Tuesday, 5 April 2016

ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಗ್ರೂಪ್ "ಸಿ" ತಾಂತ್ರಿಕೇತರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಪತ್ರಿಕೆಗಳು ವಸ್ತುನಿಷ್ಠ ಬಹು ಆಯ್ಕೆ ಮಾದರಿಯಲ್ಲಿದ್ದು , ಋಣಾತ್ಮಕ ಮೌಲ್ಯಮಾಪನವಿರುತ್ತದೆ.ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ ಕಳೆಯಲಾಗುವುದು.ಮೊದಲನೇ ಪತ್ರಿಕೆಯು ಸಾಮಾನ್ಯ ಜ್ಞಾನ ಕುರಿತಾಗಿದ್ದು , 100 ಪ್ರಶ್ನೆಗಳು,ಪ್ರತಿ ಪ್ರಶ್ನೆಗೆ ಒಂದು ಅಂಕ.ಒಂದೂವರೆ ಗಂಟೆ ಅವಧಿಯದ್ದಾಗಿರುತ್ತದೆ. ಎರಡನೇ ಪತ್ರಿಕೆಯಲ್ಲಿ 100 ಪ್ರಶ್ನೆಗಳಿದ್ದು , ಪ್ರತಿ ಪ್ರಶ್ನೆಗೆ ಒಂದು ಅಂಕವಿರುತ್ತದೆ. ಎರಡು ಗಂಟೆ ಅವಧಿಯದ್ದಾಗಿರುತ್ತದೆ. ಎರಡನೇ ಪತ್ರಿಕೆಯು ಮೂರು ಭಾಗಗಳನ್ನು ಒಳಗೊಂಡಿದೆ.
ಸಾಮಾನ್ಯ ಕನ್ನಡ (35 ಅಂಕಗಳು) , ಸಾಮಾನ್ಯ ಇಂಗ್ಲಿಷ್ (35 ಅಂಕಗಳು) ಮತ್ತು ಗಣಕಯಂತ್ರ ಜ್ಞಾನ (30 ಅಂಕಗಳು).

ಪ್ರಥಮ ಪತ್ರಿಕೆಯಲ್ಲಿ ಸಾಮಾನ್ಯ ಜ್ಞ‌ಾನಕ್ಕೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ. ಈ ಪತ್ರಿಕೆಗೆ ಓದಬೇಕಾದ ಪುಸ್ತಕಗಳು:

* ಪ್ರಚಲಿತ ಘಟನೆಗಳಿಗಾಗಿ ಪ್ರತಿದಿನ ದಿನಪತ್ರಿಕೆಗಳನ್ನು ಓದಿ,ಆಯಾ ದಿನದ ಮುಖ್ಯ ಸಂಗತಿಗಳನ್ನು ಬರೆದಿಟ್ಟುಕೊಳ್ಳುವುದು.ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಒಂದೆರಡು ಮಾಸಪತ್ರಿಕೆಗಳನ್ನು ಓದುವುದು.

* ಸಾಮಾನ್ಯ ವಿಜ್ಞಾನ ‌ಕ್ಕಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಜ್ಞಾನ ಪುಸ್ತಕಗಳನ್ನು,, SMV ಗೋಲ್ಡ್ ಪ್ರಕಾಶನದ  'ಸಾಮಾನ್ಯ ವಿಜ್ಞಾನ' ‌ಪುಸ್ತಕವನ್ನು ಬಾಲರಾಜು ಅವರ 'ತಂತ್ರಜ್ಞಾನ' ‌ಪುಸ್ತಕ ಓದಬೇಕು.

