದ್ದೇಶಿಸಿರುವ ‘ಸಾಗರ ಮಾಲಾ’ ಯೋಜನೆ ಜೊತೆ ಸಂಪರ್ಕಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ಯೋಜನೆಗೆ ಸಂಬಂಧಿಸಿದ ಎಲ್ಲ ಅನುಮತಿಗಳು ದೊರೆತಿದ್ದು, ಈ ವರ್ಷದ ಅತ್ಯಂಕ್ಕೆ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
ಇದರಿಂದ ಆಗುವ ಪ್ರಯೋಜನೆಗಳೇನು..?
> ಈ ರಸ್ತೆಯಿಂದಾಗಿ ಚೀನಾಗೆ ಪಾಠ ಕಲಿಸಿದಂತಾಗುತ್ತದೆ. ಏಕೆಂದರೆ ಚೀನಾ ಈಗಾಗಲೇ ಗಡಿಯಲ್ಲಿ ಉತ್ತಮ ರಸ್ತೆ ಹೊಂದಿದೆ. ಭಾರತವೂ ರಸ್ತೆ ನಿರ್ಮಿಸಿದರೆ ಚೀನಾಕ್ಕೆ ಉತ್ತರ ನೀಡಲು ಹಾಗೂ ಗಡಿಯಲ್ಲಿ ಸಂಪರ್ಕ ಸುಲಭವಾಗುತ್ತದೆ.
> ಯುದ್ಧದ ಸಂದರ್ಭದಲ್ಲಿ ಗಡಿಗೆ ಸಮರ ಸಾಮಗ್ರಿ ಹೊತ್ತೊಯ್ಯಲು ಹಾಗೂ ಯೋಧರನ್ನು ಸಾಗಿಸಲು ಬಳಸಲು ಕೆಟ್ಟದಾಗಿವೆ. ಈ ಯೋಜನೆಯಿಂದಾಗಿ ಸಂಚಾರ ಸುಲಭವಾಗಲಿದೆ.
> ರಸ್ತೆ ಅಭಿವೃದ್ಧಿಯಾದರೆ ಗಡಿಯಲ್ಲಿ ವ್ಯಾಪಾರ ಚಟುವಟಿಕೆ ವೃದ್ಧಿಯಾಗುತ್ತದೆ. ಆರ್ಥಿಕ ಚಟುವಟಿಕೆಗಳು ಗರಿಗೆದರುತ್ತದೆ.
ಒಟ್ಟಿನಲ್ಲಿ ಈ ಭಾರತಮಾಲಾ ರಸ್ತೆ ದೇಶದ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಕೇಂದ್ರ ರಸ್ತೆ ಇಲಾಖೆ ಕಾರ್ಯದರ್ಶಿ ವಿಜಯ್ ಛಿಬ್ಬರ್ ತಿಳಿಸಿದ್ದಾರೆ.