Wednesday, 6 May 2015

Digital India:

ಡಿಜಿಟಲ್ ಇಂಡಿಯಾ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ದೇಶವನ್ನು ಭವಿಷ್ಯತ್ತಿನ ಜ್ನಾನವಲಯಕ್ಕೆ ತಕ್ಕಂತೆ ರೂಪಿಸುವ ಯೋಜನೆ. ಇದು ಮಾಹಿತಿ ತಂತ್ರಜ್ನಾನದ ಪೂರಕ ಬೆಳವಣಿಗೆಯೊಂದಿಗೆ ದೇಶವನ್ನು ಸಂಪೂರ್ಣ ತಂತ್ರಜ್ನಾನಯುಕ್ತವನ್ನಾಗಿಸಲಿದೆ.

ಡಿಜಿಟಲ್ ಇಂಡಿಯಾ ಸರ್ಕಾರದ ಪ್ರತಿ ಇಲಾಖೆಯನ್ನು ಒಳಗೊಂಡು, ಸಂಪೂರ್ಣ ಅಧುನಿಕರಣ, ತ್ವರಿತ ಸೇವೆಯ ಅವಕಾಶ ಕಲ್ಪಿಸುವ ಉದ್ದೇಶ ಹೊಂದಿದೆ. ಡಿಜಿಟಲ್ ಇಡಿಯಾ ಮಹತ್ವಾಕಾಂಕ್ಷಿ ಯೋಜನೆಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, 1 ಲಕ್ಷ ಕೋಟಿ ರೂಗಳ ಇ ಯೋಜನೆ , ಇಡೀ ದೇಶವನ್ನು ಡಿಜಿಟಲೀಕರಣ ಮಾಡಲಿದೆ.

ಮುಖ್ಯವಾಗಿ ಮೂರು ಭವಿಷ್ಯದ ದೃಷ್ಟಿಕೋನಗಳನ್ನು ಇದುಹೊಂದಿದೆ. ಪ್ರತಿ ಪ್ರಜೆಗೂ ಡಿಜಿಟಲ್ ಮೂಲಭೂತ ಸೌಕರ್ಯ, ಆಡಳಿತ ಮತ್ತು ಸೇವೆ ಹಾಗೂ ನಾಗರಿಕರ ಡಿಜಿಟಲ್ ಸಬಲೀಕರಣ.
ಪ್ರತಿ ಪ್ರಜೆಗೂ ಡಿಜಿಟಲ್ ಮೂಲಭೂತ ಸೌಕರ್ಯ

* ಹೈಸ್ಪೀಡ್ ಇಂತರ್ ನೆಟ್ ಸೌಕರ್ಯ
* ಡಿಜಿಟಲ್ ಗುರುತು, (ವಿಶಿಷ್ಟ ಗುರುತಿನ ಚೀಟಿ, ಆನ್ ಲೈನ್ ಗುರುತು)
* ಸಾಮಾನ್ಯ ಗ್ರಾಹಕ ಸೇವಾ ಕೇಂದ್ರಗಳು
* ಸಾರ್ವಜನಿಕ ಕ್ಲೌಡ್ ತಂತ್ರಜ್ನಾನ ವ್ಯವಸ್ಥೆ
* ದೇಶದಲ್ಲಿ ಅತ್ಯಂತ ಸುರಕ್ಷತೆ ಹೊಂದಿರುವ ಸೈಬರ್ ವ್ಯವಸ್ಥೆ

ಆಡಳಿತ ಮತ್ತು ಸೇವೆ:

ಸರ್ಕಾರದ ಎಲ್ಲಾ ಇಲಾಖೆ, ಕಛೇರಿಗಳಲ್ಲಿ ತಂತ್ರಜ್ನಾನದ ಜತೆಗೆ ಪ್ರಜೆಗಳಿಗೆ ಅನುಕೂಲಕರವಾಗುವರೀತಿ ಸರ್ಕಾರದ ಸೇವೆ ಕುರಿತು ಮೊಬೈಲ್, ಆನ್ ಲೈನ್ ಮೂಲಕ ಮಾಹಿತಿ. ಇಅದರೊಂದಿಗೆ ಹಣಕಾಸು ವ್ಯವಹಾರ, ನಗದು ರಹಿತ ವ್ಯವಹಾರಗಳು, ಪ್ರದೇಶಗಳ ಸಂಪೂರ್ಣ ಮಾಹಿತಿಯನ್ನೊಳಗೊಂಡಿರುವ ಜಿಯೋಗಾಕ್ ಇನ್ಫಾರ್ಮೇಶನ್ ಸಿಸ್ಟಂ ಜಾರಿ. 

ಇಡೀ ಆಡಳಿತವನ್ನು ಚುರುಕಾಗಿಸಿ ಕ್ಷಿಪ್ರ ಸೇವೆ, ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಇದರ ಮುಖ್ಯಗುರಿ. ಸರ್ಕಾರ ಇಲಾಖೆಗಳ ನಡುವಿನ ಕೆಲಸಕ್ಕಾಗಿ ಕಡತಗಳ ತ್ವರಿತ ವಿಲೇವ್ಚಾರಿ ಇತ್ಯಾದಿಗಳು ತಂತ್ರಜ್ನಾನದ ಮೂಲಕವಾಗಲಿದ್ದು, ಇದರೊಂದಿಗೆ ನಾಗರಿಕರ ದೂರುಗಳಿಗೆ ಉತ್ತರಿಸುವುದು.