*ಪರಿಸರ ಸಂಬಂಧಿತ ವಿಷಯಕ್ಕೆ  ರಂಗನಾಥ್ ಅವರ 'ಪರಿಸರ ಅಧ್ಯಯನ' ಪುಸ್ತಕ
* ಭೂಗೋಳಶಾಸ್ತ್ರಕ್ಕಾಗಿ ರಂಗನಾಥ್ ಅವರ ಪುಸ್ತಕಗಳು
* ಭಾರತೀಯ ಸಮಾಜದ ಅಧ್ಯಯನಕ್ಕೆ ಚ.ನ.ಶಂಕರರಾವ್ ಅವರ 'ಭಾರತೀಯ ಸಮಾಜ' ಪುಸ್ತಕ
* ಭಾರತದ ಇತಿಹಾಸ - ಕೆ. ಸದಾಶಿವ ಅವರ ಪುಸ್ತಕ
*ಕರ್ನಾಟಕದ ಇತಿಹಾಸ - ಫಾಲಾಕ್ಷ ಅವರ ಪುಸ್ತಕ 
*ಸಾಮಾನ್ಯ ಮನೋಸಾಮರ್ಥ್ಯ ವಿಷಯದ ಅಭ್ಯಾಸಕ್ಕಾಗಿ
ಗುರುರಾಜ ಬುಲಬುಲೆ ಅವರ ಮಾನಸಿಕ ಸಾಮರ್ಥ್ಯ ಪುಸ್ತಕ ಮತ್ತು ಸ್ಪರ್ಧಾಚೈತ್ರದ ಪ್ರಕಾಶನದ ಮನೋಸಾಮರ್ಥ್ಯ ಪುಸ್ತಕ
* ಕರ್ನಾಟಕದ ಆರ್ಥಿಕತೆ ಕುರಿತು ತಿಳಿಯಲು ನೇ.ತಿ.ಸೋಮಶೇಖರ್ ಬರೆದಿರುವ ಪುಸ್ತಕ ಮತ್ತು ರಾಜ್ಯ ಸರ್ಕಾರದ 'ಕರ್ನಾಟಕ ಆರ್ಥಿಕ ಸಮೀಕ್ಷೆ' ಯನ್ನು ಓದಬೇಕು.
* ಭಾರತದ ಸಂವಿಧಾನ ಮತ್ತು ರಾಜಕೀಯದ ಅಧ್ಯಯನಕ್ಕೆ ಪಿ.ಎಸ್. ಗಂಗಾಧರ್ ಅವರ ಪುಸ್ತಕ
* ಭಾರತದ ಆರ್ಥಿಕ ವ್ಯವಸ್ಥೆ ಕುರಿತಾಗಿ – ಹೆಚ್ಆರ್ಕೆ
ಅವರ ಪುಸ್ತಕ ಮತ್ತುಅರ್ಥಶಾಸ್ತ್ರದ ಕುರಿತಾದ ಸ್ಪರ್ಧಾಚೈತ್ರದ ಪುಸ್ತಕಗಳು
*ಗ್ರಾಮೀಣಾಭಿವೃದ್ಧಿ ಕುರಿತು ಹೆಚ್.ಆರ್.ಕೃಷ್ಣಯ್ಯಗೌಡ ಅವರ ಪುಸ್ತಕ ಮತ್ತು ರಾಜ್ಯ ಸರ್ಕಾರದ 'ಕರ್ನಾಟಕ ವಿಕಾಸ' ಮಾಸಪತ್ರಿಕೆಯನ್ನು ಓದಬೇಕು.
* ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಬಹಳ ವಿಷಯಗಳನ್ನು.ಪಠ್ಯಕ್ರಮದಲ್ಲಿ ಅಳವಡಿಸಿರುವುದರಿಂದ ರಾಜ್ಯ ಗೆಜೆಟಿಯರ್ ಇಲಾಖೆಯ 'ಕರ್ನಾಟಕ ಕೈಪಿಡಿ' ಓದುವುದು ಒಳ್ಳೆಯದು.
     
    ಎರಡನೇ ಪತ್ರಿಕೆಗೆ ಓದಬೇಕಾದ ಪುಸ್ತಕಗಳು:
1. ಸಾಮಾನ್ಯ ಕನ್ನಡ:
     * ಕನ್ನಡ ಮಧ್ಯಮ ವ್ಯಾಕರಣ - ತೀ.ನಂ.ಶ್ರೀಕಂಠಯ್ಯ

     * ಸಮಗ್ರ ಹೊಸಗನ್ನಡ ವ್ಯಾಕರಣ -ಆರ್.ಎಸ್.ಅರಳಗುಪ್ಪಿ

2.ಸಾಮಾನ್ಯ ಇಂಗ್ಲಿಷ್ 
     * ‌Highschool Grammer and Composition-          
        Wren and Martin
      * General English - ಮಾಲಿ ಮದ್ದಣ್ಣ
     
3. ಗಣಕಯಂತ್ರ ಜ್ಞಾನ(‌Computer Knowledge):

    * ಕಂಪ್ಯೂಟರ್ ಅನ್ವಯಗಳು - ಪ್ರೊ.ಶಾರದಾ  ಭಟ್ ಮತ್ತು                ಪ್ರೊ.ಜಯಕರ ಭಂಡಾರಿ 
   ಈ ಭಾಗಕ್ಕೆ 'ಕಂಪ್ಯೂಟರ್ ಅನ್ವಯಗಳು' ಹೆಸರಿನ ಇತರೆ ಯಾವುದೇ ಪುಸ್ತಕಗಳನ್ನು ಓದಬಹುದು. ಈ ಭಾಗದ ಪ್ರಶ್ನೆಗಳಿಗೆ ಉತ್ತರಿಸಲು ಕಂಪ್ಯೂಟರ್ ನ ‌Practical Knowledge ಇರುವುದು ಅಗತ್ಯ.