ನಾಗರಿಕರ ಡಿಜಿಟಲ್ ಸಬಲೀಕರಣ:

* ಸರ್ವವ್ಯಾಪಿ ಡಿಜಿಟಲ್ ಸಾಕ್ಷರತೆ
* ಸರ್ವವ್ಯಾಪಿ ಪಡೆಯಬಹುದಾದ ಡಿಜಿಟಲ್ ಸಂಪನ್ಮೂಲಗಳು
* ಎಲ್ಲಾ ದಾಖಲೆ, ಪ್ರಯಾಣ ಬ್ಪತ್ರಗಳು ಕ್ಲೌಡ್ ತಂತ್ರಜ್ನಾನದಲ್ಲಿ ಲಭ್ಯ
* ಸರ್ಕಾರದ ಕಾರ್ಯಕ್ರಮಗಳಲ್ಲಿ ಕ್ಲೌಡ್ ಮೂಲಕ ನಾಗರಿಕರ ಭಾಗೀದಾರಿಕೆ

ಪ್ರಮುಖ ಗುರಿಗಳು:

* ಬ್ರ್ಯಾಡ್ ಬ್ಯಾಂಡ್ ಹೈವೆ
* ಸರ್ವತ್ರ ಮೊಬೈಲ್ ಸಂಪರ್ಕ
* ಸಾರ್ವಜನಿಕ ಇಂತರ್ನೆಟ್
* ಕಲಿಕೆ/ಬಳಕೆ ಇತ್ಯಾದಿ
* ಇ ಆಡಳಿತ- ತಂತ್ರಜ್ನಾನ ಮುಖಾಂತರ ಸರ್ಕಾರಿ ಸೇವೆಗಳ ಸುಧಾರಣೆ
* ಎಲೆಕ್ಟ್ರಾನಿಕ್ಸ್ ವಸ್ತುಗಳ ಉತ್ಪಾದನೆ
* ಮಾಹಿತಿ ತಂತ್ರಜ್ನಾನ ಕ್ಷೆತ್ರದಲ್ಲಿ ಉದ್ಯೋಗ ಸೃಷ್ಠಿ
* ಅವಧಿಪೂರ್ವ ಕೊಯ್ಲು ತಂತ್ರಜ್ನಾನ

ಡಿಜಿಟಲ್ ಇಂಡಿಯಾ ಮೂಲಕ 2019ರ ವೇಳೆಗೆ ಪೂರೈಸಲಾಗುವಂತೆ ಉದ್ದೇಶಗಳನ್ನು ಹಾಕಿಕೊಳ್ಳಲಾಗಿದೆ.

2.5 ಲಕ್ಷಗ್ರಾಮಗಳಿಗೆ ಬ್ರಾಡ್ ಬ್ಯಾಂಡ್ ಸಂಪರ್ಕ, ಸಾರ್ವಜನಿಕ ಮೊಬೈಲ್ ಸಂಪರ್ಕ, 4 ಲಕ್ಷ ಸಾರ್ವಜನಿಕ ಅಂತರ್ಜಾಲ ಬಳಕೆ ಕೇಂದ್ರಗಳು, 1.7 ಕೋಟಿ ಮಂದಿಗೆ ಮಾಹಿತಿ ತಂತ್ರಜ್ನಾನ ತರಬೇತಿ, ಟೆಲಿಕಾಂ, ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಉದ್ಯೋಗ, ಸರ್ಕಾರದಲ್ಲಿ ಸಂಪೂರ್ಣ ಇ ಆಡಳಿತ ಮತ್ತು ಸೇವೆ, ಐಟಿ ಬಳಕೆ ಮತ್ತು ಸೇವೆಯಲ್ಲಿ ಭಾರತವೇ ಅಗ್ರಗಣ್ಯವಾಗುವ ಗುರಿ, ಡಿಜಿಟಲ್ ಸುಧಾರಣೆ ಡಿಜಿಟಲ್ ಇಂದಿಯಾದ ಸಧನೆಗಳಾಗಿವೆ.

ಮಹತ್ವಾಕಾಂಕ್ಷಿ ಡಿಜಿಟಲ್ ಇಂಡಿಯಾಕ್ಕಾಗಿ 1 ಲಕ್ಷ ಕೋಟಿ ರೂ. ಹಣ ನಿಗದಿಯಾಗಿದೆ. ಇದರೊಂದಿಗೆ ಹೆಚ್ಚುವರಿಯಾಗಿ 13 ಸಾವಿರ ಕೋಟಿ ಹಣ ನಿಗದಿ ಮಾಡಲಾಗಿದೆ. ನರೇಂದ್ರ ಮೋದಿಯವರ ಈ ಮಹತ್ವಾಕಾಂಕ್ಷಿ ಯೋಜನೆ ಸಮರ್ಪಕವಾಗಿ ಕಾರ್ಯರೂಪಕ್ಕೆ ಬಂದಲ್ಲಿ ದೇಶದಲ್ಲಿ ಡಿಜಿಟಲ್ ಇಂಡಿಯಾ ಹೊಸ ಕ್ರಾಂತಿಮಾಡಲಿದೆ.

 

Sunday, 3 May 2015

KAS MAIN'S, CLASSES FOR RURAL DEVELOPMENT SUBJECT, CONDUCTED BY Dr.NARAYANA RAJ.N, SUBJECT EXPERT AND SENIOR FACULTY. ATTEND WORKSHOP AND REGULAR CLASSES (ENGLISH MEDIUM) FROM 4th MAY 2015,  AT6.00 PM AT PADMA COLLEGE,  #24/39, 1st  FLOOR, 4th STAGE, NEAR KHB  TRAFFIC  SIGNAL (INDIAN OIL PETROL BUNK), MAGADI ROAD ,BASAVESHWARA NAGAR, BANGALORE 560079. 
CONTACT; 98451 32982.